ಮೈಸೂರು : ರಾಜ್ಯದಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತಂತೆ ಹೈಕಮಾಂಡ್ ಈಗಾಗಲೇ ಮಹೂರ್ತ ಫಿಕ್ಸ್ ಮಾಡಿದೆ ಎಂದು ಹೇಳಲಾಗಿರತ್ತು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಇದುವರೆಗೂ ನನ್ನ ರಾಹುಲ್ ಗಾಂಧಿ ದೆಹಲಿಗೆ ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇದುವರೆಗೂ ರಾಹುಲ್ ಗಾಂಧಿ ನನ್ನನ್ನು ದೆಹಲಿಗೆ ಕರೆದಿಲ್ಲ. ನಾನು ಕೂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿಲ್ಲ. ರಾಹುಲ್ ಗಾಂಧಿ ನನ್ನನ್ನು ದೆಹಲಿಗೆ ಕರೆದರೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಹುಲ್ ಗಾಂಧಿ ಭೇಟಿ ಫಿಕ್ಸ್ ಆದಮೇಲೆ ಸಂಪುಟ ಪುನರ್ ರಚನೆ ಆಗುತ್ತಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಂಪುಟ ವಿಸ್ತರಣೆನ ಅಥವಾ ಯಾವ ವಿಷಯದ ಚರ್ಚೆ ಗೊತ್ತಾಗಲಿದೆ. ರಾಹುಲ್ ಕರೆದೇ ಇಲ್ಲ ಅಂದಮೇಲೆ ಅಜೆಂಡ ಹೇಗೆ ಫಿಕ್ಸ್ ಆಗುತ್ತದೆ? ಅವರು ಕರೆಯದಿದ್ದರೆ, ನಾನೇ ರಾಹುಲ್ ಗಾಂಧಿಗೆ ಕೇಳುತ್ತೇನೆ. ಸದ್ಯಕ್ಕಂತೂ ದೆಹಲಿಯ ಪ್ರವಾಸ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.








