Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹಲಕ್ಷ್ಮಿ ಯೋಜನೆ ಹಣ ಉಳಿಸಿ ರೊಟ್ಟಿ ಉದ್ಯಮ ಆರಂಭಿಸಿದ ಕೊಪ್ಪಳದ ಮೂವರು ಗೆಳತಿಯರು!

​‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ!

BIG NEWS : 94ಸಿ, 94ಸಿಸಿ ಅರ್ಜಿಗಳ ಜಂಟಿ ಸರ್ವೆ ನಡೆಸಿ ತಕ್ಷಣ ಹಕ್ಕುಪತ್ರ ನೀಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ!
INDIA

​‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ!

By ಗೋಪಾಲ್‌ ಎನ್‌

ನವದೆಹಲಿ:ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್-ಯುಜಿ 2026’ (NEET-UG) ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಸಾಮಾಜಿಕ ಜಾಲತಾಣ ‘X’ ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

​22 ಲಕ್ಷ ವಿದ್ಯಾರ್ಥಿಗಳಿಗೆ ದ್ರೋಹ: ರಾಹುಲ್ ಗಾಂಧಿ ಆಕ್ರೋಶ
​”ನೀಟ್ ಪರೀಕ್ಷೆಗಾಗಿ ದೇಶದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದಿದ್ದರು. ಆದರೆ ಈ ಭ್ರಷ್ಟ ವ್ಯವಸ್ಥೆಯಿಂದಾಗಿ ಅವರ ಕಠಿಣ ಪರಿಶ್ರಮ ಮತ್ತು ಕನಸುಗಳು ಮಣ್ಣುಪಾಲಾಗಿವೆ. ಪರೀಕ್ಷೆ ನಡೆಯುವ ಎರಡು ದಿನಗಳ ಮುಂಚೆಯೇ ನೀಟ್ ಪ್ರಶ್ನೆಪತ್ರಿಕೆಯನ್ನು ವಾಟ್ಸಾಪ್‌ನಲ್ಲಿ ಹಂಚಿ, ಬಹಿರಂಗವಾಗಿ ಮಾರಾಟ ಮಾಡಲಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ” ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

​ಧರ್ಮೇಂದ್ರ ಪ್ರಧಾನ್‌ರನ್ನು ತಕ್ಷಣ ವಜಾಗೊಳಿಸಿ
​ಶಿಕ್ಷಣ ಸಚಿವರ ಬೇಜವಾಬ್ದಾರಿತನವನ್ನು ತರಾಟೆಗೆ ತೆಗೆದುಕೊಂಡ ರಾಹುಲ್, “ಭಾರತದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ‘ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳುತ್ತಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿಯು ನೀಡಿದ್ದ ಪ್ರಮುಖ ಶಿಫಾರಸುಗಳನ್ನು ಅವರು ಕಸದ ಬುಟ್ಟಿಗೆ ಎಸೆದಿದ್ದಾರೆ. ಪ್ರಧಾನಿ ಮೋದಿ ಅವರೇ, ಒಂದೋ ನೀವೇ ಈ ವೈಫಲ್ಯದ ಜವಾಬ್ದಾರಿ ಹೊರಬೇಕು, ಇಲ್ಲದಿದ್ದರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.

​ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿದ ಆರ್‌ಎಸ್‌ಎಸ್-ಬಿಜೆಪಿ ಜಾಲ
​ಕೇಂದ್ರ ಸರ್ಕಾರದ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, “ದೇಶದ ಶಿಕ್ಷಣ ವ್ಯವಸ್ಥೆಯ ಕೇಂದ್ರಬಿಂದುವನ್ನೇ ನೀವು ಧ್ವಂಸಗೊಳಿಸಿದ್ದೀರಿ. ವಿಶ್ವವಿದ್ಯಾಲಯಗಳಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮಗೆ ಬೇಕಾದವರನ್ನು ಕುಲಪತಿಗಳು ಹಾಗೂ ಪ್ರೊಫೆಸರ್‌ಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಿವೆ. ಇವರದ್ದೇ ಒಂದು ದೊಡ್ಡ ಜಾಲ (ನೆಕ್ಸಸ್) ಸೃಷ್ಟಿಯಾಗಿದ್ದು, ಕೇವಲ ಹಣ ಮಾಡುವುದೇ ಇವರ ಮುಖ್ಯ ಉದ್ದೇಶವಾಗಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 80ಕ್ಕೂ ಹೆಚ್ಚು ಬಾರಿ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು, 2 ಕೋಟಿಗೂ ಹೆಚ್ಚು ಯುವಕರ ಭವಿಷ್ಯ ಹಾಳಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Demands Dharmendra Pradhan's Resignation | VIDEO NEET-UG 2026 Paper Leak: Rahul Gandhi Slams Modi Govt
Share. Facebook Twitter LinkedIn WhatsApp Email

