ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯ ಬಳಿಯಲ್ಲಿನ ಕಾಂಪೌಂಡ್ ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿತ್ತು. ಈ ಕಾಂಪೌಂಡ್ ಬಳಿಯಲ್ಲಿ ಆಶ್ರಯ ಪಡೆದಿದ್ದಂತ ಬೀದಿ ಬದಿಯ 8 ಮಂದಿ ವ್ಯಾಪಾರಿಗಳು ಸಾವನ್ನಪ್ಪಿದ್ದರು. ಈ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಿದರು. ಅಲ್ಲದೇ ಕಾಂಪೌಂಡ್ ಕುಸಿತ ದುರಂತಕ್ಕೆ ಆಘಾತವನ್ನು ವ್ಯಕ್ತ ಪಡಿಸಿದರು.
ಇಂದು ಬೆಂಗಳೂರು ನಗರದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ನಗರದ ವಿವಿಧೆಡೆಯಲ್ಲಿ ಸುರಿದಂತ ಭಾರೀ ಮಳೆಯಿಂದಾಗಿ ಬಹುದೊಡ್ಡ ಅನಾಹುತವೇ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಶಿವಾಜಿನಗರ ಬಳಿಯಲ್ಲಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿತಗೊಂಡು 8 ಮಂದಿ ಸಾವನ್ನಪ್ಪಿದ್ದರೇ, ನಾಲ್ಕಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವಿಷಯವನ್ನು ತಿಳಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ ಸ್ಥಳದಲ್ಲಿದ್ದಂತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲಿಂದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಂತ ಆಸ್ಪತ್ರೆಗೆ ತೆರಳಿದಂತ ಸಿಎಂ ಸಿದ್ಧರಾಮಯ್ಯ ಅವರು ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿ, ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಇನ್ನೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಿಎಂ ಸಿದ್ಧರಾಮಯ್ಯ ಅವರು ಆಸ್ಪತ್ರೆಯ ವೈದ್ಯರಿಗೆ ಸೂಚಿಸಿದರು. ಜೊತೆಗೆ ಸರ್ಕಾರದಿಂದ ಎಲ್ಲಾ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ಕೇರಳದಲ್ಲಿ ಯುಡಿಎಫ್ಗೆ ಅಧಿಕಾರ ಭಾಗ್ಯ? 10 ವರ್ಷಗಳ ಬಳಿಕ ಕಾಂಗ್ರೆಸ್ ಮೈತ್ರಿಕೂಟದ ಭರ್ಜರಿ ಕಮ್ಬ್ಯಾಕ್ ಮುನ್ಸೂಚನೆ!
ಮೇ.2ರಂದು ಸಾಗರದಲ್ಲಿ ‘ಪೆರ್ಡೂರು ಮೇಳ’ದಿಂದ ಅದ್ಧೂರಿ ‘ಪೌರಾಣಿಕ ಯಕ್ಷಗಾನ’ ಪ್ರದರ್ಶನ








