ಬೆಂಗಳೂರು : ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ಒಟ್ಟು 7 ಲಕ್ಷ ಬಿ ಖಾತೆಗಳಿವೆ ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅಭಿಯಾನ ಮಾಡುತ್ತೇವೆ. ನಗರದಲ್ಲಿ ಕೆಲವರು ಪ್ಲಾನ್ ಇಲ್ಲದೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಂಥವರ ಅನುಕೂಲಕ್ಕಾಗಿ ಈ ಅಭಿಯಾನ ಅಂದ್ಕೊಂಡಿದ್ದೇವೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಮೇ 16ರ ಬಳಿಕ ಪ್ರತಿ ಶನಿವಾರ ಜಾಗ ನಿಗದಿ ಮಾಡಿ ಅಭಿಯಾನ ಮಾಡುತ್ತೇವೆ ಶಾಲಾ ಆವರಣದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 10 ಕಡೆ ಅಭಿಯಾನ ಮಾಡಲಾಗುತ್ತದೆ. ಅಧಿಕಾರಿಗಳು ರಜೆ ಇದ್ದರೂ ಕೂಡ ಕೆಲಸ ಮಾಡಬೇಕು. 7 ಲಕ್ಷ ಈ ಕಾತೆದಾರಿಗೆ ಇದರಿಂದ ಅನುಕೂಲ ಆಗಲಿದೆ. ಬಿ ಖಾತೆಯಿಂದ ಏ ಖಾತೆ ಮಾಡಿಕೊಳ್ಳಲು ಗೈಡೆನ್ಸ್ ವ್ಯಾಲ್ಯೂ ಇಳಿಕೆ. ಶೇಕಡ 2ಡಕ್ಕೆ ಗೈಡೆನ್ಸ್ ವ್ಯಾಲ್ಯೂ ಇಳಿಕೆ ಆಗಲಿದೆ. ಭೂ ಗ್ಯಾರಂಟಿ ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಆಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ನೂರು ದಿನ ಟೈಮ್ ಇರಲಿದೆ ನೂರು ದಿನದಲ್ಲಿ ಮಾಡಿಕೊಳ್ಳದಿದ್ದರೆ ಶೇಕಡ 5ರಷ್ಟು ಗೈಡೆನ್ಸ್ ವ್ಯಾಲ್ಯೂ ಇಳಿಕೆ ಆಗಲಿದೆ. ಬೆಂಗಳೂರಿನಲ್ಲಿ 23 ಲಕ್ಷ ಮನೆಗಳಿಗೆ ಅಧಿಕೃತ ದಾಖಲೆಗಳು ಇವೆ. ಈ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಆಗಿರಲಿಲ್ಲ ನಮ್ಮ ಸರ್ಕಾರ ಬಂದ ಮೇಲೆ ಆಸ್ತಿ ದಾಖಲೆ ಸ್ಕ್ಯಾನ್ ಮಾಡಿಸಿದ್ದೇವೆ ಅವರ ಆಸ್ತಿ ಅವರ ಹಕ್ಕಾಗಿ ಉಳಿಬೇಕು ನನ್ನ ಖಾತೆ ನನ್ನ ಹಕ್ಕು ಅಭಿಯಾನ ಹಮ್ಮಿಕೊಂಡಿದ್ದೇವೆ ವಿರೋಧ ಪಕ್ಷಗಳ ನಾಯಕರು ಕೂಡ ಅನೇಕ ಸಲಹೆ ಕೊಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.








