Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ನೂತನ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

BIG NEWS : ಸಿಎಂ ಡಿಕೆ ಶಿವಕುಮಾರ್ ಜೊತೆಗೆ ರಾಮಲಿಂಗಾರೆಡ್ಡಿ ಸಂಧಾನ ವಿಫಲ : ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ!

ಸಿನಿಮಾ ಟೆಂಟ್‌ನಿಂದ ಹಿಡಿದು ಮಲ್ಟಿಪ್ಲೆಕ್ಸ್‌ ಮಾಲ್‌ಗಳವರೆಗೆ: ಸಿಎಂ ಡಿಕೆಶಿ ಮತ್ತು ಸ್ಯಾಂಡಲ್‌ವುಡ್ ನಡುವೆ ಅಪೂರ್ವ ನಂಟು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸಿಎಂ ಡಿಕೆ ಶಿವಕುಮಾರ್ ಜೊತೆಗೆ ರಾಮಲಿಂಗಾರೆಡ್ಡಿ ಸಂಧಾನ ವಿಫಲ : ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ!
KARNATAKA

BIG NEWS : ಸಿಎಂ ಡಿಕೆ ಶಿವಕುಮಾರ್ ಜೊತೆಗೆ ರಾಮಲಿಂಗಾರೆಡ್ಡಿ ಸಂಧಾನ ವಿಫಲ : ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ!

By ಸುರೇಶ್‌

ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯ ಕಿಚ್ಚು ಜೋರಾಗಿದೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ನಿನ್ನೆ 13 ಜನ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಚಿವರ ನಡುವೆ ಖಾತೆಗಾಗಿ ಪೈಪೋಟಿ ಹಾಗೂ ಅಸಮಾಧಾನಗಳು ಸ್ಪೋಟಗೊಳ್ಳಲು ಆರಂಭವಾಗಿದ್ದು, ಸದ್ಯ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನಡೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ನೂತನ ಸಚಿವ ಸಂಪುಟದಲ್ಲಿ ತಮಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದ್ದ ಜಲಸಂಪನ್ಮೂಲ ಖಾತೆಯ ಬಗ್ಗೆ ರಾಮಲಿಂಗಾರೆಡ್ಡಿ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ನನಗೆ ಜಲಸಂಪನ್ಮೂಲ ಇಲಾಖೆ ಬೇಡವೇ ಬೇಡ, ಅದರ ಬದಲಿಗೆ ಬೆಂಗಳೂರು ನಗರಾಭಿವೃದ್ಧಿ (ಬೆಂಗಳೂರು ಸಿಟಿ ಡೆವಲಪ್‌ಮೆಂಟ್) ಖಾತೆಯನ್ನೇ ನೀಡಬೇಕು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಎದುರು ಅವರು ಕಟ್ಟುನಿಟ್ಟಿನ ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಈ ಖಾತೆ ಅಸಮಾಧಾನವನ್ನು ಶಮನಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರೊಂದಿಗೆ ತುರ್ತು ಸಂಧಾನ ಸಭೆ ನಡೆಸಿದರು. ಆದರೆ, ಈ ಸಂಧಾನ ಸಭೆಯು ಸಂಪೂರ್ಣವಾಗಿ ವಿಫಲಗೊಂಡಿದೆ. ಸಿಎಂ ನೀಡಿದ ಯಾವುದೇ ಭರವಸೆ ಹಾಗೂ ಮನವೊಲಿಕೆಗೆ ರಾಮಲಿಂಗಾರೆಡ್ಡಿ ಅವರು ಜಗ್ಗಿಲ್ಲ. ತಮಗೆ ಬೇಕಾದ ಖಾತೆ ಸಿಗದ ಹಿನ್ನೆಲೆಯಲ್ಲಿ ಅವರು ತೀವ್ರವಾಗಿ ಮನಸ್ತಾಪ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಂಧಾನ ಸಭೆಯ ಅವಧಿಯಲ್ಲಿ ರಾಮಲಿಂಗಾರೆಡ್ಡಿ ಅವರು ಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಜಲಸಂಪನ್ಮೂಲ ಇಲಾಖೆಗೂ ನನಗೂ ಏನು ಸಂಬಂಧ? ನಾನು ಬೆಂಗಳೂರಿನ ರಾಜಕಾರಣಿ, ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವನು. ಹಾಗಾಗಿ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ಕೊಡಬೇಕು” ಎಂದು ಅವರು ನೇರವಾಗಿಯೇ ಸಭೆಯಲ್ಲಿ ವಾದಿಸಿದ್ದಾರೆ. ಆದರೆ ಸಿಎಂ ಇದಕ್ಕೆ ಸಮ್ಮತಿಸದಿದ್ದಾಗ ಪರಿಸ್ಥಿತಿ ಮತ್ತಷ್ಟು ಕೈಮೀರಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮಾಧಾನದ ಮಾತುಗಳಿಗೆ ಒಪ್ಪದ ಸಚಿವ ರಾಮಲಿಂಗಾರೆಡ್ಡಿ ಅವರು, “ನನಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡದಿದ್ದರೆ ನಾನು ಸಚಿವನಾಗಿ ಮುಂದುವರಿಯುವುದಿಲ್ಲ. ಕೇವಲ ಸಾಮಾನ್ಯ ಶಾಸಕನಾಗಿಯೇ ಉಳಿಯುತ್ತೇನೆ” ಎಂದು ಖಡಕ್ ಆಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ತೀವ್ರ ಅಸಮಾಧಾನದೊಂದಿಗೆ ಸಂಧಾನ ಸಭೆಯ ಮಧ್ಯದಲ್ಲಿಯೇ ಎದ್ದು ಹೊರನಡೆದಿದ್ದಾರೆ. ಈ ಘಟನೆಯು ಸದ್ಯ ರಾಜ್ಯ ರಾಜಕಾರಣದಲ್ಲಿ ಹಾಗೂ ನೂತನ ಸರ್ಕಾರದ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Share. Facebook Twitter LinkedIn WhatsApp Email

