Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ರಾಜ್ಯದಲ್ಲಿ ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಸಚಿವ ಈಶ್ವರ್ ಖಂಡ್ರೆ ಆದೇಶ

01/05/2026 5:29 PM

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಯಿಂದ ಸ್ವಸಹಾಯ ಗುಂಪು ಉಳಿತಾಯ ಖಾತೆ ಆರಂಭ

01/05/2026 5:18 PM

ಮುಂದಿನ ವರ್ಷ ಮದ್ದೂರು ಉತ್ಸವ ಅದ್ದೂರಿಯಾಗಿ ಆಚರಣೆ: ಶಾಸಕ ಕೆ.ಎಂ.ಉದಯ್

01/05/2026 5:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಯಿಂದ ಸ್ವಸಹಾಯ ಗುಂಪು ಉಳಿತಾಯ ಖಾತೆ ಆರಂಭ
INDIA

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಯಿಂದ ಸ್ವಸಹಾಯ ಗುಂಪು ಉಳಿತಾಯ ಖಾತೆ ಆರಂಭ

By kannadanewsnow0901/05/2026 5:18 PM

ನವದೆಹಲಿ: ಸಂಪರ್ಕ ಸಚಿವಾಲಯದ ಅಂಚೆ ಇಲಾಖೆಯ ಅಡಿಯಲ್ಲಿ ಬರುವ ಶೇ.100 ರಷ್ಟು ಭಾರತ ಸರ್ಕಾರದ ಸ್ವಾಮ್ಯದ ಘಟಕವಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಇಂದು ಸ್ವಸಹಾಯ ಗುಂಪು (ಎಸ್‌ಎಚ್‌ಜಿ) ಉಳಿತಾಯ ಖಾತೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಇದು ಗ್ರಾಮೀಣ ಭಾರತದಾದ್ಯಂತ ಮಹಿಳೆಯರ ನೇತೃತ್ವದ ಸ್ವಸಹಾಯ ಗುಂಪುಗಳನ್ನು ಆರ್ಥಿಕ ಸೇರ್ಪಡೆ ಮತ್ತು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ನಿರ್ದಿಷ್ಟ ಕೊಡುಗೆಯಾಗಿದೆ.

ಈ ಬಿಡುಗಡೆಯ ಕುರಿತು ಮಾತನಾಡಿದ ಐಪಿಪಿಬಿಯ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಶ್ರೀ ಆರ್ ವಿಶ್ವೇಶ್ವರನ್, ”ಐಪಿಪಿಬಿಯಲ್ಲಿ ಪ್ರತಿಯೊಬ್ಬ ಭಾರತೀಯರಿಗೂ ಬ್ಯಾಂಕಿಂಗ್ ಸೇವೆಗಳನ್ನು ಸರಳ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ. ಮಹಿಳೆಯರ ನೇತೃತ್ವದ ಸ್ವಸಹಾಯ ಗುಂಪುಗಳಿಗೆ ವಿಶ್ವಾಸಾರ್ಹ ಮತ್ತು ಕಡಿಮೆ ವೆಚ್ಚದಲ್ಲಿ ಬ್ಯಾಂಕಿಂಗ್ ಪರಿಹಾರವನ್ನು ಒದಗಿಸುವ ಮೂಲಕ ಎಸ್‌ಎಚ್‌ಜಿ ಉಳಿತಾಯ ಖಾತೆಯನ್ನು ಒದಗಿಸಲಾಗುವುದು. ಮನೆ ಬಾಗಿಲಿನ ಬ್ಯಾಂಕಿಂಗ್ ಮಾದರಿ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೂಲಕ, ಎಸ್‌ಎಚ್‌ಜಿಗಳು ಸಾಂಸ್ಥಿಕ ಹಣಕಾಸು ಪೂರಕ ವ್ಯವಸ್ಥೆಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ನಾವು ವ್ಯವಸ್ಥೆಯನ್ನು ಮತ್ತಷ್ಟು ಸಕ್ರಿಯಗೊಳಿಸುವ ಗುರಿ ಹೊಂದಿದ್ದೇವೆ’’ ಎಂದರು.

