ದಾವಣಗೆರೆ : ವಚನಾನಂದ ಸ್ವಾಮೀಜಿಯನ್ನು ಉಚ್ಛಾಟಿಸಿದ್ದೇವೆ. ಆಡಳಿತಾಧಿಕಾರಿ ರಾಜಕುಮಾರ್, ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಅವರನ್ನು ಅಮಾನತು ಮಾಡಿದ್ದೇವೆ. ಅವರಾಗಿಯೇ ಗೌರವದಿಂದ ಮಠ ತೊರೆಯಲಿ. ಇಲ್ಲದಿದ್ದರೆ ಟ್ರಸ್ಟ್ ಮುಂದಿನ ತೀರ್ಮಾನ ಕೈಗೊಳ್ಳಲಿದೆ” ಎಂದು ಹರಿಹರದ ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ 27ರಂದು ಹರಿಹರ ಮಠದಲ್ಲೇ ಲೆಕ್ಕ ಕೊಡಲು ಮುಂದಾಗಿದ್ದೇವೆ. 2008ರಿಂದ 2026ರವರೆಗೆ ಲೆಕ್ಕ ಕೊಡ್ತೀವಿ. ಸಂಘ ಬೇರೆ, ಟ್ರಸ್ಟ್ ಬೇರೆ ಇದೆ. ನಾವು ಬ್ಯಾಲೆನ್ಸ್ ಶೀಟ್ ಕೊಡ್ತಾ ಬರ್ತಿದ್ದೇವೆ. ಆದರೆ, ದಿಕ್ಕು ತಪ್ಪಿಸುವ ಸಲುವಾಗಿ ಲೆಕ್ಕ ಕೊಡಿ ಎಂಬ ಅಭಿಯಾನ ನಡೆಸಿದ್ದಾರೆ. ಯಾವುದೇ ಟ್ರಸ್ಟ್ನಲ್ಲಿ ಲೆಕ್ಕ ಕೊಡುವ ಪದ್ಧತಿ ಇಲ್ಲ. ಆದರೂ ಸಹ ಪೈಸೆ ಪೈಸೆ ಲೆಕ್ಕ ಕೊಡಲು ಮುಂದಾಗಿದ್ದೇವೆ. ಲೆಕ್ಕದ ವಿಚಾರವಾಗಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಹೀಗಾಗಿ ಪೀಠದ ಹುಟ್ಟಿನಿಂದ ಇಲ್ಲಿಯವರೆಗೆ ಲೆಕ್ಕ ಕೊಡುತ್ತೇವೆ ಎಂದರು.
ಸ್ವಾಮೀಜಿ ಮಠದಲ್ಲೇ ಇದ್ದು, ಸುದ್ದಿಗೋಷ್ಠಿಯಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಇದೇ 24ರಂದು ಮಠದಲ್ಲಿ ಬಸವ ಜಯಂತಿ ಆಚರಿಸಲು ಮುಂದಾಗಿದ್ದಾರೆ. ಇದು ತಪ್ಪು. ಅಂದು ಯಾವುದೇ ಅಹಿತಕರ ಘಟನೆಗಳು ನಡೆದರೆ, ಆಸ್ತಿಪಾಸ್ತಿಗೆ ಹಾನಿಯಾದರೆ ಉಸ್ತುವಾರಿ ಡಾ.ರಾಜಕುಮಾರ ಹಾಗೂ ಲೆಕ್ಕ ಕೊಡಿ ಅಭಿಯಾನದ ಅಧ್ಯಕ್ಷ ಸಿರಿಗೆರೆ ಪರಮೇಶ್ವರ ಗೌಡ ಅವರೇ ಕಾರಣರಾಗುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗು ಎಸ್ಪಿಗೆ ದೂರು ನೀಡಿದ್ದಾರೆ.








