Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು

BREAKING: ಮೌನಿ ರಾಯ್ – ಸೂರಜ್ ನಂಬಿಯಾರ್ ವಿಚ್ಛೇದನ ಖಚಿತ: ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ | Actress Mouni Roy

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು
KARNATAKA

BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಸಾಗರ ತಾಲೂಕಿನ ಕಸಬಾ ಹೋಬಳಿ ನಾಡಕಲಸಿ ಗ್ರಾಮದ ಸರ್ವೆ ನಂ. 49ರಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ಭೂ ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸ್ವಯಂ ಪ್ರೇರಿತ (Suo-Moto) ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ:

ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ವರದಿಗಾರರಾದಂತ ಮಹೇಶ್ ಹೆಗಡೆ ಅವರು ಮೇ 13, 2026 ರಂದು “ಕಂದಾಯ ಭೂಮಿ ಒತ್ತುವರಿ: ಕ್ರಮ ಕೈಗೊಳ್ಳುವವರು ಯಾರು?” ಎಂಬುದಾಗಿ ವರದಿಯನ್ನು ಪ್ರಕಟಿಸಿದ್ದರು. ಈ ಆಧಾರದ ಮೇಲೆ ಈ ಕ್ರಮ ಜರುಗಿಸಲಾಗಿದೆ. ಸಾಗರದಿಂದ ತ್ಯಾಗರ್ತಿಗೆ ಹೋಗುವ ಮಾರ್ಗದಲ್ಲಿ ರೈಲ್ವೇ ಗೇಟ್ ದಾಟಿದ ನಂತರ ರಸ್ತೆಯ ಎಡಭಾಗದಲ್ಲಿರುವ ಸುಮಾರು 123 ಎಕರೆ ದಟ್ಟ ಅರಣ್ಯ ಪ್ರದೇಶದ ಕಂದಾಯ ಭೂಮಿಯು ರಾಜಾರೋಷವಾಗಿ ಒತ್ತುವರಿಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಒತ್ತುವರಿಯ ಸ್ವರೂಪ:

  • ಕಾಡು ನಾಶ: ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ದಟ್ಟ ಅರಣ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ.

  • ಮರಗಳಿಗೆ ಬೆಂಕಿ: ನೂರಾರು ವರ್ಷ ಹಳೆಯ ಮರಗಳನ್ನು ಕಡಿದು, ಸಾಕ್ಷ್ಯ ನಾಶಪಡಿಸಲು ಮರದ ಬುಡಗಳಿಗೆ ಬೆಂಕಿ ಹಚ್ಚಲಾಗುತ್ತಿದೆ.

  • ಕೃಷಿ ಚಟುವಟಿಕೆ: ಒತ್ತುವರಿ ಮಾಡಿದ ಜಾಗದಲ್ಲಿ ಜೆಸಿಬಿ ಬಳಸಿ ಸಮತಟ್ಟುಗೊಳಿಸಿ, ಶುಂಠಿ ಹಾಗೂ ಅಡಿಕೆ ಸಸಿಗಳನ್ನು ನೆಡಲಾಗಿದೆ.

  • ಶೆಡ್ ನಿರ್ಮಾಣ: ರಸ್ತೆಯ ಪಕ್ಕದಲ್ಲೇ ಸಣ್ಣ ಸಣ್ಣ ಶೆಡ್‌ಗಳನ್ನು ನಿರ್ಮಾಣ ಮಾಡಿ ಬೇಲಿ ಹಾಕಿಕೊಳ್ಳಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿ:

ಗೂಗಲ್ ಮ್ಯಾಪ್‌ನಲ್ಲಿ ಈಗಲೂ ಈ ಪ್ರದೇಶವು ದಟ್ಟ ಅರಣ್ಯವೆಂದು ಕಾಣಿಸಿದರೂ, ವಾಸ್ತವದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಅವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಆಸ್ತಿ ರಕ್ಷಿಸಬೇಕಾದ ಅಧಿಕಾರಿಗಳ ಈ ನಡವಳಿಕೆಯನ್ನು ಲೋಕಾಯುಕ್ತರು “ಕರ್ತವ್ಯ ಲೋಪ” ಎಂದು ಪರಿಗಣಿಸಿದ್ದಾರೆ.

ಲೋಕಾಯುಕ್ತರ ನಿರ್ದೇಶನಗಳು:

ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಈ ಕೆಳಗಿನ ಕ್ರಮಗಳಿಗೆ ಆದೇಶಿಸಿದ್ದಾರೆ:

  1. ತನಿಖೆಗೆ ಆದೇಶ: ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಅವರು ಸಾಗರ ಉಪವಿಭಾಗದ ಸಹಾಯಕ ಕಮೀಷನರ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಫೋಟೋ ಮತ್ತು ವಿಡಿಯೋ ಸಹಿತ ಪ್ರಾಥಮಿಕ ವರದಿಯನ್ನು ಎರಡು ವಾರಗಳೊಳಗೆ ಸಲ್ಲಿಸಬೇಕು.

  2. ಜವಾಬ್ದಾರಿ ನಿಗದಿ: ಈ ಒತ್ತುವರಿಗೆ ಕಾರಣರಾದ ಅಥವಾ ಮೌನವಾಗಿದ್ದ ಅಧಿಕಾರಿಗಳ ಹೆಸರು ಮತ್ತು ಹುದ್ದೆಯನ್ನು ಪತ್ತೆಹಚ್ಚಲು ಸೂಚಿಸಲಾಗಿದೆ.

  3. ಪ್ರತಿವಾದಿಗಳು: ಸಾಗರ ತಹಶೀಲ್ದಾರ್ ಪ್ರದೀಪ್ ನಿಕ್ಕಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ, ವಲಯ ಅರಣ್ಯಾಧಿಕಾರಿ ಮೋಹನ್ ಮತ್ತು ಸಹಾಯಕ ಭೂ ದಾಖಲೆಗಳ ನಿರ್ದೇಶಕ ನಂಜುಂಡಪ್ಪ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಈ ಆದೇಶದ ಪ್ರತಿಯನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಮತ್ತು ಪರಿಸರ ಸಚಿವರಿಗೂ ರವಾನಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯು ಜೂನ್ 01, 2026 ರಂದು ನಡೆಯಲಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

1 Min Read

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

2 Mins Read

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

1 Min Read
Recent News

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು

BREAKING: ಮೌನಿ ರಾಯ್ – ಸೂರಜ್ ನಂಬಿಯಾರ್ ವಿಚ್ಛೇದನ ಖಚಿತ: ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ | Actress Mouni Roy

BREAKING: ನೀಟ್-ಯುಜಿ ಪೇಪರ್ ಸೋರಿಕೆ: ದೇಶಾದ್ಯಂತ 14 ಕಡೆ ಸಿಬಿಐ ದಾಳಿ, ಮತ್ತೆ ಇಬ್ಬರ ಬಂಧನ

State News
KARNATAKA

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹವಾಮಾನ ವೈಪರಿತ್ಯ ಹಾಗೂ ಭಾರೀ ಮಳೆಯ ಹಿನ್ನೆಲೆಯಲ್ಲಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ…

BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.