Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಾಮರಾಜನಗರದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

SHOCKING : ಕಪ್ಪಾಗಿದ್ದಾನೆ ಎಂದು 11 ವರ್ಷದ ಮಗನನ್ನೇ ಹತ್ಯೆಗೈದ ಪಾಪಿ ತಂದೆ!

ರಾಜ್ಯದ ಜನತೆ ಗಮನಕ್ಕೆ : ಕರ್ನಾಟಕದ ಎಲ್ಲಾ ಜಿಲ್ಲೆಗಳ `SP’ಗಳ ದೂರವಾಣಿ ಸಂಖ್ಯೆ ಇಲ್ಲಿದೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 22,000 ವಿದ್ಯಾರ್ಥಿಗಳು, 24 ಗಂಟೆಗಳ ಕಠಿಣ ಸವಾಲು: ಕಾಗ್ನಿಜೆಂಟ್ ಹ್ಯಾಕಥಾನ್‌ನಲ್ಲಿ ಪ್ರಥಮ ಬಹುಮಾನ ಗೆದ್ದ ಚೆನ್ನೈ ತಂಡ
KARNATAKA

22,000 ವಿದ್ಯಾರ್ಥಿಗಳು, 24 ಗಂಟೆಗಳ ಕಠಿಣ ಸವಾಲು: ಕಾಗ್ನಿಜೆಂಟ್ ಹ್ಯಾಕಥಾನ್‌ನಲ್ಲಿ ಪ್ರಥಮ ಬಹುಮಾನ ಗೆದ್ದ ಚೆನ್ನೈ ತಂಡ

By ವಸಂತ್‌ ಬಿ ಈಶ್ವರಗೆರೆ

ಬೆಂಗಳೂರು: ಭವಿಷ್ಯದ ಕೃತಕ ಬುದ್ಧಿಮತ್ತೆ (ಎಐ) ತಜ್ಞರನ್ನು ಪ್ರೋತ್ಸಾಹಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಐಟಿ ದಿಗ್ಗಜ ಸಂಸ್ಥೆ ಕಾಗ್ನಿಜೆಂಟ್ ‘ಟೆಕ್ನೋವರ್ಸ್ ಹ್ಯಾಕಥಾನ್ 2026’ನ್ನು ಆಯೋಜಿಸಿತ್ತು. ಪುಣೆಯ ಕ್ಯಾಂಪಸ್‌ನಲ್ಲಿ ನಡೆದ ಅದ್ದೂರಿ ಫೈನಲ್ಸ್‌ನೊಂದಿಗೆ ಈ ಹ್ಯಾಕಥಾನ್‌ ಮುಕ್ತಾಯಗೊಂಡಿದೆ.

ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚೆನ್ನೈನ ‘ಚೆನ್ನೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ‘ಟೀಮ್ ಏರೋಫೈಟಾ’ ತಂಡವು ಪ್ರಥಮ ಸ್ಥಾನ ಪಡೆದು 3,00,000 ರೂ. ನಗದು ಬಹುಮಾನವನ್ನು ಜೇಬಿಗಿಳಿಸಿಕೊಂಡಿತು.

ಕೋಲ್ಕತ್ತಾದ ‘ಟೆಕ್ನೋ ಮೈನ್ ಸಾಲ್ಟ್ ಲೇಕ್’ ಕಾಲೇಜಿನ ‘ಟೀಮ್ ಆಲ್ಗೊರಿದಮ್ಸ್‌’ ದ್ವಿತೀಯ ಸ್ಥಾನ ಪಡೆದು 2,00,000 ರೂ. ನಗದು ಬಹುಮಾನ ಪಡೆದರೆ, ಕೊಯಮತ್ತೂರಿನ ‘ಕಾರುಣ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸಸ್’ನ ‘ಟೀಮ್ ದೇವ್‌ಟ್ರಾನಿಕ್ಸ್’ ತೃತೀಯ ಸ್ಥಾನದೊಂದಿಗೆ 1,00,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

ದೇಶಾದ್ಯಂತ ತಂತ್ರಜ್ಞಾನ ಕೌಶಲ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾಗ್ನಿಜೆಂಟ್‌ ಹಮ್ಮಿಕೊಂಡಿದ್ದ ಈ ಹ್ಯಾಕಥಾನ್‌ನಲ್ಲಿ ಭಾರತದ 160ಕ್ಕೂ ಹೆಚ್ಚು ನಗರಗಳ ಐಐಟಿ, ಎನ್‌ಐಟಿ ಹಾಗೂ ಐಐಐಟಿ ಸೇರಿದಂತೆ 450ಕ್ಕೂ ಹೆಚ್ಚು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಬರೋಬ್ಬರಿ 22,000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಗಮನ ಸೆಳೆದ ಮಹಿಳಾ ಸ್ಪರ್ಧಿಗಳು

ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ, ಪ್ರತಿ 4 ಸದಸ್ಯರ ತಂಡದಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಇರಲೇಬೇಕು ಎಂಬ ನಿಯಮವನ್ನು ಕಾಗ್ನಿಜೆಂಟ್ ರೂಪಿಸಿತ್ತು. ಆದರೆ ನಿರೀಕ್ಷೆ ಮೀರಿ ಒಟ್ಟು ಸ್ಪರ್ಧಿಗಳಲ್ಲಿ ಶೇ. 62ರಷ್ಟು ಮಹಿಳೆಯರೇ ಆಗಿದ್ದರು. ಅಷ್ಟೇ ಅಲ್ಲದೆ, ಭಾಗವಹಿಸಿದ್ದ 5,600 ತಂಡಗಳ ಪೈಕಿ 1,100 ಕ್ಕೂ ಹೆಚ್ಚು ತಂಡಗಳು ಸಂಪೂರ್ಣವಾಗಿ ಮಹಿಳೆಯರಿಂದಲೇ ಕೂಡಿದ್ದವು.

ಹೈದರಾಬಾದ್, ಚೆನ್ನೈ, ಬೆಂಗಳೂರು, ಕೊಯಮತ್ತೂರು ಹಾಗೂ ಪುಣೆ ನಗರಗಳಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಹ್ಯಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.

ಕಾಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಗ್ಲೋಬಲ್ ಆಪರೇಷನ್ಸ್) ರಾಜೇಶ್ ವಾರಿಯರ್ ಈ ಬಗ್ಗೆ ಮಾತನಾಡಿ, “ಎಐ ಮತ್ತು ಎಂಟರ್‌ಪ್ರೈಸ್ ಮೌಲ್ಯದ ನಡುವಿನ ಅಂತರವನ್ನು ಕಡಿಮೆ ಮಾಡಲು ತಂತ್ರಜ್ಞಾನದ ಜೊತೆಗೆ ಪ್ರತಿಭೆಯೂ ಬೆಳೆಯಬೇಕು. ಇದನ್ನು ನಾವು ಅರಿತಿದ್ದು, ಟೆಕ್ನೋವರ್ಸ್ ಹ್ಯಾಕಥಾನ್ 2026 ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸಾವಿರಾರು ವಿದ್ಯಾರ್ಥಿಗಳು, ಅದರಲ್ಲೂ ಶೇ. 62ರಷ್ಟು ಮಹಿಳೆಯರು ಇದರಲ್ಲಿ ಭಾಗವಹಿಸಿರುವುದು ಭಾರತದ ಎಂಜಿನಿಯರಿಂಗ್ ಕೌಶಲ್ಯದ ಆಳ ಮತ್ತು ವೈವಿಧ್ಯತೆಯನ್ನು ಸಾಬೀತುಪಡಿಸಿದೆ,” ಎಂದು ಸಂತಸ ವ್ಯಕ್ತಪಡಿಸಿದರು.

24 ಗಂಟೆಗಳ ಕಠಿಣ ಸವಾಲು

ಏಪ್ರಿಲ್‌ನಲ್ಲಿ ಶುರುವಾದ ಈ ಹ್ಯಾಕಥಾನ್‌ನ ಅಂತಿಮ ಹಂತಕ್ಕೆ ಕೇವಲ 24 ತಂಡಗಳು ಶಾರ್ಟ್‌ಲಿಸ್ಟ್ ಆಗಿದ್ದವು. ಈ ತಂಡಗಳಿಗೆ 24 ಗಂಟೆಗಳ ಕಾಲಾವಕಾಶ ನೀಡಿ, ಕನಿಷ್ಠ ಕಾರ್ಯಸಾಧ್ಯ ಉತ್ಪನ್ನವನ್ನು (ಎಂವಿಪಿ) ಅಭಿವೃದ್ಧಿಪಡಿಸಿ ತೀರ್ಪುಗಾರರ ಮುಂದೆ ಪ್ರದರ್ಶಿಸುವ ಸವಾಲು ನೀಡಲಾಗಿತ್ತು. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಪರಿಕರಗಳನ್ನು ಒದಗಿಸಲು ಕಾಗ್ನಿಜೆಂಟ್ ಸಂಸ್ಥೆಯು ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್‌) ನೊಂದಿಗೆ ಕೈಜೋಡಿಸಿತ್ತು.

