Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ದೇಶದಲ್ಲಿ ಚಿನ್ನದ ಆಮದು ನಿಯಮ ಇನ್ನಷ್ಟು ಕಠಿಣ: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ | Gold Imports

BIG NEWS : ಮುಂದಿನ ‘CM’ ಟ್ರೆಂಡ್ : ಬೆಂಗಳೂರು ಬೆನ್ನಲ್ಲೇ, ಬೆಳಗಾವಿಯಲ್ಲೂ ಡಿ.ಕೆ. ಶಿವಕುಮಾರ್ ಬ್ಯಾನರ್ ರಾಜಕಾರಣ!

SHOCKING : ‘ನಾನು ಒಳ್ಳೆಯ ಮಗನಾಗಲು ಸಾಧ್ಯವಾಗಲಿಲ್ಲ’ : ಡೆತ್ ನೋಟ್ ಬರೆದಿಟ್ಟು ಬಿ.ಟೆಕ್ ವಿದ್ಯಾರ್ಥಿ ಆತ್ಮಹತ್ಯೆ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮುಂದಿನ ‘CM’ ಟ್ರೆಂಡ್ : ಬೆಂಗಳೂರು ಬೆನ್ನಲ್ಲೇ, ಬೆಳಗಾವಿಯಲ್ಲೂ ಡಿ.ಕೆ. ಶಿವಕುಮಾರ್ ಬ್ಯಾನರ್ ರಾಜಕಾರಣ!
KARNATAKA

BIG NEWS : ಮುಂದಿನ ‘CM’ ಟ್ರೆಂಡ್ : ಬೆಂಗಳೂರು ಬೆನ್ನಲ್ಲೇ, ಬೆಳಗಾವಿಯಲ್ಲೂ ಡಿ.ಕೆ. ಶಿವಕುಮಾರ್ ಬ್ಯಾನರ್ ರಾಜಕಾರಣ!

By ಸುರೇಶ್‌

ಬೆಳಗಾವಿ :ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಒಳಗೊಳಗೇ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ‘ಮುಂದಿನ ಮುಖ್ಯಮಂತ್ರಿ’ ಎಂದು ಬಿಂಬಿಸುವ ಬ್ಯಾನರ್ ಸಂಸ್ಕೃತಿ ಈಗ ರಾಜಧಾನಿ ಬೆಂಗಳೂರಿನಿಂದ ಕುಂದಾನಗರಿ ಬೆಳಗಾವಿಗೂ ವಿಸ್ತರಿಸಿದೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಇಂತಹದ್ದೇ ಬ್ಯಾನರ್ ಹಾಕಿ ಗಮನ ಸೆಳೆದಿದ್ದರು. ಇದೀಗ ಬೆಳಗಾವಿ ನಗರದ ಪ್ರಮುಖ ವೃತ್ತಗಳಲ್ಲೂ ಡಿ.ಕೆ.ಶಿ ಮುಂದಿನ ಸಿಎಂ ಎಂಬ ಪೋಸ್ಟರ್‌ಗಳು ರಾರಾಜಿಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಮೃಣಾಲ್ ಹೆಬ್ಬಾಳ್ಕರ್ ನೇತೃತ್ವದಲ್ಲಿ ಬ್ಯಾನರ್ ಅಳವಡಿಕೆ

ವಿಶೇಷವೆಂದರೆ, ಈ ಬ್ಯಾನರ್‌ಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಅಳವಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಬ್ಯಾನರ್‌ಗಳನ್ನು ಹಾಕಲಾಗಿದ್ದು, ಅದರಲ್ಲಿ “ಕರ್ನಾಟಕದ ಮುಂದಿನ ಮುಖ್ಯಮಂತ್ರಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಬರೆಯಲಾಗಿದೆ. ಬೆಳಗಾವಿಯ ಬಹುತೇಕ ಪ್ರಮುಖ ಸರ್ಕಲ್‌ಗಳಲ್ಲಿ ಮೃಣಾಲ್ ಹೆಬ್ಬಾಳ್ಕರ್ ಅವರ ಹೆಸರಿನಲ್ಲೇ ಈ ಬ್ಯಾನರ್‌ಗಳು ಪ್ರತ್ಯಕ್ಷವಾಗಿವೆ.

ಕಾಂಗ್ರೆಸ್ ಪಾಳಯದಲ್ಲಿ ಶುರುವಾದ ಹೊಸ ಚರ್ಚೆ

ಬೆಳಗಾವಿ ರಾಜಕಾರಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಬಾಂಧವ್ಯ ಮತ್ತು ಆಪ್ತತೆ ಎಲ್ಲರಿಗೂ ತಿಳಿದಿರುವಂತದ್ದೇ. ಹೀಗಿರುವಾಗ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರನೇ ಖುದ್ದಾಗಿ ಮುಂದಿನ ಮುಖ್ಯಮಂತ್ರಿ ಎಂಬ ಒಕ್ಕಣೆಯಿರುವ ಬ್ಯಾನರ್ ಹಾಕಿರುವುದು ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿರುವಾಗಲೇ, ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲಿ ಈ ವಿದ್ಯಮಾನ ನಡೆದಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಹೈಕಮಾಂಡ್‌ಗೆ ರವಾನೆಯಾಗುತ್ತಿದೆಯೇ ಸಂದೇಶ?

