Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ವಾರಣಾಸಿಯಲ್ಲಿ ಐದನೇ ಆರೋಪಿಯನ್ನು ಬಂಧಿಸಿದ ಸಿಬಿಐ

BREAKING : ಪ್ರಧಾನಿ ಮೋದಿ ಕರೆ ಹಿನ್ನೆಲೆ : ದೆಹಲಿಯಲ್ಲಿ ಇಂದಿನಿಂದ ವರ್ಕ್ ಫ್ರಮ್ ಹೋಂ ಆದೇಶ ಜಾರಿ

Shocking: ಜಗಳದ ನಂತರ ‘ಕುಡುಕ’ ಶಾಲಾ ಗೆಳೆಯರಿಂದ 13 ವರ್ಷದ ಬಾಲಕನ ಕೊಲೆ, ಶವ ಹೂತುಹಾಕಿದ ಅಪ್ರಾಪ್ತರು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪ್ರಧಾನಿ ಮೋದಿ ಕರೆ ಹಿನ್ನೆಲೆ : ದೆಹಲಿಯಲ್ಲಿ ಇಂದಿನಿಂದ ವರ್ಕ್ ಫ್ರಮ್ ಹೋಂ ಆದೇಶ ಜಾರಿ
INDIA

BREAKING : ಪ್ರಧಾನಿ ಮೋದಿ ಕರೆ ಹಿನ್ನೆಲೆ : ದೆಹಲಿಯಲ್ಲಿ ಇಂದಿನಿಂದ ವರ್ಕ್ ಫ್ರಮ್ ಹೋಂ ಆದೇಶ ಜಾರಿ

By ಸುರೇಶ್‌

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಉಳಿತಾಯದ ನಿಟ್ಟಿನಲ್ಲಿ ದೆಹಲಿ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಾರದಲ್ಲಿ ಎರಡು ದಿನ ‘ವರ್ಕ್ ಫ್ರಮ್ ಹೋಮ್’ (ಮನೆಯಿಂದಲೇ ಕೆಲಸ) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ, ಇನ್ನು ಮುಂದೆ ಪ್ರತಿ ವಾರ ಇಬ್ಬರು ದಿನಗಳ ಕಾಲ ಸಿಬ್ಬಂದಿ ಕಚೇರಿಗೆ ಬರುವ ಅಗತ್ಯವಿರುವುದಿಲ್ಲ. ವಾರದ ಪ್ರತಿ ಬುಧವಾರ ಮತ್ತು ಶನಿವಾರ ಅಧಿಕಾರಿಗಳು ಹಾಗೂ ನೌಕರರು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.

ತುರ್ತು ಸೇವೆಗಳಿಗೆ ವಿನಾಯಿತಿ

ದೆಹಲಿ ಸರ್ಕಾರದ ಈ ಹೊಸ ‘ವರ್ಕ್ ಫ್ರಮ್ ಹೋಮ್’ ಆದೇಶವು ಎಲ್ಲಾ ಇಲಾಖೆಗಳಿಗೂ ಅನ್ವಯಿಸುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯಗತ್ಯ ಹಾಗೂ ತುರ್ತು ಸೇವೆಗಳನ್ನು ಒದಗಿಸುವ ಆರೋಗ್ಯ ಇಲಾಖೆ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಇವುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈ ನಿಯಮ ಕಡ್ಡಾಯವಾಗಿರುತ್ತದೆ.

ಕಚೇರಿ ಅವಧಿಯಲ್ಲೂ ಬದಲಾವಣೆ

ವಾರದಲ್ಲಿ ಎರಡು ದಿನ ಮನೆಯಿಂದ ಕೆಲಸ ಮಾಡುವ ಸೌಲಭ್ಯ ನೀಡುವುದರ ಜೊತೆಗೆ, ದೆಹಲಿ ಸರ್ಕಾರವು ಕಚೇರಿ ಸಮಯದಲ್ಲೂ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಕಚೇರಿಗಳಿಗೆ ಬರುವ ದಿನಗಳಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಸಮಯದ ಪರಿಷ್ಕರಣೆ ಮಾಡಲಾಗಿದ್ದು, ಸಿಬ್ಬಂದಿಗಳು ಹೊಸ ವೇಳಾಪಟ್ಟಿಯನ್ನೇ ಅನುಸರಿಸಬೇಕಾಗುತ್ತದೆ.

ಪ್ರಧಾನಿ ಮೋದಿ ಸಲಹೆಗೆ ದೆಹಲಿ ಸರ್ಕಾರ ಸಾಥ್

ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ಇಂಧನ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕರೆ ನೀಡಿದ್ದರು. ಪ್ರಧಾನಿಯವರ ಈ ಮಹತ್ವದ ಸಲಹೆಯನ್ನು ಸ್ವೀಕರಿಸಿರುವ ದೆಹಲಿ ಸರ್ಕಾರ, ಪರಿಸರ ಸಂರಕ್ಷಣೆ ಹಾಗೂ ಇಂಧನ ಉಳಿತಾಯದ ಹಿತದೃಷ್ಟಿಯಿಂದ ಈ ಕ್ರಾಂತಿಕಾರಿ ಆದೇಶವನ್ನು ಜಾರಿಗೆ ತಂದಿದೆ.

