Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತಕ್ಕೆ ಅಮೆರಿಕದಿಂದ ಬಿಗ್ ರಿಲೀಫ್! ರಷ್ಯಾ ಕಚ್ಚಾ ತೈಲ ಖರೀದಿಯ ಮೇಲಿನ ನಿರ್ಬಂಧಗಳ ವಿನಾಯಿತಿ ಅವಧಿ ಮತ್ತೊಂದು ತಿಂಗಳು ವಿಸ್ತರಣೆ!

SHOCKING : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 6 ವರ್ಷದ ಹೆತ್ತ ಮಗಳನ್ನೇ ನೀರಿನ ಟ್ಯಾಂಕ್‌ ಗೆ ತಳ್ಳಿ ಕೊಂದ ಪಾಪಿ ತಾಯಿ!

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ದರ ಪಟ್ಟಿ ಪ್ರಕಟಣೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಸೂಚನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 6 ವರ್ಷದ ಹೆತ್ತ ಮಗಳನ್ನೇ ನೀರಿನ ಟ್ಯಾಂಕ್‌ ಗೆ ತಳ್ಳಿ ಕೊಂದ ಪಾಪಿ ತಾಯಿ!
INDIA

SHOCKING : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 6 ವರ್ಷದ ಹೆತ್ತ ಮಗಳನ್ನೇ ನೀರಿನ ಟ್ಯಾಂಕ್‌ ಗೆ ತಳ್ಳಿ ಕೊಂದ ಪಾಪಿ ತಾಯಿ!

By kannadanewsnow57

ಹೈದರಾಬಾದ್: ಅನೈತಿಕ ಸಂಬಂಧಕ್ಕೆ ಕಣ್ಣಾಲಿಗಳಂತಿದ್ದ ಆರು ವರ್ಷದ ಮಗಳೇ ಅಡ್ಡಿಯಾಗಿದ್ದಾಳೆಂಬ ಕಾರಣಕ್ಕೆ, ಹೆತ್ತ ತಾಯಿಯೇ ಮಗಳನ್ನೇ ನೀರಿನ ಟ್ಯಾಂಕ್‌ಗೆ ಹಾಕಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಹೈದರಾಬಾದ್‌ನ ಅಲ್ವಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಓಲ್ಡ್ ಅಲ್ವಾಲ್‌ನ ಅಂಬೇಡ್ಕರ್ ನಗರದ ನಿವಾಸಿ ಯಾದಗಿರಿ ಎಂಬುವವರಿಗೆ ಇಬ್ಬರು ಪುತ್ರಿಯರಿದ್ದಾರೆ. ಅವರ ಕಿರಿಯ ಮಗಳು ರೇಖಾಗೆ 2020 ರಲ್ಲಿ ರಾಜು ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ, ಮದುವೆಗೆ ಮುಂಚಿತವಾಗಿಯೇ ರೇಖಾ ಗರ್ಭಿಣಿಯಾಗಿದ್ದ ವಿಷಯ ಪತಿ ರಾಜುಗೆ ತಿಳಿದಿತ್ತು. ಮದುವೆಯ ನಂತರ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಆಕೆಗೆ ತನ್ವಿಕಾ (6 ವರ್ಷ) ಎಂದು ಹೆಸರಿಡಲಾಗಿತ್ತು. ಆದರೆ, ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ವಿಷಯವಾಗಿ ದಂಪತಿ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಈ ಮನಸ್ತಾಪದಿಂದಾಗಿ ಇಬ್ಬರೂ ದೂರ ಇರಲಾರಂಭಿಸಿದ್ದರು.

ಈ ನಡುವೆ, ರೇಖಾ ತಂದೆ ಯಾದಗಿರಿ ತಮ್ಮ ಸ್ವಂತ ಮನೆಯನ್ನು ಮಾರಿ ಓಲ್ಡ್ ಅಲ್ವಾಲ್‌ಗೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲಿ ರೇಖಾಗೆ ತನಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಸಾಯಿ (21) ಎಂಬ ಯುವಕನ ಪರಿಚಯವಾಗಿತ್ತು. ಸ್ಥಳೀಯ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಾಯಿ ಜೊತೆಗಿನ ರೇಖಾ ಪರಿಚಯ, ದಿನಕಳೆದಂತೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು.

