Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ಯಾಬೂ ಇಂದ ಟ್ರೆಂಡ್‌ನತ್ತ: ಭಾರತೀಯ ಯುವಜನತೆಯಲ್ಲಿ ಹೆಚ್ಚುತ್ತಿದೆ ‘ಶುಗರ್ ಡೇಟಿಂಗ್’ ಕ್ರೇಜ್!

26/04/2026 6:23 AM

ಡಿಸೆಂಬರ್‌ನಿಂದ ಟೋಲ್ ಪ್ಲಾಜಾಗಳಿಗೆ ಮುಕ್ತಿ! ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಾರಿಯಾಗಲಿದೆ ‘ಬ್ಯಾರಿಯರ್-ಫ್ರೀ’ ಟೋಲ್ ವ್ಯವಸ್ಥೆ

26/04/2026 6:17 AM

BREAKING : ಮುಖಕ್ಕೆ ಕೇಕ್ ಬಳಿಯುವ ವಿಚಾರವಾಗಿ ಗಲಾಟೆ : ಗುಂಡಿನ ದಾಳಿಯಲ್ಲಿ ಬರ್ತಡೆ ಬಾಯ್ ಸೇರಿ ಮೂವರು ಸಾವು!

26/04/2026 6:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » IPL ಇತಿಹಾಸದಲ್ಲೇ ಮೊದಲು : ಬ್ಯಾಟರ್‌ಗಳ ಅಬ್ಬರಕ್ಕೆ ನಡುಗಿದ ಮೈದಾನ : ಒಂದೇ ದಿನ ದಾಖಲಾಯ್ತು 59 ಸಿಕ್ಸರ್, 986 ರನ್!
INDIA

IPL ಇತಿಹಾಸದಲ್ಲೇ ಮೊದಲು : ಬ್ಯಾಟರ್‌ಗಳ ಅಬ್ಬರಕ್ಕೆ ನಡುಗಿದ ಮೈದಾನ : ಒಂದೇ ದಿನ ದಾಖಲಾಯ್ತು 59 ಸಿಕ್ಸರ್, 986 ರನ್!

By kannadanewsnow0526/04/2026 5:56 AM

ನವದೆಹಲಿ : ಐಪಿಎಲ್‌ನಲ್ಲಿ ಒಂದೇ ದಿನ ಹತ್ತಿರತ್ತಿರ ಒಂದು ಸಾವಿರ ರನ್! ಟಿ20 ಕ್ರಿಕೆಟ್‌ನಲ್ಲೀಗ ಯಾವುದೂ ಅಸಾಧ್ಯವಲ್ಲ, ಎಷ್ಟು ದೊಡ್ಡ ಮೊತ್ತವಾದರೂ ತಂಡಗಳು ಯಶಸ್ವಿಯಾಗಿ ಬೆನ್ನತ್ತಲಿದೆ ಎನ್ನುವುದಕ್ಕೆ ಶನಿವಾರ ಐಪಿಎಲ್‌ನಲ್ಲಿ ನಡೆದ 2 ಪಂದ್ಯಗಳೇ ಸಾಕ್ಷಿ. ಒಂದೇ ದಿನ ಬರೋಬ್ಬರಿ 986 ರನ್ ದಾಖಲಾಯಿತು. ಐಪಿಎಲ್‌ ನಲ್ಲಿ ಇದು ಹೊಸ ದಾಖಲೆಯಾಗಿದೆ. ಹೌದು ಶನಿವಾರದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 265 ರನ್ ಗುರಿಯನ್ನು ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿ ಬೆನ್ನತ್ತಿ, ಟಿ20 ಕ್ರಿಕೆಟ್‌ನಲ್ಲೇ ಗರಿಷ್ಠ ರನ್ ಚೇಸ್ ದಾಖಲೆ ಬರೆಯಿತು.

ಇನ್ನು 2ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನೀಡಿದ 229 ರನ್ ಗುರಿಯನ್ನು ಸನ್‌ ರೈಸೆರ್ಸ್, ಬೆನ್ನತ್ತಿ, ಐಪಿಎಲ್‌ನಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ತಂಡಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. 2024ರ ಏ.27ರಂದು ಡೆಲ್ಲಿ ಹಾಗೂ ಮುಂಬೈ ಪಂದ್ಯದಲ್ಲಿ 504, ಲಖನೌ-ರಾಜಸ್ಥಾನ ಪಂದ್ಯದಲ್ಲಿ 392 ಸೇರಿ ಒಂದೇ ದಿನ 896 ರನ್ ದಾಖಲಾಗಿತ್ತು. ಇದು ಐಪಿಎಲ್ ನಲ್ಲಿ ಒಂದೇ ದಿನ ದಾಖಲಾದ ಅತಿಹೆಚ್ಚು ರನ್ ದಾಖಲೆ ಎನಿಸಿತ್ತು.