ಭಾರತದಲ್ಲಿ ಗ್ರಾಮೀಣ ಆರ್ಥಿಕ ಪರಿವರ್ತನೆಯಲ್ಲಿ ಸ್ವಸಹಾಯ ಗುಂಪುಗಳು ಪ್ರಮುಖ ಪಾತ್ರ ವಹಿಸಿವೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂ ಒ ಆರ್ ಡಿ) ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಬೆಂಬಲಿತ ಕಾರ್ಯಕ್ರಮಗಳಂತಹ ಪ್ರಮುಖ ಉಪಕ್ರಮಗಳೊಂದಿಗೆ ನಿಕಟ ಸಂಬಂಧ ಹೊಂದಿವೆ. ಅಂಚೆ ಇಲಾಖೆಯ (ಡಿಒಪಿ) ಸಾಟಿಯಿಲ್ಲದ ಅಂಚೆ ಜಾಲ ಮತ್ತು ತನ್ನದೇ ಆದ ಡಿಜಿಟಲ್ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ, ಐಪಿಪಿಬಿ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್ ಆನ್-ಬೋರ್ಡಿಂಗ್‌ನೊಂದಿಗೆ ಸಂಯೋಜಿಸುವ ಮೂಲಕ ಎಸ್ ಎಚ್ ಜಿಗಳಿಗೆ ಆರ್ಥಿಕ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಇದಕ್ಕೆ ಪೋಸ್ಟ್‌ಮ್ಯಾನ್ (ಅಂಚೆಪೇದೆ) ಮತ್ತು ಗ್ರಾಮೀಣ ಡಾಕ್ ಸೇವಕರ (ಜಿಡಿಎಸ್) ವ್ಯಾಪಕ ಜಾಲದ ಸಹಾಯವಿದೆ.

ಐಪಿಪಿಬಿ ಎಸ್ ಎಚ್ ಜಿ ಉಳಿತಾಯ ಖಾತೆಯನ್ನು ಈ ಕೆಳಗಿನಂತೆ ರೂಪಿಸಲಾಗಿದೆ:

ಎ. ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳಲು ಶೂನ್ಯ ಬ್ಯಾಲೆನ್ಸ್, ಶೂನ್ಯ ಶುಲ್ಕದ ಖಾತೆ.

ಬಿ. ಸರಳೀಕೃತ ಆನ್-ಬೋರ್ಡಿಂಗ್‌ಗಾಗಿ ಡಿಜಿಟಲ್ ಆಗಿ ಸಕ್ರಿಯಗೊಳಿಸಲಾಗಿದೆ.

ಸಿ. ಅಂಚೆ ಕಚೇರಿಗಳು ಮತ್ತು ಪೋಸ್ಟ್‌ಮೆನ್/ಗ್ರಾಮೀಣ ಡಾಕ್ ಸೇವಕರ ವಿಶಾಲ ಜಾಲದ ಮೂಲಕ ವಿತರಿಸಲಾಗಿದೆ.

ಪ್ರಮುಖ ವೈಶಿಷ್ಟ್ಯಗಳು:

ಎ. ಕನಿಷ್ಠ ಆರಂಭಿಕ ಠೇವಣಿ ಅಗತ್ಯವಿಲ್ಲ.

ಬಿ. ಮಾಸಿಕ ಸರಾಸರಿ ಬ್ಯಾಲೆನ್ಸ್ (ಎಂಎಬಿ) ಅಗತ್ಯವಿಲ್ಲ.

ಸಿ. ₹2,00,000 ಕೋಟಿ ರೂ. ಗರಿಷ್ಠ ಬ್ಯಾಲೆನ್ಸ್ ಮಿತಿ.

ಡಿ. ಅನ್ವಯವಾಗುವ ಉಳಿತಾಯ ದರಗಳ ಪ್ರಕಾರ ತ್ರೈಮಾಸಿಕ ಬಡ್ಡಿ ಪಾವತಿಗಳು.

ಇ. ನಗದು ಠೇವಣಿ ಮತ್ತು ಹಿಂಪಡೆಯುವಿಕೆಗೆ ಶೂನ್ಯ ಶುಲ್ಕಗಳು.

ಎಫ್. ತಿಂಗಳಿಗೆ ಒಂದು ಉಚಿತ ಭೌತಿಕ ಖಾತೆ ಹೇಳಿಕೆ.

ಜಿ. ಖಾತೆ ಮುಚ್ಚುವ ಶುಲ್ಕಗಳಿಲ್ಲ.

ಎಚ್. QR ಕಾರ್ಡ್ ವಿತರಣಾ ಶುಲ್ಕಗಳಿಲ್ಲ

ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಪಿಪಿಬಿ ಎಸ್ ಎಚ್ ಜಿ ಉಳಿತಾಯ ಖಾತೆಯು ಸರಳ, ಸುಲಭವಾಗಿ ಲಭ್ಯವಿರಬಹುದಾದ ಮತ್ತು ಶೂನ್ಯ-ವೆಚ್ಚದ ಬ್ಯಾಂಕಿಂಗ್ ಪರಿಹಾರವನ್ನು ಒದಗಿಸುತ್ತದೆ, ಇದು ಅಂತರ್ಗತ ಬೆಳವಣಿಗೆ ಮತ್ತು ಸುಸ್ಥಿರ ಜೀವನೋಪಾಯದ ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಿಕೆಯಾಗುತ್ತದೆ.

