ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು ಈ ಒಂದು ಚರ್ಚೆಯ ವೇಳೆ ರಾಹುಲ್ ಗಾಂಧಿ ನಿಮ್ಮ ಪತ್ನಿಯನ್ನು ರಾಜ್ಯಸಭೆಗೆ ಕಳುಹಿಸಿ ಎಂದು ಆಫರ್ ನೀಡಿದ್ದರು ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಹೌದು ನಿಮಗಾಗದಿದ್ದರೆ ನಿಮ್ಮ ಪತ್ನಿ ಅವರನ್ನು ರಾಜ್ಯಸಭೆಗೆ ಕಳುಹಿಸಿ ಅಂತ ರಾಹುಲ್ ಗಾಂಧಿ ಹೇಳಿದ್ದರು. ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ತೀವ್ರ ಒತ್ತಡ ಹೇರಿದ್ದರು.ರಾಷ್ಟ್ರೀಯ ರಾಜಕಾರಣಕ್ಕೆ ಆಗಮಿಸುವಂತೆ ರಾಹುಲ್ ಗಾಂಧಿ ಹೇರಿದ್ದರು. ಆದರೆ ರಾಜ್ಯಸಭೆ ಸ್ಥಾನ ನಿರಾಕರಿಸಿದ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಇರುವುದಾಗಿ ಸ್ಪಷ್ಟಪಡಿಸಿದ್ದರು.
ಪತ್ನಿಗೂ ರಾಜ್ಯಸಭಾ ಸ್ಥಾನ ನೀಡುವುದಕ್ಕೆ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಈ ಹೊರ ಜಗತ್ತಿಗೆ ನನ್ನ ಪತ್ನಿ ಬಂದಿಲ್ಲ ಹೀಗಾಗಿ ನನ್ನ ಪತ್ನಿ ರಾಜಕೀಯಕ್ಕೆ ಬರುವ ಮಾತೇ ಇಲ್ಲ.ನನ್ನ ಪತ್ನಿ ರಾಜ್ಯ ಸಭೆಯ ಪ್ರವೇಶದ ಮಾತೆ ಇಲ್ಲ ಎಂದು ಕಡ್ಡಿ ಮುರಿದಂತೆ ಸಿದ್ದರಾಮಯ್ಯ ರಾಹುಲ್ ಗಾಂಧಿ ಆಫರ್ ತಿರಸ್ಕರಿಸಿದ್ದರು. ಹಿಂದುಳಿದ ಸಮಾಜದವರಿಗೆ ರಾಜ್ಯಸಭಾ ಸ್ಥಾನ ನೀಡಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.