ಗಿನಿಸ್ ದಾಖಲೆ ನಿರ್ಮಿಸಿತ್ತು ಕಾಗ್ನಿಜೆಂಟ್

ಎಐ ಬಿಲ್ಡರ್ ಆಗಿ ಕಾಗ್ನಿಜೆಂಟ್ ತನ್ನ ಸಂಸ್ಥೆಯಾದ್ಯಂತ ಕೃತಕ ಬುದ್ಧಿಮತ್ತೆ ಆಧಾರಿತ ನಾವೀನ್ಯತೆಯನ್ನು ಬೆಳೆಸುತ್ತಿದೆ. ಕಳೆದ ವರ್ಷ ಜಾಗತಿಕವಾಗಿ ‘ವೈಬ್ ಕೋಡಿಂಗ್ ವೀಕ್’ ಆಯೋಜಿಸುವ ಮೂಲಕ ಅತಿ ದೊಡ್ಡ ಆನ್‌ಲೈನ್ ‘ಜೆನ್‌ಎಐ ಹ್ಯಾಕಥಾನ್’ ನಡೆಸಿದ ಸಂಸ್ಥೆ ಎಂಬ ‘ಗಿನ್ನಿಸ್‌ ವರ್ಲ್ಡ್ ರೆಕಾರ್ಡ್’ ಅನ್ನು ಕಾಗ್ನಿಜೆಂಟ್ ಪಡೆದುಕೊಂಡಿತ್ತು. ಈ ವೇಳೆ ಉದ್ಯೋಗಿಗಳು ತಮ್ಮ ಎಐ ಕೌಶಲ್ಯಗಳನ್ನು ಬಳಸಿ 30,000ಕ್ಕೂ ಹೆಚ್ಚು ಮೂಲಮಾದರಿಗಳು ಅಂದರೆ ಪ್ರೊಟೋಟೈಪ್‌ಗಳನ್ನು ಸೃಷ್ಟಿಸಿದ್ದರು.

ಕನ್ನಡಿಗರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಮೋದಿ ಅವರೇ?: ಕೇಂದ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಹತ್ತು ಪ್ರಶ್ನೆ!

ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌

Share. Facebook Twitter LinkedIn WhatsApp Email

Related Posts

ಚಾಮರಾಜನಗರದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

2 Mins Read

ರಾಜ್ಯದ ಜನತೆ ಗಮನಕ್ಕೆ : ಕರ್ನಾಟಕದ ಎಲ್ಲಾ ಜಿಲ್ಲೆಗಳ `SP’ಗಳ ದೂರವಾಣಿ ಸಂಖ್ಯೆ ಇಲ್ಲಿದೆ

1 Min Read

ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌

2 Mins Read
Recent News

ಚಾಮರಾಜನಗರದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

SHOCKING : ಕಪ್ಪಾಗಿದ್ದಾನೆ ಎಂದು 11 ವರ್ಷದ ಮಗನನ್ನೇ ಹತ್ಯೆಗೈದ ಪಾಪಿ ತಂದೆ!

ರಾಜ್ಯದ ಜನತೆ ಗಮನಕ್ಕೆ : ಕರ್ನಾಟಕದ ಎಲ್ಲಾ ಜಿಲ್ಲೆಗಳ `SP’ಗಳ ದೂರವಾಣಿ ಸಂಖ್ಯೆ ಇಲ್ಲಿದೆ

22,000 ವಿದ್ಯಾರ್ಥಿಗಳು, 24 ಗಂಟೆಗಳ ಕಠಿಣ ಸವಾಲು: ಕಾಗ್ನಿಜೆಂಟ್ ಹ್ಯಾಕಥಾನ್‌ನಲ್ಲಿ ಪ್ರಥಮ ಬಹುಮಾನ ಗೆದ್ದ ಚೆನ್ನೈ ತಂಡ

State News
KARNATAKA

ಚಾಮರಾಜನಗರದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

By ವಸಂತ್‌ ಬಿ ಈಶ್ವರಗೆರೆ KARNATAKA 2 Mins Read

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಹಾದಿಯಲ್ಲಿ ಚಿರತೆ ದಾಳಿಗೆ ಬಲಿಯಾದ ಬೆಂಗಳೂರು ಮೂಲದ ಬಾಲಕನ ಕುಟುಂಬಕ್ಕೆ ಅರಣ್ಯ ಇಲಾಖೆಯು…

ರಾಜ್ಯದ ಜನತೆ ಗಮನಕ್ಕೆ : ಕರ್ನಾಟಕದ ಎಲ್ಲಾ ಜಿಲ್ಲೆಗಳ `SP’ಗಳ ದೂರವಾಣಿ ಸಂಖ್ಯೆ ಇಲ್ಲಿದೆ

22,000 ವಿದ್ಯಾರ್ಥಿಗಳು, 24 ಗಂಟೆಗಳ ಕಠಿಣ ಸವಾಲು: ಕಾಗ್ನಿಜೆಂಟ್ ಹ್ಯಾಕಥಾನ್‌ನಲ್ಲಿ ಪ್ರಥಮ ಬಹುಮಾನ ಗೆದ್ದ ಚೆನ್ನೈ ತಂಡ

ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.