Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಜ್ಯ ಸರ್ಕಾರದಿಂದ ಮೂವರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transfer

ಭಾರತ-ಅಮೆರಿಕ ವಾಣಿಜ್ಯ ಮಾತುಕತೆ: ಜೂನ್ 1ರಿಂದ 4ರವರೆಗೆ ಭಾರತಕ್ಕೆ ಅಮೆರಿಕದ ಉನ್ನತ ಮಟ್ಟದ ನಿಯೋಗ ಭೇಟಿ

ಸಾಗರದಲ್ಲಿ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ ಪತ್ನಿ; ಕೊಲೆ ಕೃತ್ಯ ಮುಚ್ಚಿಡಲು ಹೋಗಿ ಸಿಕ್ಕಿಬಿದ್ದ ಕಿರಾತಕರು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ ಪತ್ನಿ; ಕೊಲೆ ಕೃತ್ಯ ಮುಚ್ಚಿಡಲು ಹೋಗಿ ಸಿಕ್ಕಿಬಿದ್ದ ಕಿರಾತಕರು!
KARNATAKA

ಸಾಗರದಲ್ಲಿ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ ಪತ್ನಿ; ಕೊಲೆ ಕೃತ್ಯ ಮುಚ್ಚಿಡಲು ಹೋಗಿ ಸಿಕ್ಕಿಬಿದ್ದ ಕಿರಾತಕರು!

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಟೌನ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

ಚೂರಿಯಿಂದ ಇರಿದು ಕೊಲೆ ಮಾಡಿದ ಮುಖ್ಯ ಆರೋಪಿ ಮಂಜು ಯಾನೆ ಟೀಪುಡಿ ಮಂಜು ಹಾಗೂ ಕೊಲೆ ಕೃತ್ಯವನ್ನು ಕೌಟಂಬಿಕ ಕಲಹವೆಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಮೃತನ ಪತ್ನಿ ಚೈತ್ರಾ ಬಂಧಿತ ಆರೋಪಿಗಳಾಗಿದ್ದಾರೆ. ಸಾಗರ ಪಟ್ಟಣದ ಜೆ.ಪಿ. ನಗರದ ನಿವಾಸಿ ಪರಶುರಾಮ್ (40) ಕೊಲೆಯಾದ ದುರ್ದೈವಿ. ಈ ಕುರಿತಂತೆ ಮೇ 26 ರಂದು ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದೆ.

ಅನೈತಿಕ ಸಂಬಂಧವೇ ಕೊಲೆಗೆ ಕಾರಣ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಮಂಜು ಹಾಗೂ ಚೈತ್ರಾ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಷಯ ಪರಶುರಾಮ್‌ಗೆ ತಿಳಿದು, ದಂಪತಿ ನಡುವೆ ಆಗಾಗ್ಗೆ ಭೀಕರ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಮೇ 15 ರ ರಾತ್ರಿ ಕೂಡ ಪರಶುರಾಮ್ ಹಾಗೂ ಚೈತ್ರಾ ನಡುವೆ ಕೌಟಂಬಿಕ ಜಗಳ ಏರ್ಪಟ್ಟಿದೆ. ಈ ವಿಷಯ ತಿಳಿದು ಚೈತ್ರಾಳ ಪ್ರಿಯಕರ ಮಂಜು ತಕ್ಷಣವೇ ಅವರ ಮನೆಗೆ ಧಾವಿಸಿದ್ದು, ಪರಶುರಾಮ್ ಜೊತೆ ಗಲಾಟೆಗೆ ಇಳಿದಿದ್ದಾನೆ.

ಕುಡುಗೋಲು-ಚಾಕುವಿನಿಂದ ಜಗಳ, ಚಿಕಿತ್ಸೆ ಫಲಿಸದೆ ಸಾವು

ಜಗಳ ತಾರಕಕ್ಕೇರಿದಾಗ ಪರಶುರಾಮ್ ಕುಡುಗೋಲು ಹಿಡಿದರೆ, ಆರೋಪಿ ಮಂಜು ತನ್ನ ಬಳಿಯಿದ್ದ ಚಾಕು ಹಿಡಿದು ಮುಗಿಬಿದ್ದಿದ್ದಾನೆ. ಈ ವೇಳೆ ನಡೆದ ಮಾರಾಮಾರಿಯಲ್ಲಿ ಮಂಜು ನಡೆಸಿದ ಚೂರಿ ಇರಿತದಿಂದ ಪರಶುರಾಮ್ ತೀವ್ರವಾಗಿ ರಕ್ತಸ್ರಾವಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ನೆರೆಹೊರೆಯವರು ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪರಶುರಾಮ್ ಕೊನೆಯುಸಿರೆಳೆದಿದ್ದಾರೆ.

ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪತ್ನಿ

ಕೊಲೆ ನಡೆದ ಬಳಿಕ ಪತ್ನಿ ಚೈತ್ರಾ ತನ್ನ ಪ್ರಿಯಕರನನ್ನು ರಕ್ಷಿಸಲು ಇಡೀ ಕೃತ್ಯವನ್ನು ಕೇವಲ ಕೌಟಂಬಿಕ ಜಗಳ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದಾಳೆ. ಆದರೆ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದಾಗ ಅನೈತಿಕ ಸಂಬಂಧದ ಅಸಲಿ ಸತ್ಯ ಹೊರಬಂದಿದೆ. ಚೂರಿಯಿಂದ ಇರಿದ ಆರೋಪದ ಮೇಲೆ ಮಂಜು ಹಾಗೂ ಕೃತ್ಯವನ್ನು ಮರೆಮಾಚಿದ ಆರೋಪದ ಮೇಲೆ ಚೈತ್ರಾಳನ್ನು ಸಾಗರ ಟೌನ್ ಪೊಲೀಸರು ಜೈಲಿಗಟ್ಟಿದ್ದಾರೆ.

ಎಸ್ಎಂವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲಿನ ಸಮಯ ಪರಿಷ್ಕರಣೆ

ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಹದಗೆಟ್ಟ ವ್ಯವಸ್ಥೆ: ವೈದ್ಯರ ಕೊರತೆ ನೀಗಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ!

Share. Facebook Twitter LinkedIn WhatsApp Email

Related Posts

BREAKING: ರಾಜ್ಯ ಸರ್ಕಾರದಿಂದ ಮೂವರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transfer

2 Mins Read

ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಹದಗೆಟ್ಟ ವ್ಯವಸ್ಥೆ: ವೈದ್ಯರ ಕೊರತೆ ನೀಗಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ!

2 Mins Read

ಎಸ್ಎಂವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲಿನ ಸಮಯ ಪರಿಷ್ಕರಣೆ

2 Mins Read
Recent News

BREAKING: ರಾಜ್ಯ ಸರ್ಕಾರದಿಂದ ಮೂವರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transfer

ಭಾರತ-ಅಮೆರಿಕ ವಾಣಿಜ್ಯ ಮಾತುಕತೆ: ಜೂನ್ 1ರಿಂದ 4ರವರೆಗೆ ಭಾರತಕ್ಕೆ ಅಮೆರಿಕದ ಉನ್ನತ ಮಟ್ಟದ ನಿಯೋಗ ಭೇಟಿ

ಸಾಗರದಲ್ಲಿ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ ಪತ್ನಿ; ಕೊಲೆ ಕೃತ್ಯ ಮುಚ್ಚಿಡಲು ಹೋಗಿ ಸಿಕ್ಕಿಬಿದ್ದ ಕಿರಾತಕರು!

ಗಾಜಾ ಮೇಲೆ ಇಸ್ರೇಲ್ ವಾಯುದಾಳಿ: ಹಮಾಸ್‌ನ ಹೊಸ ಮಿಲಿಟರಿ ನಾಯಕ ಹತ್ಯೆ | Israil-Hamas War

State News
KARNATAKA

BREAKING: ರಾಜ್ಯ ಸರ್ಕಾರದಿಂದ ಮೂವರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transfer

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರವು ಮೂವರು ಹಿರಿಯ ಐಎಎಸ್ (IAS) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಜಂಟಿ ಮತ್ತು…

ಸಾಗರದಲ್ಲಿ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ ಪತ್ನಿ; ಕೊಲೆ ಕೃತ್ಯ ಮುಚ್ಚಿಡಲು ಹೋಗಿ ಸಿಕ್ಕಿಬಿದ್ದ ಕಿರಾತಕರು!

ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಹದಗೆಟ್ಟ ವ್ಯವಸ್ಥೆ: ವೈದ್ಯರ ಕೊರತೆ ನೀಗಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ!

ಎಸ್ಎಂವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲಿನ ಸಮಯ ಪರಿಷ್ಕರಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.