ಕೋಲಾರ : ಮಹಿಳೆಯ ಖಾಸಗಿ ಫೋಟೋ ಮತ್ತು ವಿಡಿಯೋ ಮಾಡುವುದಾಗಿ ಬೆದರಿಕೆ ಒಡ್ಡಿ ಹಣ ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ವಸೂಲಿ ಮಾಡಿದ್ದು, ಯುವಕನ ಬ್ಲ್ಯಾಕ್ ಮೇಲ್ ಜಿಂದಗಿ ಮನನೊಂದ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಕೋಲಾರ ತಾಲೂಕಿನ ಛತ್ರಕೋಡಿ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರಜಿನಿ (28) ಎಂದು ತಿಳಿದು ಬಂದಿದೆ. ಬೇಗ್ಲಿಗಣಜೇನಹಳ್ಳಿಯ ಶ್ರೀಕಾಂತನ ಕಿರುಕುಳಕ್ಕೆ ಬಲಿಯಾದ ರಜನಿ ಹಲವು ದಿನಗಳಿಂದ ರಜನಿಗೆ ಬೆದರಿಕೆ ಹಾಕಿ ಹಣ ಮತ್ತು ಆಭರಣ ವಸೂಲಿ ಮಾಡಿದ್ದಾನೆ. ಮಾಂಗಲ್ಯ ಸರ ಒಡವೆಗಳು ಸೇರಿದಂತೆ 30 ರಿಂದ 40 ಲಕ್ಷ ಹಣ ವಸೂಲಿ ಮಾಡಿದ್ದಾನೆ. ಶ್ರೀಕಾಂತ್ ಈಗಾಗಲೇ ಇಬ್ಬರು ಮಹಿಳೆಯರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಶ್ರೀಕಾಂತ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬದ ಸದಸ್ಯರು ಆಗ್ರಹಿಸಿದ್ದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