ಸಾಯಿ ಪ್ರೀತಿಯಲ್ಲಿ ಮುಳುಗಿದ್ದ ರೇಖಾ, ತನ್ನನ್ನು ಮದುವೆಯಾಗುವಂತೆ ಆತನ ಮೇಲೆ ಒತ್ತಡ ಹೇರಲಾರಂಭಿಸಿದಳು. ಆದರೆ ಸಾಯಿ, “ನಿನಗೆ ಈಗಾಗಲೇ 6 ವರ್ಷದ ಮಗಳಿದ್ದಾಳೆ, ಆಕೆ ಇರುವಾಗ ನಾನು ನಿನ್ನನ್ನು ಹೇಗೆ ಮದುವೆಯಾಗಲಿ?” ಎಂದು ನಿರಾಕರಿಸಿ, ರೇಖಾಳಿಂದ ದೂರವಿರಲು ಪ್ರಯತ್ನಿಸಿದ್ದಾನೆ.

ಇತ್ತೀಚೆಗೆ ಯಾದಗಿರಿ ಕುಟುಂಬ ಮತ್ತೆ ಅಂಬೇಡ್ಕರ್ ನಗರದ ಬಾಡಿಗೆ ಮನೆಗೆ ಶಿಫ್ಟ್ ಆಗಿತ್ತು. ಆದರೂ ರೇಖಾ ಮಾತ್ರ ಸಾಯಿ ಧ್ಯಾನದಲ್ಲೇ ಇದ್ದಳು. ತನ್ನ ಪ್ರಿಯಕರ ತನ್ನನ್ನು ಮದುವೆಯಾಗದೇ ದೂರ ಇಡಲು ಮಗಳು ತನ್ವಿಕಾಳೇ ಕಾರಣ ಎಂದು ಬಲವಾಗಿ ನಂಬಿದ ರೇಖಾ, ಮಗಳನ್ನು ಇಲ್ಲದಂತೆ ಮಾಡಲು ಕ್ರೂರ ಯೋಜನೆ ರೂಪಿಸಿದಳು.

ಶನಿವಾರ ತಡರಾತ್ರಿ ಎಲ್ಲರೂ ಮಲಗಿದ್ದಾಗ, ರೇಖಾ ತನ್ನ 6 ವರ್ಷದ ಮಗಳು ತನ್ವಿಕಾಳನ್ನು ಮನೆಯ ಮೇಲ್ಛಾವಣಿಗೆ ಕರೆದೊಯ್ದಿದ್ದಾಳೆ. ಅಲ್ಲಿನ ನೀರಿನ ಟ್ಯಾಂಕ್ ಮುಚ್ಚಳವನ್ನು ತೆಗೆದು, ಮಗುವನ್ನು ಜೀವಂತವಾಗಿ ಟ್ಯಾಂಕ್ ಒಳಗಡೆ ತಳ್ಳಿದ್ದಾಳೆ. ಅಷ್ಟಕ್ಕೇ ನಿಲ್ಲದೆ, ಟ್ಯಾಂಕ್ ಮುಚ್ಚಳವನ್ನು ಗಟ್ಟಿಯಾಗಿ ಬಂದ್ ಮಾಡಿ, ಬೋರ್‌ವೆಲ್ ನೀರನ್ನು ಆನ್ ಮಾಡಿ ಟ್ಯಾಂಕ್ ಸಂಪೂರ್ಣ ತುಂಬುವಂತೆ ಮಾಡಿದ್ದಾಳೆ. ಮಗು ಉಸಿರುಗಟ್ಟಿ ಟ್ಯಾಂಕ್ ಒಳಗಡೆಯೇ ಮೃತಪಟ್ಟಿದೆ.

ಮಗಳನ್ನು ಕೊಂದ ನಂತರ ರೇಖಾ ತನಗೇನೂ ತಿಳಿಯದಂತೆ ನಾಟಕವಾಡಿದ್ದಾಳೆ. ಮಗಳು ಕಾಣೆಯಾಗಿದ್ದಾಳೆ ಎಂದು ಶನಿವಾರ ರಾತ್ರಿಯಿಂದಲೇ ಮನೆಯವರನ್ನು ಮತ್ತು ನೆರೆಹೊರೆಯವರನ್ನು ನಂಬಿಸಲು ಯತ್ನಿಸಿದ್ದಾಳೆ. ಆದರೆ, ಭಾನುವಾರ ಸಂಜೆ ರೇಖಾ ಸಹೋದರಿ ಶ್ವೇತಾ ಮನೆಯ ಮೇಲಿನ ನೀರಿನ ಟ್ಯಾಂಕ್‌ ನಲ್ಲಿ ತನ್ವಿಕಾಳ ಶವ ತೇಲುತ್ತಿರುವುದನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ತಕ್ಷಣ ಅವರು ಅಲ್ವಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ, ಆ ಪ್ರದೇಶದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಶನಿವಾರ ರಾತ್ರಿ ರೇಖಾ ತನ್ನ ಮಗಳನ್ನು ಬಲವಂತವಾಗಿ ಮೇಲ್ಛಾವಣಿಗೆ ಕರೆದೊಯ್ಯುತ್ತಿರುವುದು ಸ್ಪಷ್ಟವಾಗಿ ದಾಖಲಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ರೇಖಾಳನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪ್ರಿಯಕರನಿಗಾಗಿ ತಾನೇ ಮಗಳನ್ನು ನೀರಿನ ಟ್ಯಾಂಕ್‌ಗೆ ಹಾಕಿ ಕೊಂದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

