Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ:ಎಕ್ಸಿಟ್ ಪೋಲ್ ಭೀತಿ ಬೆನ್ನಲ್ಲೇ ಇವಿಎಂ ಭದ್ರತೆಗಾಗಿ ಬೀದಿಗಿಳಿದ ಮಮತಾ ಬ್ಯಾನರ್ಜಿ!

01/05/2026 5:50 PM

BIG NEWS: ರಾಜ್ಯದಲ್ಲಿ ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಸಚಿವ ಈಶ್ವರ್ ಖಂಡ್ರೆ ಆದೇಶ

01/05/2026 5:29 PM

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಯಿಂದ ಸ್ವಸಹಾಯ ಗುಂಪು ಉಳಿತಾಯ ಖಾತೆ ಆರಂಭ

01/05/2026 5:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಸಚಿವ ಈಶ್ವರ್ ಖಂಡ್ರೆ ಆದೇಶ
KARNATAKA

BIG NEWS: ರಾಜ್ಯದಲ್ಲಿ ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಸಚಿವ ಈಶ್ವರ್ ಖಂಡ್ರೆ ಆದೇಶ

By kannadanewsnow0901/05/2026 5:29 PM

ಮಂಡ್ಯ: ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ ರಸ್ತೆ ಬದಿಯ ಮರಗಳ ಸಮೀಕ್ಷೆ ನಡೆಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತ ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿಂದು ಜಿಲ್ಲಾ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಂಡ್ಯದ 7 ವಲಯಗಳಲ್ಲಿರುವ ನರ್ಸರಿಗಳಲ್ಲಿ ತೇಗ, ಶ್ರೀಗಂಧ, ಹೊನ್ನೆ ಇತ್ಯಾದಿ ಗುಣಮಟ್ಟದ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸುವಂತೆ ಮತ್ತು ವಿತರಿಸಿದ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆಯೂ ತಿಳಿಸಿದರು.

ಜಿಲ್ಲೆಯ ಹಲವೆಡೆ ಚಿರತೆಗಳ ಸಮಸ್ಯೆಯ ಪರಿಹಾರಕ್ಕೆ ತತ್ ಕ್ಷಣವೇ ಕ್ರಮ ವಹಿಸುವಂತೆ ತಿಳಿಸಿದ ಅವರು, ಕಾಡಿನಂಚಿನ ಗ್ರಾಮದ ಜನರೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಂಡರೆ, ಕಾಡ್ಗಿಚ್ಚು, ಕಳ್ಳಬೇಟೆ, ಅಕ್ರಮ ಮರ ಕಡಿತಲೆಯಂತಹ ಅಪರಾಧಗಳ ಬಗ್ಗೆ ತಕ್ಷಣದ ಮಾಹಿತಿ ಲಭಿಸುತ್ತದೆ, ವನ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಜಿಯೋ ಟ್ಯಾಗ್ ಮಾಡಲು ಸೂಚನೆ:

ಅರಣ್ಯ, ಕಾಡಿನಂಚಿನಲ್ಲಿರುವ ಪಟ್ಟಾ ಜಮೀನು, ಸರ್ಕಾರಿ ಜಾಗದಲ್ಲಿ ಬೆಳೆದಿರುವ ಶ್ರೀಗಂಧ, ರಕ್ತ ಚಂದನ, ಬೀಟೆ ಮತ್ತು ತೇಗದ ಮರಗಳ ಜಿಯೋ ಟ್ಯಾಗ್ ಮಾಡುವ ಮೂಲಕ ಯಾವುದೇ ಬೆಲೆ ಬಾಳುವ ವೃಕ್ಷ ಕಳುವಾಗದಂತೆ ಸಂರಕ್ಷಿಸಲು ಅರಣ್ಯ ಸಚಿವರು ಸೂಚನೆ ನೀಡಿದರು.

ಮಂಡ್ಯದಲ್ಲಿ ಮರ ಸಮೀಕ್ಷೆಗೆ ಆದೇಶ:

ಮಂಡ್ಯ ನಗರದಲ್ಲಿ ಮನೆಯ ಮುಂದೆ, ರಸ್ತೆಯ ಬದಿಯಲ್ಲಿ ಬೆಳೆದ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದೆ ಎಂಬ ಆರೋಪಗಳಿದ್ದು, ಮರಗಳ ಗಣತಿ ನಡೆಸಲು ಮತ್ತು ಅಕ್ರಮವಾಗಿ ಮರ ಕಡಿತಲೆ ಆಗದಂತೆ ಕ್ರಮ ವಹಿಸಲು ಸೂಚಿಸಿದರು.

