ಹಾಸನ : ಹಾಸನದಲ್ಲಿ ಘೋರ ಘಟನೆ ನಡೆದಿದ್ದು ವರದಕ್ಷಿಣೆ ಹಣಕ್ಕಾಗಿ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಗಂಡನೊಬ್ಬ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಈ ಒಂದು ಘಟನೆ ಸಂಭವಿಸಿದೆ.
ಚಾಕುವಿನಿಂದ ಇರಿದು ಪತ್ನಿ ರೋಜಾ ಕೊಲೆಗೆ ಪತಿ ಉಮೇಶ್ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಕೊಂಡ ರೋಜಾ ಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಉಮೇಶ್ ಅನ್ನು ಹಾಸನ ಮಹಿಳಾ ಠಾಣೆ ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಮಂಜುಳಾ ಹಾಗೂ ಅತ್ತಿಗೆ ವೀಣಾ ವಿರುದ್ಧವು ಪ್ರಕರಣ ದಾಖಲಾಗಿದೆ. ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.







