ಕ್ಯಾಲಿಫೋರ್ನಿಯಾ:ವಿಶ್ವದ ದೈತ್ಯ ತಂತ್ರಜ್ಞಾನ ಸಂಸ್ಥೆ ‘ಆಪಲ್’ (Apple) ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಸುಮಾರು 15 ವರ್ಷಗಳ ಕಾಲ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಟಿಮ್ ಕುಕ್ ಅವರು ಸಿಇಒ (CEO) ಸ್ಥಾನದಿಂದ ಕೆಳಗಿಳಿಯಲಿದ್ದು, ಅವರ ಜಾಗಕ್ಕೆ ಆಪಲ್‌ನ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಜಾನ್ ಟೆರ್ನಸ್ (John Ternus) ಅವರನ್ನು ನೂತನ ಸಿಇಒ ಆಗಿ ನೇಮಿಸಲಾಗಿದೆ.
ಜಾನ್ ಟೆರ್ನಸ್ ಅವರು ಸೆಪ್ಟೆಂಬರ್ 1, 2026 ರಿಂದ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಲ್ಲಿಯವರೆಗೆ ಟಿಮ್ ಕುಕ್ ಅವರೊಂದಿಗೆ ಕೆಲಸ ಮಾಡಿ ಸುಗಮ ಅಧಿಕಾರ ಹಸ್ತಾಂತರಕ್ಕೆ ಸಹಕರಿಸಲಿದ್ದಾರೆ.
ಸಿಇಒ ಸ್ಥಾನದಿಂದ ನಿರ್ಗಮಿಸಿದ ನಂತರ ಟಿಮ್ ಕುಕ್ ಅವರು ಆಪಲ್ ಮಂಡಳಿಯ ಕಾರ್ಯಕಾರಿ ಅಧ್ಯಕ್ಷರಾಗಿ (Executive Chairman) ಮುಂದುವರಿಯಲಿದ್ದಾರೆ. ಅವರು ಜಾಗತಿಕ ನೀತಿ ನಿರೂಪಣೆ ಮತ್ತು ಸರ್ಕಾರದೊಂದಿಗಿನ ಸಂಬಂಧಗಳ ಮೇಲೆ ಗಮನ ಹರಿಸಲಿದ್ದಾರೆ.
50 ವರ್ಷದ ಜಾನ್ ಟೆರ್ನಸ್ ಅವರು 2001 ರಿಂದ ಆಪಲ್ ಸಂಸ್ಥೆಯಲ್ಲಿದ್ದಾರೆ. ಐಪ್ಯಾಡ್, ಏರ್‌ಪಾಡ್ಸ್, ಮ್ಯಾಕ್ ಮತ್ತು ಐಫೋನ್‌ನಂತಹ ಪ್ರಮುಖ ಉತ್ಪನ್ನಗಳ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.