ಪರಿಸರಸ್ನೇಹಿ ವಾಹನಗಳ ಬಳಕೆಗೆ ಕರೆ

ಸರ್ಕಾರದ ಪ್ರಮುಖ ಮನವಿ: ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಇನ್ಮುಂದೆ ಎಲೆಕ್ಟ್ರಿಕ್ ವಾಹನಗಳ (EV) ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ಖಾಸಗಿ ವಾಹನಗಳನ್ನು ಬದಿಗಿಟ್ಟು, ಮೆಟ್ರೋ ಮತ್ತು ಬಸ್‌ಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ದೆಹಲಿ ಸರ್ಕಾರ ಜನರಲ್ಲಿ ವಿನಂತಿಸಿದೆ.

Share. Facebook Twitter LinkedIn WhatsApp Email

Related Posts

ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ವಾರಣಾಸಿಯಲ್ಲಿ ಐದನೇ ಆರೋಪಿಯನ್ನು ಬಂಧಿಸಿದ ಸಿಬಿಐ

2 Mins Read

Shocking: ಜಗಳದ ನಂತರ ‘ಕುಡುಕ’ ಶಾಲಾ ಗೆಳೆಯರಿಂದ 13 ವರ್ಷದ ಬಾಲಕನ ಕೊಲೆ, ಶವ ಹೂತುಹಾಕಿದ ಅಪ್ರಾಪ್ತರು!

2 Mins Read

BIG NEWS: ​ಬಾಂಗ್ಲಾದೇಶದಲ್ಲಿರುವ ಭಾರತೀಯ ಅಸಿಸ್ಟೆಂಟ್ ಹೈಕಮಿಷನ್ ಕಚೇರಿಯಲ್ಲಿ ಅಧಿಕಾರಿ ಶವವಾಗಿ ಪತ್ತೆ!

1 Min Read
Recent News

ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ವಾರಣಾಸಿಯಲ್ಲಿ ಐದನೇ ಆರೋಪಿಯನ್ನು ಬಂಧಿಸಿದ ಸಿಬಿಐ

BREAKING : ಪ್ರಧಾನಿ ಮೋದಿ ಕರೆ ಹಿನ್ನೆಲೆ : ದೆಹಲಿಯಲ್ಲಿ ಇಂದಿನಿಂದ ವರ್ಕ್ ಫ್ರಮ್ ಹೋಂ ಆದೇಶ ಜಾರಿ

Shocking: ಜಗಳದ ನಂತರ ‘ಕುಡುಕ’ ಶಾಲಾ ಗೆಳೆಯರಿಂದ 13 ವರ್ಷದ ಬಾಲಕನ ಕೊಲೆ, ಶವ ಹೂತುಹಾಕಿದ ಅಪ್ರಾಪ್ತರು!

BIG NEWS: ​ಬಾಂಗ್ಲಾದೇಶದಲ್ಲಿರುವ ಭಾರತೀಯ ಅಸಿಸ್ಟೆಂಟ್ ಹೈಕಮಿಷನ್ ಕಚೇರಿಯಲ್ಲಿ ಅಧಿಕಾರಿ ಶವವಾಗಿ ಪತ್ತೆ!

State News
KARNATAKA

BIG NEWS : ಹಣ ವಶಕ್ಕೆ ಪಡೆದಿಲ್ಲ ಎಂಬ ಕಾರಣಕ್ಕೆ ಲಂಚದ ಕೇಸ್ ರದ್ದಾಗದು : ಹೈಕೋ‌ರ್ಟ್ ಮಹತ್ವದ ಆದೇಶ

By ಸುರೇಶ್‌ KARNATAKA 2 Mins Read

ಬೆಂಗಳೂರು: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಆರೋಪಿಯು ಸರ್ಕಾರಿ ಸೇವಕನಲ್ಲ, ಬದಲಾಗಿ ಖಾಸಗಿ ವ್ಯಕ್ತಿಯಾಗಿದ್ದಾನೆ ಹಾಗೂ ಆತ ‘ರೆಡ್ ಹ್ಯಾಂಡ್’ ಆಗಿ (ಲಂಚ…

BIG NEWS : ಹೈಕೋರ್ಟ್ ಸೂಚನೆ ಬೆನ್ನಲ್ಲೇ ಸೈಲೆಂಟ್ ಆದ ಸಾರಿಗೆ ನೌಕರರು : ಎಂದಿನಂತೆ ಇಂದು ಬಸ್ ಸಂಚಾರ!

BREAKING : ದೇಶಾದ್ಯಂತ ಇಂದು ಔಷಧ ಮಳಿಗೆ ಬಂದ್ : ರಾಜ್ಯದಲ್ಲಿ ಮಾತ್ರ ಬಹುತೇಕ ಓಪನ್!

BREAKING : ಸರ್ಕಾರಿ ವಸತಿ ಶಾಲೆ ಪ್ರವೇಶಕ್ಕೆ, ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ ‘KEA’

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.