ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ (II PUC Exam-2) ಫಲಿತಾಂಶವು ಅಧಿಕೃತವಾಗಿ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಫಲಿತಾಂಶ ವೀಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್ಲೈನ್ ಮೂಲಕ ಪರಿಶೀಲಿಸಿಕೊಳ್ಳಬಹುದು.
ಫಲಿತಾಂಶ ವೀಕ್ಷಿಸುವುದು ಹೇಗೆ?
ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಸಂಯೋಜನೆಯನ್ನು (Subject Combination/ Stream) ನಮೂದಿಸಿ ಫಲಿತಾಂಶವನ್ನು ಪಡೆಯಬಹುದು.
ಅಧಿಕೃತ ವೆಬ್ಸೈಟ್ಗಳ ಲಿಂಕ್ಗಳು:
https://karresults.nic.in
https://dpue-exam.karnataka.gov.in/…
ವೆಬ್ಸೈಟ್ಗಳು ಮಾತ್ರವಲ್ಲದೆ, ಅಭ್ಯರ್ಥಿಗಳು ಮೊಬೈಲ್ನಲ್ಲಿ ‘ಕರ್ನಾಟಕ ಒನ್’ (Karnataka One) ಆಪ್ಲಿಕೇಶನ್ ಬಳಸಿಕೊಂಡು ಕೂಡ ಅತ್ಯಂತ ಸುಲಭವಾಗಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.








