ಭಾರತ ಮತ್ತು ಕಾಂಬೋಡಿಯಾ ನಡುವಿನ ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮ ‘CINBAX-II’ ನ ಎರಡನೇ ಆವೃತ್ತಿಯು ಮೇ 04 ರಿಂದ ಮೇ 17 ರವರೆಗೆ ಕಾಂಬೋಡಿಯಾದಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಭಾರತೀಯ ಸೇನೆಯ 120 ಸಿಬ್ಬಂದಿಗಳ ತುಕಡಿಯು ಭಾನುವಾರ (ಮೇ 03) ಪ್ರಯಾಣ ಬೆಳೆಸಿದೆ.
ಕಾಂಬೋಡಿಯಾದ ಕಾಂಪಾಂಗ್ ಸ್ಪೂ ಪ್ರಾಂತ್ಯದಲ್ಲಿರುವ ‘ಟೆಚೊ ಸೆನ್ ನೊಮ್ ಥಾಮ್ ಮ್ರೆಸ್ ಪ್ರೊವ್ ರಾಯಲ್ ಕಾಂಬೋಡಿಯನ್ ಏರ್ ಫೋರ್ಸ್ ಟ್ರೈನಿಂಗ್ ಸೆಂಟರ್’ (ಕ್ಯಾಂಪ್ ಬೆಸಿಲ್).
ಭಾರತೀಯ ಸೇನೆಯ ಪರವಾಗಿ ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನ ಒಂದು ಬೆಟಾಲಿಯನ್ ಭಾಗವಹಿಸುತ್ತಿದೆ. ಕಾಂಬೋಡಿಯಾ ಪರವಾಗಿ 160 ಸಿಬ್ಬಂದಿಗಳು ಪಾಲ್ಗೊಳ್ಳುತ್ತಿದ್ದಾರೆ.ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಭಯೋತ್ಪಾದನಾ ನಿರೋಧಕ ಕಾರ್ಯಾಚರಣೆಗಳು, ಅರೆ-ನಗರ ಪರಿಸರದಲ್ಲಿನ ಸವಾಲುಗಳನ್ನು ಎದುರಿಸುವುದು ಮತ್ತು ಎರಡೂ ದೇಶಗಳ ನಡುವೆ ರಕ್ಷಣಾ ಸಮನ್ವಯತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಗುರಿಯಾಗಿದೆ.
ವ್ಯಾಯಾಮದಲ್ಲಿ ಡ್ರೋನ್ ಕಾರ್ಯಾಚರಣೆಗಳು, ಸ್ನೈಪರ್ ತಂತ್ರಗಳು ಮತ್ತು ಆಧುನಿಕ ಯುದ್ಧೋಪಕರಣಗಳ ಬಳಕೆಯ ಬಗ್ಗೆ ಪರಸ್ಪರ ಜ್ಞಾನ ವಿನಿಮಯ ನಡೆಯಲಿದೆ.