ಲೋಕಸಭೆ ಚುನಾವಣೆಗಳ ನಂತರ ರಾಜ್ಯ ರಾಜಕಾರಣದಲ್ಲಿ ಒಂದಿಲ್ಲೊಂದು ಬದಲಾವಣೆಗಳಾಗಬಹುದು ಎಂಬ ವದಂತಿಗಳ ನಡುವೆ, ಡಿ.ಕೆ.ಶಿ ಬೆಂಬಲಿಗರು ಸದ್ದಿಲ್ಲದೆ ಈ ರೀತಿಯ ಅಭಿಯಾನ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ನಂತರ ಈಗ ಬೆಳಗಾವಿಯಲ್ಲೂ ಇಂತಹ ಬ್ಯಾನರ್‌ಗಳು ಪ್ರದರ್ಶನಗೊಳ್ಳುತ್ತಿರುವುದು ಕೇವಲ ಹುಟ್ಟುಹಬ್ಬದ ಸಂಭ್ರಮಕ್ಕೆ ಸೀಮಿತವಾಗಿರದೆ, ಹೈಕಮಾಂಡ್‌ಗೆ ಕಳುಹಿಸುತ್ತಿರುವ ಒಂದು ಸ್ಪಷ್ಟ ರಾಜಕೀಯ ಸಂದೇಶವೇ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯ ವಿಶ್ಲೇಷಕರಲ್ಲಿ ತೀವ್ರಗೊಂಡಿದೆ.

Share. Facebook Twitter LinkedIn WhatsApp Email

Related Posts

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold, Silver Prices

1 Min Read

ಹಾಸನದಲ್ಲಿ ವರದಕ್ಷಿಣೆ ಹಣಕ್ಕಾಗಿ, ಪ್ರೀತಿಸಿ ಮದುವೆಯಾದ ಪತ್ನಿಗೆ ಚಾಕು ಇರಿದು ಕೊಲೆಗೆ ಯತ್ನ : ಆರೋಪಿ ಪತಿ ಅರೆಸ್ಟ್!

1 Min Read

BREAKING : ನಟ ದರ್ಶನ್ ಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ : ಇನ್ನೂ ಒಂದು ವರ್ಷ ಜೈಲುವಾಸ ಖಾಯಂ | Actor Darshan

2 Mins Read
Recent News

BIG NEWS : ದೇಶದಲ್ಲಿ ಚಿನ್ನದ ಆಮದು ನಿಯಮ ಇನ್ನಷ್ಟು ಕಠಿಣ: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ | Gold Imports

BIG NEWS : ಮುಂದಿನ ‘CM’ ಟ್ರೆಂಡ್ : ಬೆಂಗಳೂರು ಬೆನ್ನಲ್ಲೇ, ಬೆಳಗಾವಿಯಲ್ಲೂ ಡಿ.ಕೆ. ಶಿವಕುಮಾರ್ ಬ್ಯಾನರ್ ರಾಜಕಾರಣ!

SHOCKING : ‘ನಾನು ಒಳ್ಳೆಯ ಮಗನಾಗಲು ಸಾಧ್ಯವಾಗಲಿಲ್ಲ’ : ಡೆತ್ ನೋಟ್ ಬರೆದಿಟ್ಟು ಬಿ.ಟೆಕ್ ವಿದ್ಯಾರ್ಥಿ ಆತ್ಮಹತ್ಯೆ.!

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold, Silver Prices

State News
KARNATAKA

BIG NEWS : ಮುಂದಿನ ‘CM’ ಟ್ರೆಂಡ್ : ಬೆಂಗಳೂರು ಬೆನ್ನಲ್ಲೇ, ಬೆಳಗಾವಿಯಲ್ಲೂ ಡಿ.ಕೆ. ಶಿವಕುಮಾರ್ ಬ್ಯಾನರ್ ರಾಜಕಾರಣ!

By ಸುರೇಶ್‌ KARNATAKA 2 Mins Read

ಬೆಳಗಾವಿ :ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಒಳಗೊಳಗೇ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ‘ಮುಂದಿನ…

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold, Silver Prices

ಹಾಸನದಲ್ಲಿ ವರದಕ್ಷಿಣೆ ಹಣಕ್ಕಾಗಿ, ಪ್ರೀತಿಸಿ ಮದುವೆಯಾದ ಪತ್ನಿಗೆ ಚಾಕು ಇರಿದು ಕೊಲೆಗೆ ಯತ್ನ : ಆರೋಪಿ ಪತಿ ಅರೆಸ್ಟ್!

BREAKING : ನಟ ದರ್ಶನ್ ಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ : ಇನ್ನೂ ಒಂದು ವರ್ಷ ಜೈಲುವಾಸ ಖಾಯಂ | Actor Darshan

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.