ಈ ದಾಖಲೆಯ ಪಂದ್ಯಗಳ ವಿವರ ಇಲ್ಲಿದೆ:

1. ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ (ಒಟ್ಟು ರನ್: 529)

  • ಡೆಲ್ಲಿ ಕ್ಯಾಪಿಟಲ್ಸ್: ಮೊದಲು ಬ್ಯಾಟ್ ಮಾಡಿದ ಡೆಲ್ಲಿ, ಕೆ. ಎಲ್. ರಾಹುಲ್ ಅವರ ಸ್ಫೋಟಕ ಅಜೇಯ 152 ರನ್* (67 ಎಸೆತ) ಮತ್ತು ನಿತೀಶ್ ರಾಣಾ ಅವರ 91 ರನ್‌ಗಳ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು.

  • ಪಂಜಾಬ್ ಕಿಂಗ್ಸ್: ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್, ಕೇವಲ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿ ಐತಿಹಾಸಿಕ ಜಯ ಸಾಧಿಸಿತು. ಶ್ರೇಯಸ್ ಅಯ್ಯರ್ ಅಜೇಯ 71 ರನ್ ಗಳಿಸಿದರು.

2. ರಾಜಸ್ಥಾನ್ ರಾಯಲ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಒಟ್ಟು ರನ್: 457)

  • ರಾಜಸ್ಥಾನ್ ರಾಯಲ್ಸ್: ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 6 ವಿಕೆಟ್ ನಷ್ಟಕ್ಕೆ 228 ರನ್ ದಾಖಲಿಸಿತು.

  • ಸನ್ ರೈಸರ್ಸ್ ಹೈದರಾಬಾದ್: ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ತಂಡ 18.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ವಿಜಯಿಯಾಯಿತು. ಇಶಾನ್ ಕಿಶನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪ್ರಮುಖ ದಾಖಲೆಗಳು:

  • ಒಂದೇ ದಿನದಲ್ಲಿ ಅತಿ ಹೆಚ್ಚು ರನ್: 986 ರನ್ (ಹಿಂದಿನ ದಾಖಲೆ: 899 ರನ್, 2024ರಲ್ಲಿ).

  • ಕೆ. ಎಲ್. ರಾಹುಲ್ ವೈಯಕ್ತಿಕ ದಾಖಲೆ: ಐಪಿಎಲ್ ಇತಿಹಾಸದಲ್ಲಿ 150 ರನ್ ಗಡಿ ದಾಟಿದ ಮೊದಲ ಭಾರತೀಯ ಬ್ಯಾಟರ್ ಎಂಬ ಕೀರ್ತಿಗೆ ರಾಹುಲ್ ಭಾಜನರಾದರು.

  • ಅತಿ ಹೆಚ್ಚು ಸಿಕ್ಸರ್: ಈ ಎರಡು ಪಂದ್ಯಗಳಲ್ಲಿ ಒಟ್ಟು 59 ಸಿಕ್ಸರ್ ಸಿಡಿಸಲಾಗಿದೆ, ಇದು ಕೂಡ ಒಂದು ಹೊಸ ದಾಖಲೆ.

  • ಗರಿಷ್ಠ ಮೊತ್ತದ ಚೇಸಿಂಗ್: ಪಂಜಾಬ್ ಕಿಂಗ್ಸ್ 265 ರನ್ ಬೆನ್ನಟ್ಟುವ ಮೂಲಕ ಐಪಿಎಲ್ ಇತಿಹಾಸದ ಅತಿದೊಡ್ಡ ‘ರನ್ ಚೇಸ್’ ದಾಖಲೆ ಬರೆಯಿತು.

Share. Facebook Twitter LinkedIn WhatsApp Email

Related Posts

ಟ್ಯಾಬೂ ಇಂದ ಟ್ರೆಂಡ್‌ನತ್ತ: ಭಾರತೀಯ ಯುವಜನತೆಯಲ್ಲಿ ಹೆಚ್ಚುತ್ತಿದೆ ‘ಶುಗರ್ ಡೇಟಿಂಗ್’ ಕ್ರೇಜ್!

