ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಂದು ಸ್ಫೋಟಕ ಹಂತಕ್ಕೆ ತಲುಪಿದೆ. ಇರಾನ್ ಜೊತೆಗಿನ ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಸಕ್ತಿ ತೋರಿದ್ದು, ಶೀಘ್ರದಲ್ಲೇ “ಬಾಂಬ್ಗಳ ಮಳೆ” ಸುರಿಯಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಪೂರ್ಣ ಪ್ರಮಾಣದ ಯುದ್ಧದ ಭೀತಿ ಆವರಿಸಿದೆ.
ಕಳೆದ ಎರಡು ವಾರಗಳಿಂದ ಜಾರಿಯಲ್ಲಿದ್ದ ತಾತ್ಕಾಲಿಕ ಕದನ ವಿರಾಮದ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಇದನ್ನು ಮುಂದುವರಿಸಲು ಟ್ರಂಪ್ ಒಲವು ತೋರುತ್ತಿಲ್ಲ.”ಒಪ್ಪಂದ ಏರ್ಪಡದಿದ್ದರೆ ದಾಳಿ ಅನಿವಾರ್ಯ” ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ತನ್ನ ಧೋರಣೆ ಬದಲಿಸದಿದ್ದರೆ ಅಮೆರಿಕ ಸೇನೆಯು ಭೀಕರ ದಾಳಿ ನಡೆಸಲು ಸಜ್ಜಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಎರಡನೇ ಹಂತದ ಶಾಂತಿ ಮಾತುಕತೆಗಳು ಅನಿಶ್ಚಿತತೆಯಲ್ಲಿವೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಭೇಟಿಯೂ ಸದ್ಯಕ್ಕೆ ಸ್ಥಗಿತಗೊಂಡಿದೆ.