ಭಾರತೀಯ ಅಂಚೆ ಪಾವತಿ ಬ್ಯಾಂಕ್ ಕುರಿತು

ಭಾರತ ಸರ್ಕಾರದ ಸಂಪರ್ಕ ಸಚಿವಾಲಯದ ಅಂಚೆ ಇಲಾಖೆಯ ಅಡಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಅನ್ನು ಸ್ಥಾಪಿಸಲಾಗಿದ್ದು, ಇದರ ಸಂಪೂರ್ಣ ಷೇರು ಪಾಲು ಭಾರತ ಸರ್ಕಾರದ ಒಡೆತನದಲ್ಲಿದೆ. ಐಪಿಪಿಬಿಯನ್ನು 2018ರ ಸೆಪ್ಟೆಂಬರ್ 1 ರಂದು ಪ್ರಾರಂಭಿಸಲಾಯಿತು. ಭಾರತದಲ್ಲಿ ಸಾಮಾನ್ಯ ಜನರಿಗೆ ಅತ್ಯಂತ ಸುಲಭವಾಗಿ ತಲುಪಬಹುದಾದ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಬ್ಯಾಂಕ್ ಅನ್ನು ಒದಗಿಸುವ ದೂರದೃಷ್ಟಿಯೊಂದಿಗೆ ಈ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಮೂಲಭೂತ ಕರ್ತವ್ಯವೆಂದರೆ ಬ್ಯಾಂಕಿಲ್ಲದ ಮತ್ತು ಬ್ಯಾಂಕ್ ಸೌಲಭ್ಯವಿಲ್ಲದವರಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವುದು, 1,65,000 ಕ್ಕೂ ಅಂಚೆ ಅಧಿಕ ಕಚೇರಿಗಳು (ಗ್ರಾಮೀಣ ಪ್ರದೇಶಗಳಲ್ಲಿ 140,000) ಮತ್ತು 3,00,000ಕ್ಕೂ ಅಧಿಕ ಅಂಚೆ ನೌಕರರನ್ನು ಒಳಗೊಂಡಿರುವ ಅಂಚೆ ಜಾಲವನ್ನು ಬಳಸಿಕೊಳ್ಳುವುದು ಮತ್ತು ಕೊನೆಯ ಹಂತವನ್ನು ತಲುಪುವುದು.

ಐಪಿಪಿಬಿ ಯ ವ್ಯಾಪ್ತಿ ಮತ್ತು ಅದರ ಕಾರ್ಯಾಚರಣಾ ಮಾದರಿಯು ಇಂಡಿಯಾ ಸಾಮರ್ಥ್ಯದ ಪ್ರಮುಖ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ – ಸಿಬಿಎಸ್-ಸಂಯೋಜಿತ ಸ್ಮಾರ್ಟ್‌ಫೋನ್ ಮತ್ತು ಬಯೋಮೆಟ್ರಿಕ್ ಸಾಧನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಸರಳ ಮತ್ತು ಸುರಕ್ಷಿತ ರೀತಿಯಲ್ಲಿ ಕಾಗದರಹಿತ, ನಗದುರಹಿತ ಮತ್ತು ಕಡಿಮೆ ಉಪಸ್ಥಿತಿಯ (ಪ್ರೆಸೆನ್ಸ್-ಲೆಸ್) ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಮಿತವ್ಯಯದ ನಾವೀನ್ಯತೆಯನ್ನು ಬಳಸಿಕೊಳ್ಳುವ ಮತ್ತು ಜನಸಾಮಾನ್ಯರಿಗೆ ಸುಲಭ ಬ್ಯಾಂಕಿಂಗ್ ಮೇಲೆ ಹೆಚ್ಚಿನ ಗಮನವನ್ನು ನೀಡುವ ಮೂಲಕ, ಐಪಿಪಿಬಿ ಭಾರತದ 5.57 ಲಕ್ಷ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ 13 ಕೋಟಿಗೂ ಅಧಿಕ ಗ್ರಾಹಕರಿಗೆ 13 ಭಾಷೆಗಳಲ್ಲಿ ಲಭ್ಯವಿರುವ ಅರ್ಥಗರ್ಭಿತ ಇಂಟರ್ಫೇಸ್‌ಗಳ ಮೂಲಕ ಸರಳ ಮತ್ತು ಕೈಗೆಟುಕುವ ಬ್ಯಾಂಕಿಂಗ್ ಪರಿಹಾರಗಳನ್ನು ನೀಡುತ್ತಿದೆ.