Related Posts

ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ನೂತನ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

1 Min Read

ಸಿನಿಮಾ ಟೆಂಟ್‌ನಿಂದ ಹಿಡಿದು ಮಲ್ಟಿಪ್ಲೆಕ್ಸ್‌ ಮಾಲ್‌ಗಳವರೆಗೆ: ಸಿಎಂ ಡಿಕೆಶಿ ಮತ್ತು ಸ್ಯಾಂಡಲ್‌ವುಡ್ ನಡುವೆ ಅಪೂರ್ವ ನಂಟು

2 Mins Read

BIG NEWS : ನನಗೆ ‘KPCC’ ಸ್ಥಾನ ಕೈ ತಪ್ಪಿದ್ದಲ್ಲ, ಅದು ಮೊದಲೇ ಕ್ಲಿಯರ್ ಆಗಿತ್ತು : ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

1 Min Read
Recent News

ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ನೂತನ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

BIG NEWS : ಸಿಎಂ ಡಿಕೆ ಶಿವಕುಮಾರ್ ಜೊತೆಗೆ ರಾಮಲಿಂಗಾರೆಡ್ಡಿ ಸಂಧಾನ ವಿಫಲ : ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ!

ಸಿನಿಮಾ ಟೆಂಟ್‌ನಿಂದ ಹಿಡಿದು ಮಲ್ಟಿಪ್ಲೆಕ್ಸ್‌ ಮಾಲ್‌ಗಳವರೆಗೆ: ಸಿಎಂ ಡಿಕೆಶಿ ಮತ್ತು ಸ್ಯಾಂಡಲ್‌ವುಡ್ ನಡುವೆ ಅಪೂರ್ವ ನಂಟು

BREAKING : ‘TCS’ ಬಳಿಕ ವಿಪ್ರೊದಲ್ಲೂ ಬಲವಂತವಾಗಿ ಮತಾಂತರ : ಮಾಜಿ ಮಹಿಳಾ ಉದ್ಯೋಗಿ ಗಂಭೀರ ಆರೋಪ!

State News
KARNATAKA

ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ನೂತನ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ನೂತನ ಸಚಿವ…

BIG NEWS : ಸಿಎಂ ಡಿಕೆ ಶಿವಕುಮಾರ್ ಜೊತೆಗೆ ರಾಮಲಿಂಗಾರೆಡ್ಡಿ ಸಂಧಾನ ವಿಫಲ : ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ!

ಸಿನಿಮಾ ಟೆಂಟ್‌ನಿಂದ ಹಿಡಿದು ಮಲ್ಟಿಪ್ಲೆಕ್ಸ್‌ ಮಾಲ್‌ಗಳವರೆಗೆ: ಸಿಎಂ ಡಿಕೆಶಿ ಮತ್ತು ಸ್ಯಾಂಡಲ್‌ವುಡ್ ನಡುವೆ ಅಪೂರ್ವ ನಂಟು

BIG NEWS : ನನಗೆ ‘KPCC’ ಸ್ಥಾನ ಕೈ ತಪ್ಪಿದ್ದಲ್ಲ, ಅದು ಮೊದಲೇ ಕ್ಲಿಯರ್ ಆಗಿತ್ತು : ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.