ನವದೆಹಲಿ : ಅಬುದಾಭಿಯ ಅಣು ವಿದ್ಯುತ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದಿದೆ. ದಾಳಿಯ ಬಳಿಕ ಸ್ಥಾವರದ ಜನರೇಟರ್ ಹೊತ್ತಿ ಉರಿದಿದೆ. ಅಲ್ ದಫ್ರಾ ಪ್ರದೇಶದಲ್ಲಿ ಇರುವ ಅಣು ವಿದ್ಯುತ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದಿದ್ದು, ಅಣು ವಿದ್ಯುತ್ ಸ್ಥಾವರದ ಜನರೇಟರ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ನ್ಯೂಕ್ಲಿಯರ್ ಪವರ್ ಜನರೇಟರ್ ಮೇಲೆ ಈ ರೀತಿ ದಾಳಿ ನಡೆದಿದೆ.
ಇದರಿಂದ ಏನಾದರೂ ವಿಕಿರಣ ಸೋರಿಕೆ ಏನಾದರೂ ಆಗಿದೆಯ ಅದರ ಬಗ್ಗೆ ಮಾಹಿತಿ ಬಂದಿಲ್ಲ. ಆದರೆ ಜನರೇಟರ್ ಭಾಗದ ಮೇಲೆ ಈ ರೀತಿ ದಾಳಿ ಆಗಿದೆ. ಏನಾದರೂ ಇದೆ ರೀತಿಯಾಗಿ ಇರಾನ್ ಅನ್ನು ಕಟ್ಟಿ ಹಾಕುವಂತಹ ಪ್ರಯತ್ನ ಅಮೆರಿಕ ಏನಾದರೂ ಮುಂದುವರಿಸಿಕೊಂಡು ಹೋದರೆ ಕೊಲ್ಲಿ ರಾಷ್ಟ್ರಗಳ ಮೇಲೆ ತನ್ನ ಅಟ್ಯಾಕ್ ಹೇಗೆ ಇರುತ್ತೆ ಎನ್ನುವಂತಹ ಸೂಚನೆಯನ್ನು ಇರಾನ್ ನೀಡಿದೆ.