ಪ್ರಸ್ತುತ ಅಲ್ವಾಲ್ ಪೊಲೀಸರು ಹೆತ್ತ ಮಗಳನ್ನೇ ಕೊಂದ ತಾಯಿ ರೇಖಾ ಹಾಗೂ ಈ ಅಪರಾಧಕ್ಕೆ ಪರೋಕ್ಷವಾಗಿ ಕಾರಣನಾದ ಪ್ರಿಯಕರ ಸಾಯಿ ಇಬ್ಬರನ್ನೂ ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಹೆತ್ತ ತಾಯಿಯೇ ಯಮನಾಗಿ ಬದಲಾದ ಈ ಘಟನೆ ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ.

SHOCKING: A sinful mother killed her 6-year-old daughter by pushing her into a water tank for interfering with an illicit relationship!
Share. Facebook Twitter LinkedIn WhatsApp Email

Related Posts

ಭಾರತಕ್ಕೆ ಅಮೆರಿಕದಿಂದ ಬಿಗ್ ರಿಲೀಫ್! ರಷ್ಯಾ ಕಚ್ಚಾ ತೈಲ ಖರೀದಿಯ ಮೇಲಿನ ನಿರ್ಬಂಧಗಳ ವಿನಾಯಿತಿ ಅವಧಿ ಮತ್ತೊಂದು ತಿಂಗಳು ವಿಸ್ತರಣೆ!

1 Min Read

Post office Scheme : ಪೋಸ್ಟ್ ಆಫೀಸ್ `RD’ ಯೋಜನೆ: ತಿಂಗಳಿಗೆ ₹5,000 ಹೂಡಿಕೆ ಮಾಡಿದರೆ 5 ವರ್ಷದ ನಂತರ ಸಿಗಲಿದೆ ಇಷ್ಟೊಂದು ಹಣ!

2 Mins Read

ಅಮೆರಿಕದ ಸ್ಯಾನ್ ಡಿಯಾಗೋ ಮಸೀದಿಯಲ್ಲಿ ಭೀಕರ ಗುಂಡಿನ ದಾಳಿ: ಮೂವರ ದಾರುಣ ಸಾವು!

1 Min Read
Recent News

ಭಾರತಕ್ಕೆ ಅಮೆರಿಕದಿಂದ ಬಿಗ್ ರಿಲೀಫ್! ರಷ್ಯಾ ಕಚ್ಚಾ ತೈಲ ಖರೀದಿಯ ಮೇಲಿನ ನಿರ್ಬಂಧಗಳ ವಿನಾಯಿತಿ ಅವಧಿ ಮತ್ತೊಂದು ತಿಂಗಳು ವಿಸ್ತರಣೆ!

SHOCKING : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 6 ವರ್ಷದ ಹೆತ್ತ ಮಗಳನ್ನೇ ನೀರಿನ ಟ್ಯಾಂಕ್‌ ಗೆ ತಳ್ಳಿ ಕೊಂದ ಪಾಪಿ ತಾಯಿ!

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ದರ ಪಟ್ಟಿ ಪ್ರಕಟಣೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಸೂಚನೆ

ALERT : ಬೆಳಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಾಣಿಸ್ತಿವೆಯಾ? ಹಾಗಾದ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ!

State News
KARNATAKA

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ದರ ಪಟ್ಟಿ ಪ್ರಕಟಣೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಸೂಚನೆ

By kannadanewsnow57 KARNATAKA 1 Min Read

ಹಾಸನ: ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ದರ ಪಟ್ಟಿಗಳನ್ನು ಸೂಚನಾ ಫಲಕದಲ್ಲಿ ಅಳವಡಿಸಬೇಕು. ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಿ ವಿಸ್ತೃತವಾಗಿ…

ALERT : ಬೆಳಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಾಣಿಸ್ತಿವೆಯಾ? ಹಾಗಾದ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ!

ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದೆಯೇ? ನೀವು ಈ ವಿಷಯಗಳನ್ನು ತಪ್ಪದೇ ತಿಳಿದುಕೊಳ್ಳಬೇಕು.!

Petrol Pump : ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಈ 6 ಉಚಿತ ಸೇವೆಗಳು : ಪ್ರತಿಯೊಬ್ಬ ವಾಹನ ಸವಾರರು ತಿಳಿಯಲೇಬೇಕು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.