ಕಡಿಮೆ ನಗದು ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ಡಿಜಿಟಲ್ ಇಂಡಿಯಾದ ದೂರದೃಷ್ಟಿಗೆ ಕೊಡುಗೆ ನೀಡಲು ಐಪಿಪಿಬಿ ಬದ್ಧವಾಗಿದೆ. ಪ್ರತಿಯೊಬ್ಬ ನಾಗರಿಕನು ಆರ್ಥಿಕವಾಗಿ ಸುರಕ್ಷಿತ ಮತ್ತು ಸಬಲೀಕರಣಗೊಳ್ಳಲು ಸಮಾನ ಅವಕಾಶವನ್ನು ಪಡೆದಾಗ ಭಾರತವು ಅಭಿವೃದ್ಧಿ ಹೊಂದುತ್ತದೆ. ನಮ್ಮ ಧ್ಯೇಯವಾಕ್ಯ – ಪ್ರತಿಯೊಬ್ಬ ಗ್ರಾಹಕ ಮುಖ್ಯ, ಪ್ರತಿಯೊಂದು ವಹಿವಾಟು ಮಹತ್ವದ್ದಾಗಿದೆ ಮತ್ತು ಪ್ರತಿಯೊಂದು ಠೇವಣಿ ಮೌಲ್ಯಯುತವಾಗಿದೆ ಎಂಬುದು ನಿಜವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಇ-ಮೇಲ್ : marketing@ippbonline.in

ಬೆಬ್‌ ಸೈಟ್ : www.ippbonline.bank.in

Share. Facebook Twitter LinkedIn WhatsApp Email

Related Posts

BIG NEWS : ಪಂಜಾಬ್ ಸಿಎಂ ಭಗವಂತ್ ಮಾನ್ ಕುಡಿದ ಮತ್ತಲ್ಲಿ ಸದನಕ್ಕೆ ಹಾಜರು : ವಿಪಕ್ಷಗಳು ಸ್ಪೋಟಕ ಆರೋಪ!

01/05/2026 3:46 PM1 Min Read

BREAKING : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : 5 ಕೆಜಿ `LPG ಸಿಲಿಂಡರ್’ ಬೆಲೆ 261 ರೂ. ಏರಿಕೆ.!

01/05/2026 1:42 PM2 Mins Read

BIG NEWS : ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್ :: ಅಂತರಾಷ್ಟ್ರೀಯ ವಿಮಾನ ಪ್ರಯಾಣದ ದರ ಮತ್ತೆ ಹೆಚ್ಚಳ!

01/05/2026 1:26 PM1 Min Read
Recent News

BIG NEWS: ರಾಜ್ಯದಲ್ಲಿ ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಸಚಿವ ಈಶ್ವರ್ ಖಂಡ್ರೆ ಆದೇಶ

01/05/2026 5:29 PM

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಯಿಂದ ಸ್ವಸಹಾಯ ಗುಂಪು ಉಳಿತಾಯ ಖಾತೆ ಆರಂಭ

01/05/2026 5:18 PM

ಮುಂದಿನ ವರ್ಷ ಮದ್ದೂರು ಉತ್ಸವ ಅದ್ದೂರಿಯಾಗಿ ಆಚರಣೆ: ಶಾಸಕ ಕೆ.ಎಂ.ಉದಯ್

01/05/2026 5:03 PM

ಮದ್ದೂರು – ಕೊಪ್ಪ ರಸ್ತೆ ಮೇಲ್ದರ್ಜೆಗೆ: ಶಾಸಕ ಕೆ.ಎಂ.ಉದಯ್

01/05/2026 4:55 PM
State News
KARNATAKA

BIG NEWS: ರಾಜ್ಯದಲ್ಲಿ ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಸಚಿವ ಈಶ್ವರ್ ಖಂಡ್ರೆ ಆದೇಶ

By kannadanewsnow0901/05/2026 5:29 PM KARNATAKA 2 Mins Read

ಮಂಡ್ಯ: ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ ರಸ್ತೆ…

ಮುಂದಿನ ವರ್ಷ ಮದ್ದೂರು ಉತ್ಸವ ಅದ್ದೂರಿಯಾಗಿ ಆಚರಣೆ: ಶಾಸಕ ಕೆ.ಎಂ.ಉದಯ್

01/05/2026 5:03 PM

ಮದ್ದೂರು – ಕೊಪ್ಪ ರಸ್ತೆ ಮೇಲ್ದರ್ಜೆಗೆ: ಶಾಸಕ ಕೆ.ಎಂ.ಉದಯ್

01/05/2026 4:55 PM

ರಾಜ್ಯದಲ್ಲಿ ಸಿಡಿಲಿಗೆ ಮತ್ತೊಂದು ಬಲಿ : ಊಟ ಮಾಡಿ ಮಲಗಿದ್ದಲ್ಲೇ ವ್ಯಕ್ತಿ ಸಾವು!

01/05/2026 4:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.