ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ರಾಷ್ಟ್ರೀಯ ರಾಜಧಾನಿ ವಲಯದ (NCR) ಜನರಿಗೆ ಇಂಧನ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ದರದಲ್ಲಿ ಪ್ರತಿ ಕೆಜಿಗೆ ಮತ್ತೆ 1 ರೂಪಾಯಿ ಹೆಚ್ಚಳವಾಗಿದ್ದು, ಇದು ಕೇವಲ ಒಂದೇ ವಾರದಲ್ಲಿ ನಡೆದಿರುವ ಎರಡನೇ ಬೆಲೆ ಏರಿಕೆಯಾಗಿದೆ.
ಶನಿವಾರದಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬಂದಿವೆ. ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್ಜಿ ಬೆಲೆ 80.09 ರೂಪಾಯಿ ಆಗಿದೆ.ನೋಯ್ಡಾ ಮತ್ತು ಗಾಜಿಯಾಬಾದ್ ನಲ್ಲಿ ಪ್ರತಿ ಕೆಜಿ ಸಿಎನ್ಜಿ ಬೆಲೆ 88.70 ರೂಪಾಯಿ ತಲುಪಿದೆ.
48 ಗಂಟೆಗಳಲ್ಲಿ 3 ರೂಪಾಯಿ ಹೆಚ್ಚಳ!
ಮೇ 15 ರಂದು ತಾನೇ ಸಿಎನ್ಜಿ ದರವನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೆ 1 ರೂಪಾಯಿ ಏರಿಕೆ ಮಾಡಲಾಗಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ ಒಟ್ಟಾರೆಯಾಗಿ ಪ್ರತಿ ಕೆಜಿಗೆ 3 ರೂಪಾಯಿ ಭಾರ ಗ್ರಾಹಕರ ಹೆಗಲೇರಿದಂತಾಗಿದೆ. ಸಾಲು ಸಾಲು ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕ ಸಾರಿಗೆಯವರು ಕಂಗೆಟ್ಟಿದ್ದಾರೆ.
CNG rates have been increased by Re 1 from today. In Delhi, per KG CNG will cost Rs 80.09. In Noida-Ghaziabad, per KG CNG will cost Rs 88.70. This is the second increase in prices in 2 Days. Earlier on 15th May, CNG prices were increased to Rs 2/KG.
— ANI (@ANI) May 17, 2026








