ಬೆಂಗಳೂರು : ಮಹಿಳೆ ಎಂಬ ಕಾರಣ ಜಾಮೀನು ನೀಡಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಿಯಕರನ ಜತೆ ಸಂಬಂಧ ಮುಂದುವರಿಸಲು ಅಡ್ಡಿ ಆಗಿದ್ದಕ್ಕೆ ಪತಿಯನ್ನು ಕೊಲೆ ಮಾಡಿಸಿದ ಆರೋಪ ಎದುರಿ ಸುತ್ತಿರುವ ಮಹಿಳೆಗೆ ಬೇಲ್ ಮಂಜೂರು ಮಾಡಲು ನಿರಾಕರಿಸಿದೆ. ಪತಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ನಿವಾಸಿ ಸುನಿತಾ ಎಂಬಾಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾ.ವಿ. ಶ್ರೀಷಾ ನಂದ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಘಟನೆಯ ವಾಸ್ತವಾಂಶ ಪರಿಶೀಲಿಸಿದರೆ, ಮೊದಲ ಆರೋಪಿ ಮತ್ತು ಅರ್ಜಿದಾರ ಮಹಿಳೆ (ಎರಡನೇ ಆರೋಪಿ) ಅಕ್ರಮ ಸಂಬಂಧ ಹೊಂದಿದ್ದರು. ಮೊದಲನೇ ಆರೋಪಿಯು ಅರ್ಜಿದಾರೆಯನ್ನು ಪೋಷಣೆ ಮಾಡುವುದಾಗಿ ಭರವಸೆ ನೀಡಿದ್ದ. ಈ ಇಬ್ಬರು ಜೀವನ ಸಾಗಿಸಲು ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆಅರ್ಜಿದಾರೆಯ ಪತಿಯನ್ನು ಕೊಲೆ ಮಾಡಲಾಗಿದೆ. ಪ್ರಕರಣದ ಮುಖ್ಯ ಸಾಕ್ಷಿದಾರರ ವಿಚಾರಣೆ ಬಾಕಿಯಿದೆ. ಹಾಗಾಗಿ, ಈ ಹಂತದಲ್ಲಿ ಆರೋ
ಪಿಗೆ ಜಾಮೀನು ನೀಡಲಾಗದು ಎಂದು ಪೀಠ ಹೇಳಿದೆ. ಮಹಿಳೆ ಆಗಿರುವ ಕಾರಣ ಪರಿಗಣಿಸಿ ಜಾಮೀನು ಮಂ ಜೂರು ಮಾಡಬೇಕೆಂಬ ಅರ್ಜಿ ದಾರೆಯ ಪರ ವಕೀಲರ ವಾದ ಒಪ್ಪದ ಪೀಠ, ಮಹಿಳೆ ಎಂಬ ಕಾರಣವು ಜಾಮೀನು ನೀಡಲು ಸಾಕಾಗುವುದಿಲ್ಲ. ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದ ನಂತರ ಸನ್ನಿವೇಶ ಬದಲಾದ ಆಧಾರ ದಲ್ಲಿ ಅರ್ಜಿದಾರೆ ಮತ್ತೊಮ್ಮೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಿದೆ.
ಏನಿದು ಪ್ರಕರಣ?:
ಆಟೋ ಚಾಲಕ ರವಿಕುಮಾರ್ ಮೃತದೇಹವು 2025ರ ಜು.20ರಂದು ಚಿತ್ರದುರ್ಗದ ಶಿವಮೂರ್ತಿ ಬಡಾವಣೆಯಲ್ಲಿ ಪತ್ತೆಯಾಗಿತ್ತು.ಪ್ರಕರಣ ಸಂಬಂಧ ಮೃತರ ಮಗ ವಿಷ್ಣು ಚಿತ್ರದುರ್ಗದ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅರ್ಜಿದಾರೆ ಸುನಿತಾ (ಮೃತರ ಪತ್ನಿ) ಮತ್ತು ಗಣೇಶ್ ನಡುವೆ ಅಕ್ರಮ ಸಂಬಂಧವಿತ್ತು. ಅಕ್ರಮಸಂಬಂಧವನ್ನು ಮುಂದುವರೆಸಲು ರವಿಕುಮಾರ್ ಅಡ್ಡಿಯಾಗಿದ್ದರು. ಇದೇ ಕಾರಣದಿಂದ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿತ್ತು.








