ಕೋಲ್ಕತ್ತಾ:ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡುವ ಮೂಲಕ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. “ಜಾಗರೂಕರಾಗಿರಿ, ಕಣ್ಗಾವಲು ಇರಿಸಿ, ರಾತ್ರಿಯಿಡೀ ಎಚ್ಚರವಾಗಿರಿ ಮತ್ತು ದೂರುಗಳನ್ನು ದಾಖಲಿಸಿ” ಎಂದು ಅವರು ಜನತೆಗೆ ಕರೆ ನೀಡಿದ್ದಾರೆ.
“ವಿವಿಧ ಸ್ಥಳಗಳಿಂದ ನನಗೆ ವರದಿಗಳು ಬರುತ್ತಿವೆ. ಹೂಗ್ಲಿಯ ಶ್ರೀರಾಮಪುರ, ನಾಡಿಯಾದ ಕೃಷ್ಣನಗರದಿಂದ ಹಿಡಿದು ಬರ್ಧಮಾನ್‌ನ ಔಸ್‌ಗ್ರಾಮ್ ಮತ್ತು ಕೋಲ್ಕತ್ತಾದ ಕ್ಷುದೀರಮ್ ಅನುಶೀಲನ್ ಕೇಂದ್ರದವರೆಗೆ ಇಂತಹ ಘಟನೆಗಳು ಬೆಳಕಿಗೆ ಬಂದಿವೆ. ಇಲ್ಲಿ ಹಂತ ಹಂತವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಮತ್ತು ಸಿಸಿಟಿವಿಗಳನ್ನು ಆಫ್ ಮಾಡಲಾಗುತ್ತಿದೆ,” ಎಂದು ಅವರು ಬರೆದಿದ್ದಾರೆ.
ಸಿಸಿಟಿವಿ ಆಫ್ ಮಾಡಿರುವ ಸಮಯದಲ್ಲಿ ಸ್ಟ್ರಾಂಗ್ ರೂಮ್‌ಗಳಿಗೆ ವಾಹನಗಳು ಒಳಗೆ ಮತ್ತು ಹೊರಗೆ ಚಲಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.”ಇವೆಲ್ಲವೂ ಬಿಜೆಪಿಯ ಆದೇಶದ ಮೇರೆಗೆ ನಡೆಯುತ್ತಿವೆ. ಯಾರಾದರೂ ಎಲ್ಲಾದರೂ ಅನುಮಾನಾಸ್ಪದ ಪರಿಸ್ಥಿತಿಯನ್ನು ಸೃಷ್ಟಿಸಿದರೆ, ಅವರನ್ನು ತಡೆಯಿರಿ, ತಕ್ಷಣ ದೂರು ದಾಖಲಿಸಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿ,” ಎಂದು ಅವರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.








