ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ನಗರಿ ಸಾಗರದಲ್ಲಿ ಯಕ್ಷಗಾನ ಪ್ರಿಯರಿಗಾಗಿ ಭರ್ಜರಿ ಪೌರಾಣಿಕ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಜಿಲ್ಲೆಯ ಸಾಗರದ ನೆಹರು ಮೈದಾನದಲ್ಲಿ ಮೇ 2ರ ಶನಿವಾರ ರಾತ್ರಿ 9 ಗಂಟೆಯಿಂದ ಪ್ರಸಿದ್ಧ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಸಾರಥ್ಯದಲ್ಲಿ ಯಕ್ಷಗಾನ ರಂಗೇರಲಿದೆ.
ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು:
ಒಂದೇ ವೇದಿಕೆಯಲ್ಲಿ ನಾಲ್ಕು ಪ್ರಮುಖ ಪೌರಾಣಿಕ ಕಥಾನಕಗಳು ಅನಾವರಣಗೊಳ್ಳಲಿವೆ:
-
ಕಚ ದೇವಯಾನಿ
-
ಉತ್ತರನ ಪೌರುಷ
-
ಮಾಗಧ ವಧೆ 4. ಸುಂದೋಪಸುಂದ
ಕಲಾವಿದರ ದಂಡು:
ಈ ಪ್ರದರ್ಶನದಲ್ಲಿ ಯಕ್ಷಗಾನ ರಂಗದ ಖ್ಯಾತನಾಮರು ಭಾಗವಹಿಸುತ್ತಿರುವುದು ವಿಶೇಷವಾಗಿದೆ.
-
ಹಿಮ್ಮೇಳದಲ್ಲಿ: ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರಂತಹ ದಿಗ್ಗಜ ಭಾಗವತರ ಜೊತೆಗೆ ಶಶಾಂಕ್, ಪ್ರಜ್ವಲ್, ಅನಿರುದ್ಧ ಸಾಥ್ ನೀಡಲಿದ್ದಾರೆ.
-
ಮುಮ್ಮೇಳದಲ್ಲಿ: ನೀಲ್ಕೋಡು ಶಂಕರ ಹೆಗಡೆ, ಕಾರ್ತಿಕ್ ಚಿಟ್ಟಾಣಿ, ಚಂದ್ರಹಾಸ ಗೌಡ ಹೊಸಪಟ್ಟಣ, ಕಾರ್ತಿಕ್ ಕಣ್ಣಿ, ಪವನ್ ಸಾಣ್ಮನೆ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಲಿದ್ದಾರೆ.
-
ಅತಿಥಿ ಕಲಾವಿದರು: ಕೃಷ್ಣ ಯಾಜಿ, ವಿನಯ್ ಬೇರೊಳ್ಳಿ ಹಾಗೂ ಸುಧೀರ್ ಉಪ್ಪೂರು ಅವರು ವಿಶೇಷ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ.
ಕಲಾಭಿಮಾನಿಗಳಿಗೆ ಆಮಂತ್ರಣ:
ಈ ಯಕ್ಷಗಾನ ಪ್ರದರ್ಶನಕ್ಕೆ ಪ್ರವೇಶ ದರವನ್ನು ನಿಗದಿಪಡಿಸಲಾಗಿದ್ದು, ಸಾಗರ ಮತ್ತು ಸುತ್ತಮುತ್ತಲಿನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಕೋರಿದ್ದಾರೆ.
ಸಾಗರ ಶಿಕ್ಷಕರ ಸಂಘದ ಚುನಾವಣೆ: ‘ಸದ್ಗುರು’ ತಂಡದಿಂದ ಮಾಲ್ತೇಶ್ ಅಬ್ಬರದ ಪ್ರಚಾರ, ಗುರುಭವನ ನಿರ್ಮಾಣದ ಸಂಕಲ್ಪ
ಕೇರಳದಲ್ಲಿ ಯುಡಿಎಫ್‌ಗೆ ಅಧಿಕಾರ ಭಾಗ್ಯ? 10 ವರ್ಷಗಳ ಬಳಿಕ ಕಾಂಗ್ರೆಸ್ ಮೈತ್ರಿಕೂಟದ ಭರ್ಜರಿ ಕಮ್‌ಬ್ಯಾಕ್ ಮುನ್ಸೂಚನೆ!
BIG UPDATE: ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಮೃತರ ಸಂಖ್ಯೆ 8ಕ್ಕೆ ಏರಿಕೆ








