ಬೆಂಗಳೂರು : ಬೆಂಗಳೂರಲ್ಲಿ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ 2 ಕೋಟಿ ರೂಪಾಯಿ ವಂಚನೆ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಬಂಧಿ ಯುವಕನಿಗೆ ಜ್ಯುವೆಲರಿ ಮಾಲೀಕ ಹಾಗೂ ಮಹಿಳೆ ಸೇರಿ ಎರಡು ಕೋಟಿ ರೂಪಾಯಿ ವಂಚನೆ ಎಸೆಗಿದ್ದಾರೆ. ಮದುವೆ ಖುಷಿಯಲ್ಲಿ ಇದ್ದ ಯುವಕ ಇದೀಗ ಕಂಗಾಲು ಆಗಿದ್ದಾನೆ.
ಎಂಪಿ ಜುವೆಲರ್ಸ್ ಮಾಲೀಕ ಮತ್ತು ಮಹಿಳೆ ಸೇರಿ ಯುವಕನಿಗೆ ವಂಚನೆ ಎಸಗಿದ್ದಾರೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಈ ಒಂದು ಎಂಪಿ ಜುವೆಲರ್ಸ್ ಇದ್ದು ಚಿನ್ನದ ಅಂಗಡಿ ಮಾಲೀಕ ಇಂದ್ರಚಂಚ ಮತ್ತು ಸವಿತಾ ರೆಡ್ಡಿ ಯುವಕನಿಂದ ಎರಡು ಕೋಟಿ ಪಡೆದು ವಂಚನೆ ಎಸಗಿದ್ದಾರೆ. ಇದೀಗ ಇಂದ್ರಚಂದ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಎರಡು ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ.
ಮದುವೆಗೆ ಚಿನ್ನ ಖರೀದಿಸಲು ಪುನೀತ್ ಎಂಬ ಯುವಕ ನಿರ್ಧರಿಸಿದ್ದ ಪುನೀತ್ಗೆ ಸಂಬಂಧಿ ಸವಿತಾ ರೆಡ್ಡಿ ಖೇಡ್ಡ ತೋಡಿದ್ದಾಳೆ. ಆನೇಕಲ್ ನ ಪುನಿತ್ಗೆ ಇಬ್ಬರು ಸೇರಿ 2 ಕೋಟಿ ವಂಚನೆ ಎಸಗಿದ್ದಾರೆ. ಎಂಪಿ ಜುವೆಲ್ಲರ್ಸ್ ಮಾಲಿಕ ಇಂದ್ರಚಂಚ್ ನನ್ನು ಸವಿತಾ ರೆಡ್ಡಿ ಪುನೀತ್ಗೆ ಪರಿಚಯ ಮಾಡಿಸಿದ್ದಾಳೆ. ಬಳಿಕ ಇಬ್ಬರು ಸೇರಿ ವಂಚನೆ ಎಸಗಿದ್ದು, ಸದ್ಯ ಮದುವೆ ಖುಷಿಯಲ್ಲಿದ್ದ ಯುವಕ ವಂಚನೆಗೆ ಒಳಗಾಗಿ ಇದೀಗ ಕಂಗಾಲಾಗಿದ್ದಾನೆ.








