ವಾಷಿಂಗ್ಟನ್:ಅಮೆರಿಕದಲ್ಲಿ ಕ್ರಿಶ್ಚಿಯನ್ ಧರ್ಮದ ತತ್ವಗಳನ್ನು ಆಧರಿಸಿದ ವಿಶ್ವದ ಮೊದಲ ‘ಜೀಸಸ್-ಸೆಂಟ್ರಿಕ್’ (Jesus-Centric) ಮೊಬೈಲ್ ನೆಟ್‌ವರ್ಕ್ ಸೇವೆಯು ಶೀಘ್ರದಲ್ಲೇ ಚಾಲನೆಗೊಳ್ಳಲಿದೆ. ಕ್ರಿಶ್ಚಿಯನ್ ಕುಟುಂಬಗಳ ಮೌಲ್ಯಗಳನ್ನು ಕಾಪಾಡುವ ಉದ್ದೇಶದಿಂದ ಆರಂಭವಾಗುತ್ತಿರುವ ಈ ನೆಟ್‌ವರ್ಕ್‌ನಲ್ಲಿ ಅಶ್ಲೀಲ ಸಾಹಿತ್ಯ (Pornography) ಮತ್ತು ಎಲ್‌ಜಿಬಿಟಿ ಕಂಟೆಂಟ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು (Block) ನಿರ್ಧರಿಸಲಾಗಿದೆ.
ಮಕ್ಕಳನ್ನು ಮತ್ತು ಯುವಜನತೆಯನ್ನು ಆನ್‌ಲೈನ್‌ನ ಹಾನಿಕಾರಕ ಕಂಟೆಂಟ್‌ಗಳಿಂದ ದೂರವಿಡಲು ಈ ನೆಟ್‌ವರ್ಕ್ ಸಹಾಯ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಸಿಮ್ ಕಾರ್ಡ್ ಬಳಸುವ ಮೊಬೈಲ್‌ಗಳಲ್ಲಿ ಅಶ್ಲೀಲ ವೆಬ್‌ಸೈಟ್‌ಗಳು ಅಥವಾ ಎಲ್‌ಜಿಬಿಟಿ ಸಂಬಂಧಿತ ಪ್ರಚಾರದ ವಿಷಯಗಳು ಆಟೋಮ್ಯಾಟಿಕ್ ಆಗಿ ಬ್ಲಾಕ್ ಆಗಲಿವೆ.
ಅಮೆರಿಕದ ಸಂಪ್ರದಾಯವಾದಿ ಕ್ರಿಶ್ಚಿಯನ್ ಸಮುದಾಯವು ತಾಂತ್ರಿಕ ಜಗತ್ತಿನಲ್ಲಿ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಪೂರಕವಾದ ವ್ಯವಸ್ಥೆಯನ್ನು ಬಯಸುತ್ತಿರುವುದರಿಂದ ಈ ಸೇವೆಯನ್ನು ಪರಿಚಯಿಸಲಾಗುತ್ತಿದೆ.
ವಿವಾದಕ್ಕೆ ಕಾರಣ: ಈ ನಿರ್ಧಾರವು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹಲವರು ಟೀಕಿಸುತ್ತಿದ್ದರೆ, ಧಾರ್ಮಿಕ ಮುಖಂಡರು ಇದು ಕುಟುಂಬಗಳ ಸುರಕ್ಷತೆಗೆ ಅತ್ಯಗತ್ಯವಾದ ಕ್ರಮ ಎಂದು ಬೆಂಬಲಿಸುತ್ತಿದ್ದಾರೆ.