ಜಿಲ್ಲೆಯಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಅಡಿ ಸೆಕ್ಷನ್ 4ರ ಪ್ರಾಥಮಿಕ ಅಧಿಸೂಚನೆ ಆಗಿ ವರ್ಷಗಳೇ ಕಳೆದಿದ್ದರೂ ಸೆಕ್ಷನ್ 17 ಅಡಿಯಲ್ಲಿ ಅರಣ್ಯ ಎಂದು ಘೋಷಣೆ ಆಗಿಲ್ಲ. ಎಲ್ಲೆಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ (ಎಫ್.ಎಸ್.ಓ.) ಇಲ್ಲವೋ ಅಲ್ಲಿಗೆ ಪ್ರಸ್ತಾವನೆ ಸಲ್ಲಿಸಿದರೆ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ತಿಳಿಸಿದರು. ಅದೇ ರೀತಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಹೊರತು ಪಡೆಸಿ, ಉಳಿದ ಎಲ್ಲ ಒತ್ತುವರಿ ಹಾಗೂ 2015ರ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲು ಆದೇಶ ನೀಡಿದರು.

ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಈ ತಿಂಗಳಲ್ಲೇ ರೈಲ್ವೆ ಬ್ಯಾರಿಕೇಡ್ ಮತ್ತು ಆನೆ ಕಂದಕ ಹಾಗೂ ಸೌರಬೇಲಿ ಕುರಿತಂತೆ ಸಭೆ ನಡೆಸುವುದಾಗಿಯೂ ಈಶ್ವರ ಖಂಡ್ರೆ ತಿಳಿಸಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಪ್ರಭುಗೌಡ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಮುಂದಿನ ವರ್ಷ ಮದ್ದೂರು ಉತ್ಸವ ಅದ್ದೂರಿಯಾಗಿ ಆಚರಣೆ: ಶಾಸಕ ಕೆ.ಎಂ.ಉದಯ್

01/05/2026 5:03 PM3 Mins Read

ಮದ್ದೂರು – ಕೊಪ್ಪ ರಸ್ತೆ ಮೇಲ್ದರ್ಜೆಗೆ: ಶಾಸಕ ಕೆ.ಎಂ.ಉದಯ್

01/05/2026 4:55 PM2 Mins Read

ರಾಜ್ಯದಲ್ಲಿ ಸಿಡಿಲಿಗೆ ಮತ್ತೊಂದು ಬಲಿ : ಊಟ ಮಾಡಿ ಮಲಗಿದ್ದಲ್ಲೇ ವ್ಯಕ್ತಿ ಸಾವು!

01/05/2026 4:37 PM1 Min Read
Recent News

ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ:ಎಕ್ಸಿಟ್ ಪೋಲ್ ಭೀತಿ ಬೆನ್ನಲ್ಲೇ ಇವಿಎಂ ಭದ್ರತೆಗಾಗಿ ಬೀದಿಗಿಳಿದ ಮಮತಾ ಬ್ಯಾನರ್ಜಿ!

01/05/2026 5:50 PM

BIG NEWS: ರಾಜ್ಯದಲ್ಲಿ ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಸಚಿವ ಈಶ್ವರ್ ಖಂಡ್ರೆ ಆದೇಶ

01/05/2026 5:29 PM

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಯಿಂದ ಸ್ವಸಹಾಯ ಗುಂಪು ಉಳಿತಾಯ ಖಾತೆ ಆರಂಭ

01/05/2026 5:18 PM

ಮುಂದಿನ ವರ್ಷ ಮದ್ದೂರು ಉತ್ಸವ ಅದ್ದೂರಿಯಾಗಿ ಆಚರಣೆ: ಶಾಸಕ ಕೆ.ಎಂ.ಉದಯ್

01/05/2026 5:03 PM
State News
KARNATAKA

BIG NEWS: ರಾಜ್ಯದಲ್ಲಿ ರೈತರಿಗೆ ಗುಣಮಟ್ಟದ ಸಸಿ ನೀಡಲು, ಒತ್ತುವರಿ ತೆರವು ಮಾಡಲು ಸಚಿವ ಈಶ್ವರ್ ಖಂಡ್ರೆ ಆದೇಶ

By kannadanewsnow0901/05/2026 5:29 PM KARNATAKA 2 Mins Read

ಮಂಡ್ಯ: ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ ರಸ್ತೆ…

ಮುಂದಿನ ವರ್ಷ ಮದ್ದೂರು ಉತ್ಸವ ಅದ್ದೂರಿಯಾಗಿ ಆಚರಣೆ: ಶಾಸಕ ಕೆ.ಎಂ.ಉದಯ್

01/05/2026 5:03 PM

ಮದ್ದೂರು – ಕೊಪ್ಪ ರಸ್ತೆ ಮೇಲ್ದರ್ಜೆಗೆ: ಶಾಸಕ ಕೆ.ಎಂ.ಉದಯ್

01/05/2026 4:55 PM

ರಾಜ್ಯದಲ್ಲಿ ಸಿಡಿಲಿಗೆ ಮತ್ತೊಂದು ಬಲಿ : ಊಟ ಮಾಡಿ ಮಲಗಿದ್ದಲ್ಲೇ ವ್ಯಕ್ತಿ ಸಾವು!

01/05/2026 4:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.