Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ
KARNATAKA

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೇ 14ರಿಂದ 17ರವರೆಗೆ ನಡೆಯಲಿರುವ ಇಎಲ್‌ಎಎಸ್‌ಐಎ 2026 ಭಾಗವಾದ ರಿನ್ಯೂವೆಬಲ್ ಏಷ್ಯಾ ಅಂಡ್‌ ಎನರ್ಜಿ ಎಕ್ಸ್‌ಪೋದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ರಾಜ್ಯದ ನವೀಕರಿಸಬಹುದಾದ ಇಂಧನ ವಲಯದ ನಾವೀನ್ಯತೆಗಳು ಮತ್ತು ಇತರ ಉಪಕ್ರಮಗಳನ್ನು ಪ್ರದರ್ಶಿಸುತ್ತಿದೆ.

ಎಕ್ಸ್‌ಪೋದಲ್ಲಿ ಸ್ಟಾಲ್‌ ತೆರೆದಿರುವ ಕ್ರೆಡಲ್‌- ನವೀಕರಿಸಬಹುದಾದ ಇಂಧನ ಪರಿವರ್ತನೆಗಳು, ವಿವಿಧ ಉಪಕ್ರಮಗಳು, ನಾವಿನ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುತ್ತಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸುಸ್ಥಿರ ಇಂಧನ ಪರಿಹಾರಗಳನ್ನು ಉತ್ತೇಜಿಸುವ ಜತೆಗೆ ಇಂಧನ ಭದ್ರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರೆಡಲ್‌ನ ಬದ್ಧತಯನ್ನು ಈ ಮೂಲಕ ಎತ್ತಿ ಹಿಡಿಯಲಾಗುತ್ತಿದೆ.

ಸೌರ-ಪವನ ಹೈಬ್ರಿಡ್ ಪಾರ್ಕ್ ಗಳು, ಬ್ಯಾಟರಿ ಇಂಧನ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಗ್ರೀನ್ ಹೈಡ್ರೋಜನ್‌ನ ಪ್ರಾಯೋಗಿಕ ಯೋಜನೆಗಳ ಮೂಲಕ ಹೊಸ ಆವಿಷ್ಕಾರಗಳನ್ನು ಕ್ರೆಡಲ್‌ ಉತ್ತೇಜಿಸುತ್ತಿದೆ. ಈ ಕ್ರಮಗಳು ಕೇವಲ ಸಾಮರ್ಥ್ಯ ವೃದ್ಧಿಗಷ್ಟೇ ಸೀಮಿತವಾಗಿರದೆ, ಭವಿಷ್ಯದ ಇಂಧನ ವ್ಯವಸ್ಥೆಯನ್ನು ನಿರ್ಮಿಸುವ ಗುರಿ ಹೊಂದಿದೆ.

ಎಕ್ಸ್‌ಪೋದಲ್ಲಿ ಕ್ರೆಡಲ್ ಪಾತ್ರದ ಬಗ್ಗೆ ಮಾತನಾಡಿರುವ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ,”ಇಂಧನ ಸಚಿವರಾದ ಕೆ.ಜೆ.ಜಾರ್ಜ್‌ ಅವರ ನೇತೃತ್ವ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಮಾರ್ಗದರ್ಶನದಲ್ಲಿ ಕ್ರೆಡಲ್ ರಾಜ್ಯಾದ್ಯಂತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಜ್ಯದ ಈ ಪ್ರಗತಿ ಸೌರ ಮತ್ತು ಪವನ ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಹೈಬ್ರಿಡ್ ಇಂಧನ ವ್ಯವಸ್ಥೆಗಳು ಹಾಗೂ ಇಂಧನ ಸಂಗ್ರಹಣಾ ಪರಿಹಾರಗಳತ್ತವೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ,” ಎಂದು ಹೇಳಿದರು.

“ಎಕ್ಸ್‌ಪೋದಲ್ಲಿ ಭಾಗವಹಿಸುವ ಮೂಲಕ, ನವೀಕರಿಸಬಹುದಾದ ಇಂಧನ ವಲಯದಲ್ಲಿ ರಾಜ್ಯದ ಸಾಧನೆಗಳನ್ನು ಪ್ರದರ್ಶಿಸುವ ಉದ್ದೇಶ ನಮ್ಮದು. ರಾಜ್ಯದ ಸುಸ್ಥಿರ ಇಂಧನ ಭವಿಷ್ಯವನ್ನು ಮತ್ತಷ್ಟು ಬಲಪಡಿಸುವ ಸಹಯೋಗಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಅನ್ವೇಷಣೆಗೂ ಇದರಿಂದ ನೆರವಾಗಲಿದೆ.ಸ್ಟಾಲ್‌ನಲ್ಲಿರುವ ಕ್ರೆಡಲ್‌ ಅಧಿಕಾರಿಗಳು ನವೀಕರಿಸಬಹುದಾದ ಇಂಧನ ವಲಯದ ಯೋಜನೆಗಳು, ನಿಯಮಿತದ ಸೇವೆಗಳು ಮತ್ತು ತಾಂತ್ರಿಕ ಅನುಷ್ಠಾನಗಳ ಬಗ್ಗೆ ಸಂದರ್ಶಕರಿಗೆ ಮಾಹಿತಿ ಒದಗಿಸುತ್ತಿದ್ದಾರೆ,” ಎಂದು ಅವರು ಹೇಳಿದರು.

ರಿನ್ಯೂವೆಬಲ್ ಏಷ್ಯಾ ಅಂಡ್‌ ಎನರ್ಜಿ ಎಕ್ಸ್‌ಪೋ

ದೇಶ ಹಾಗೂ ವಿದೇಶಗಳ ಪಾಲುದಾರರು ಭಾಗಿಯಾಗಿರುವ ರಿನ್ಯೂವೆಬಲ್ ಏಷ್ಯಾ ಅಂಡ್‌ ಎನರ್ಜಿ ಎಕ್ಸ್‌ಪೋ- ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆ ಮತ್ತು ಮುಂದಿನ ಪೀಳಿಗೆಯ ವಿದ್ಯುತ್ ಪರಿಹಾರಗಳಲ್ಲಿನ ಪ್ರಗತಿಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ಎಕ್ಸ‌ಪೋದಲ್ಲಿ ಕರ್ನಾಟಕವು ತನ್ನ ಹೈಬ್ರಿಡ್ ಇಂಧನ, ಶೇಖರಣಾ ವ್ಯವಸ್ಥೆ ಮತ್ತು ನೀತಿ ನಾವೀನ್ಯತೆಯಲ್ಲಿ ಪ್ರಸ್ತುತಪಡಿಸುತ್ತದೆ.

Share. Facebook Twitter LinkedIn WhatsApp Email

Related Posts

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

1 Min Read

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

1 Min Read

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

1 Min Read
Recent News

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘DUPLICATE TC ’ ಪಡೆಯಲು ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ

State News
KARNATAKA

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

By kannadanewsnow57 KARNATAKA 1 Min Read

ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ತನ್ನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ದೈನಂದಿನ ಹಾಜರಾತಿ ಪ್ರಕ್ರಿಯೆಯನ್ನು…

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘DUPLICATE TC ’ ಪಡೆಯಲು ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.