Related Posts

ಗೃಹಲಕ್ಷ್ಮಿ ಯೋಜನೆ ಹಣ ಉಳಿಸಿ ರೊಟ್ಟಿ ಉದ್ಯಮ ಆರಂಭಿಸಿದ ಕೊಪ್ಪಳದ ಮೂವರು ಗೆಳತಿಯರು!

1 Min Read

ಹೈಕೋರ್ಟ್‌ನಿಂದ ಸಿಗದ ರಿಲೀಫ್: ಪೋಕ್ಸೊ ಪ್ರಕರಣದಲ್ಲಿ ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ ಪೊಲೀಸರಿಗೆ ಸರೆಂಡರ್!

1 Min Read

ಏನಿದು ಭಯೋತ್ಪಾದಕರು ಬಳಸುವ ‘ಜಿಹಾದಿ ಡ್ರಗ್’? ದೇಶದಲ್ಲೇ ಮೊದಲ ಬಾರಿಗೆ 182 ಕೋಟಿ ರೂ. ಮೌಲ್ಯದ ‘ಕ್ಯಾಪ್ಟಾಗನ್’ ಜಪ್ತಿ ಮಾಡಿದ NCB!

2 Mins Read
Recent News

ಗೃಹಲಕ್ಷ್ಮಿ ಯೋಜನೆ ಹಣ ಉಳಿಸಿ ರೊಟ್ಟಿ ಉದ್ಯಮ ಆರಂಭಿಸಿದ ಕೊಪ್ಪಳದ ಮೂವರು ಗೆಳತಿಯರು!

​‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ!

BIG NEWS : 94ಸಿ, 94ಸಿಸಿ ಅರ್ಜಿಗಳ ಜಂಟಿ ಸರ್ವೆ ನಡೆಸಿ ತಕ್ಷಣ ಹಕ್ಕುಪತ್ರ ನೀಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ.!

GOOD NEWS: BMTC ನೌಕರರಿಗೆ ಸಿಹಿಸುದ್ದಿ: 11 ತಿಂಗಳ ಬಾಕಿ ವೇತನ, ಹಿಂಬಾಗಿ ಬಿಡುಗಡೆ, ಖಾತೆಗೆ ಜಮಾ

State News
KARNATAKA

BIG NEWS : 94ಸಿ, 94ಸಿಸಿ ಅರ್ಜಿಗಳ ಜಂಟಿ ಸರ್ವೆ ನಡೆಸಿ ತಕ್ಷಣ ಹಕ್ಕುಪತ್ರ ನೀಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ.!

By kannadanewsnow57 KARNATAKA 3 Mins Read

ಹಾಸನ: ಜನಸ್ಪಂದನ ಕಾರ್ಯಕ್ರಮವನ್ನೇ ಕಾಯದೇ ಬಡವರ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುವ ಮೂಲಕ ಜನರಿಗೆ ಸವಲತ್ತುಗಳನ್ನು ದೊರಕಿಸುವಂತೆ ಕಂದಾಯ ಸಚಿವ ಹಾಗೂ…

GOOD NEWS: BMTC ನೌಕರರಿಗೆ ಸಿಹಿಸುದ್ದಿ: 11 ತಿಂಗಳ ಬಾಕಿ ವೇತನ, ಹಿಂಬಾಗಿ ಬಿಡುಗಡೆ, ಖಾತೆಗೆ ಜಮಾ

GOOD NEWS : ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ1122 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು.!

SHOCKING : ನೀಟ್ ಪರೀಕ್ಷೆ ರದ್ದತಿಗೆ ನೊಂದು ಬೆಂಗಳೂರಿನ ವಿದ್ಯಾರ್ಥಿ ಸೇರಿ ನಾಲ್ವರು ಆತ್ಮಹತ್ಯೆಗೆ ಶರಣು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.