26/04/2026 6:23 AM1 Min Read

ಡಿಸೆಂಬರ್‌ನಿಂದ ಟೋಲ್ ಪ್ಲಾಜಾಗಳಿಗೆ ಮುಕ್ತಿ! ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಾರಿಯಾಗಲಿದೆ ‘ಬ್ಯಾರಿಯರ್-ಫ್ರೀ’ ಟೋಲ್ ವ್ಯವಸ್ಥೆ

26/04/2026 6:17 AM1 Min Read

BREAKING : ಮುಖಕ್ಕೆ ಕೇಕ್ ಬಳಿಯುವ ವಿಚಾರವಾಗಿ ಗಲಾಟೆ : ಗುಂಡಿನ ದಾಳಿಯಲ್ಲಿ ಬರ್ತಡೆ ಬಾಯ್ ಸೇರಿ ಮೂವರು ಸಾವು!

26/04/2026 6:14 AM1 Min Read
Recent News

ಟ್ಯಾಬೂ ಇಂದ ಟ್ರೆಂಡ್‌ನತ್ತ: ಭಾರತೀಯ ಯುವಜನತೆಯಲ್ಲಿ ಹೆಚ್ಚುತ್ತಿದೆ ‘ಶುಗರ್ ಡೇಟಿಂಗ್’ ಕ್ರೇಜ್!

26/04/2026 6:23 AM

ಡಿಸೆಂಬರ್‌ನಿಂದ ಟೋಲ್ ಪ್ಲಾಜಾಗಳಿಗೆ ಮುಕ್ತಿ! ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಾರಿಯಾಗಲಿದೆ ‘ಬ್ಯಾರಿಯರ್-ಫ್ರೀ’ ಟೋಲ್ ವ್ಯವಸ್ಥೆ

26/04/2026 6:17 AM

BREAKING : ಮುಖಕ್ಕೆ ಕೇಕ್ ಬಳಿಯುವ ವಿಚಾರವಾಗಿ ಗಲಾಟೆ : ಗುಂಡಿನ ದಾಳಿಯಲ್ಲಿ ಬರ್ತಡೆ ಬಾಯ್ ಸೇರಿ ಮೂವರು ಸಾವು!

26/04/2026 6:14 AM

ಕೊಲಂಬಿಯಾದಲ್ಲಿ ಭೀಕರ ಬಸ್ ಸ್ಫೋಟ: ಏಳು ಮಂದಿ ಸಾವು, ಹಿಂಸಾಚಾರಕ್ಕೆ ನಲುಗಿದ ಕೌಕಾ ಪ್ರಾಂತ್ಯ

26/04/2026 6:14 AM
State News
KARNATAKA

BREAKING : ಮೈಸೂರಲ್ಲಿ ಘೋರ ಘಟನೆ : ಹಸುವಿಗೆ ಹುಲ್ಲು ಹಾಕುವಾಗ ಬೆರಳಿಗೆ ಹಾವು ಕಚ್ಚಿ, ಬಾಲಕ ಸಾವು!

By kannadanewsnow0526/04/2026 6:10 AM KARNATAKA 1 Min Read

ಮೈಸೂರು : ಮೈಸೂರಲ್ಲಿ ಘೋರ ಘಟನೆ ಒಂದು ಸಂಭವಿಸಿದ್ದು ಕಂಪಲಾಪುರ ಗ್ರಾಮದಲ್ಲಿ ಹಾವು ಕಡಿದು 14 ವರ್ಷದ ಬಾಲಕ ಸಾವನ್ನಪ್ಪಿರುವ…

BREAKING : ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಅಗ್ನಿ ಅವಘಡ : 1 ಕೋಟಿ ಮೌಲ್ಯದ ಔಷಧ, ವೈದ್ಯಕೀಯ ಉಪಕರಣ ಬೆಂಕಿಗಾಹುತಿ!

26/04/2026 5:44 AM

BIG NEWS : ನಟ ರಣವೀರ್ ಸಿಂಗ್ ಗೆ ಬಿಗ್ ರಿಲೀಫ್ : ದೈವಕ್ಕೆ ಅವಮಾನ ಮಾಡಿದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

26/04/2026 5:32 AM

ರಾಜ್ಯಕ್ಕೆ ಮುಂದಿನ 2 ತಿಂಗಳು ‘ಜಲಕ್ಷಾಮ’ : ಕುಡಿವ ನೀರಿನ ಸಮಸ್ಯೆ ತಡೆಗೆ ಟಾಸ್ಕ್ ಫೋರ್ಸ್ ರಚನೆ : ಸಚಿವ ಪ್ರಿಯಾಂಕ್ ಖರ್ಗೆ!

26/04/2026 5:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.