ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಆಗಿರುವ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದು, ಇದೀಗ ಸುಪ್ರೀಂ ಕೋರ್ಟಲ್ಲಿ ನಟ ದರ್ಶನ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಒಂದು ವರ್ಷದವರೆಗೆ ಸಾಕ್ಷಿಗಳ ವಿಚಾರಣೆಗೆ ಕಾಲಾವಕಾಶ ನೀಡಿದ್ದು, ಹಾಗಾಗಿ ನಟ ದರ್ಶನ್ ಗೆ ಇನ್ನೂ ಒಂದು ವರ್ಷ ಜೈಲುವಾಸವೇ ಖಾಯಂ ಆಗಿದೆ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ನೋಯಿ ಅವರ ಪೀಠದಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯಿತು. ದರ್ಶನ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ವಿಚಾರಣೆ ವೇಳೆ 272 ಸಾಕ್ಷಿಗಳಲ್ಲಿ 10 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದಾರೆ. 150 ಸಾಕ್ಷಿಗಳ ವಿಚಾರಣೆ ಮಾಡುತ್ತೇವೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಜೈಲಿನಲ್ಲಿ ದರ್ಶನ್ ಗೆ ಕನಿಷ್ಠ ಮೂಲ ಸವಲತ್ತು ಸಹ ನೀಡಿಲ್ಲ. ಈ ವೇಳೆ ನಿಮಗೆಲ್ಲಾ ಕನಿಷ್ಠ ಸವಲತ್ತು ನೀಡಲಾಗಿದೆ. ಪ್ರಮಾಣ ಪತ್ರದಲ್ಲಿ ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದಾರೆ ಎಂದು ಇದೆ ವೇಳೇ ಜಡ್ಜ್ ಮುಕುಲ್ ಅವರ ವಾದ ತಳ್ಳಿ ಹಾಕಿದರು.
ಬೇರೆ ಖೈದಿಗಳಿಗೆ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡುತ್ತಾರೆ. 70 ಬಾರಿ ಕುಟುಂಬದವರ ಭೇಟಿಗೆ ಅವಕಾಶ ನೀಡಿದ್ದೇವೆ ಎನ್ನುತ್ತಾರೆ ಆದರೆ ಮಾತನಾಡುವಾಗ ಪೊಲೀಸರು ಜೊತೆಗೆ ಇರುತ್ತಾರೆ ಎಂದು ಮುಕುಲ್ ರೋಹ್ಟಗಿ ವಾದಿಸಿದರು. ನಾವು ಇನ್ನು ಸ್ವಲ್ಪ ದಿನ ಕಾದು ನೋಡೋಣ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪರ್ದಿವಾಲ ತಿಳಿಸಿದರು. ಈ ವೇಳೆ ಮುಕುಲ್ ಅವರು ಜುಲೈಗೆ ದಿನಾಂಕ ನಿಗದಿಪಡಿಸಿ ಇನ್ನು ಕ್ವಾರಂಟೈನ್ ಸೆಲ್ ನಲ್ಲಿ ದರ್ಶನ್ ಅವರನ್ನು ಇಡಲಾಗಿದೆ ಎಂದಾಗ ಈ ವೇಳೆ ಜೈಲು ನಿಯಮದಂತೆ ಸವಲತ್ತು ನೀಡಲಾಗುತ್ತಿದೆ. ನಾವು 57ನೇ ಸಿಸಿಎಚ್ ಕೋರ್ಟ್ ನಿಂದ ವರದಿ ಕೇಳಿದ್ದೆವು. ಸಾಕ್ಷಿಗಳ ವಿಚಾರಣೆಗಳ ಬಗ್ಗೆ 57ನೇ ಸಿಸಿಎಚ್ ಕೋರ್ಟ್ ವರದಿ ನೀಡಿದೆ ಎಂದು ಜಡ್ಜ್ ತಿಳಿಸಿದರು.
ಕ್ವಾರಂಟೈನ್ ಸೆಲ್ ನಲ್ಲಿ ಯಾಕೆ ಇಡಲಾಗಿದೆ? ನಾವು ಇನ್ನೂ ಸ್ವಲ್ಪ ದಿನ ಕಾದು ನೋಡೋಣ. ಹಾಗಿದ್ದರೆ ನಮಗೆ ಒಂದು ವರ್ಷ ಸಮಯ ನೀಡುತ್ತೇವೆ. ಪ್ರತಿಕ್ಷ ಸಾಕ್ಷಿಗಳ ವಿಚಾರಣೆ ಮುಗಿಸಿ ಎಂದು ನಾವು ಕೇಳಿದ್ದೇವೆ ಆದರೆ ಮುಖ್ಯ ಸಾಕ್ಷಿಗಳಾರಣೆಯನ್ನೇ ಇನ್ನು ಮುಗಿಸಿಲ್ಲ ಎಂದು ಮುಕುಲ್ ರೋಹ್ಟಗಿ ಜಡ್ಜ್ ಗೆ ತಿಳಿಸಿದರು. ನೀವು ಸಾಕ್ಷಿಗಳ ವಿಚಾರದಲ್ಲಿ ಏನು ಮಾಡಿದ್ದೀರಾ ಹೇಳುವುದಿಲ್ಲ ಹೇಳಿದರೆ ನಿಮ್ಮ ಜಾಮೀನು ಅರ್ಜಿಯೇ ವಜಾ ಗೊಳ್ಳಬಹುದು ಎಂದು ಜಡ್ಜ್ ತಿಳಿಸಿದರು.
ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ವರದಿಯನ್ನು ಈ ಹಿಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕೇಳಿತ್ತು. ಎಷ್ಟು ಸಾಕ್ಷಿಗಳ ವಿಚಾರಣೆಯಾಗಿದೆ? ಇನ್ನೂ ಎಷ್ಟು ಸಾಕ್ಷಿಗಳ ವಿಚಾರಣೆ ಬಾಕಿ ಇದೆ? ಎಂದು ವರದಿ ಕೇಳಿತ್ತು. ವಿಚಾರಣೆ ಪೂರ್ಣಗೊಳಿಸಲು ಎಷ್ಟು ಸಮಯ ಬೇಕು? ಜೈಲಲ್ಲಿ ಮೂಲ ಸವಲತ್ತುಗಳನ್ನು ಒದಗಿಸಲಾಗಿದೆಯೇ? ಎಂದು ಇದೆಲ್ಲದರ ಬಗ್ಗೆ ವರದಿ ಕೇಳಿತ್ತು.








