ಅಂತರ್ಜಾಲದ ಕತ್ತಲೆ ಲೋಕದಲ್ಲಿ (Dark Web) ಮಹಿಳೆಯರ ವಿರುದ್ಧದ ಭಯಾನಕ ಸಂಚೊಂದು ಬಯಲಾಗಿದೆ. ‘ರೇಪ್ ಅಕಾಡೆಮಿ’ (Rape Academies) ಎಂಬ ಹೆಸರಿನ ಗುಪ್ತ ಆನ್‌ಲೈನ್ ಗುಂಪುಗಳು ಸಕ್ರಿಯವಾಗಿದ್ದು, ಮಹಿಳೆಯರಿಗೆ ಅಮಲು ಪದಾರ್ಥ ನೀಡುವುದು ಮತ್ತು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಹೇಗೆ ಎಂಬ ಬಗ್ಗೆ ಪುರುಷರಿಗೆ ‘ತರಬೇತಿ’ ನೀಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.
ಈ ಗುಂಪುಗಳಲ್ಲಿ ಮಹಿಳೆಯರ ಮೇಲೆ ದಾಳಿ ಮಾಡಲು ಸಂಚು ರೂಪಿಸುವುದು, ಅವರಿಗೆ ತಿಳಿಯದಂತೆ ಪಾನೀಯಗಳಲ್ಲಿ ಮಾದಕ ದ್ರವ್ಯ ಬೆರೆಸುವುದು ಮತ್ತು ಪಾರಾಗುವ ದಾರಿಗಳ ಬಗ್ಗೆ ಕಿರಾತಕರು ಚರ್ಚಿಸುತ್ತಿದ್ದರು.
ಟೆಲಿಗ್ರಾಮ್ ಮತ್ತು ಡಾರ್ಕ್ ವೆಬ್‌ನಂತಹ ವೇದಿಕೆಗಳನ್ನು ಬಳಸಿಕೊಂಡು ಈ ಜಾಲ ಕಾರ್ಯನಿರ್ವಹಿಸುತ್ತಿತ್ತು. ಸಾವಿರಾರು ಪುರುಷರು ಈ ಗುಂಪುಗಳ ಸದಸ್ಯರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ತನಿಖಾಧಿಕಾರಿಗಳು ಈ ಗುಂಪುಗಳಲ್ಲಿ ಹಂಚಿಕೊಳ್ಳಲಾದ ಸಾವಿರಾರು ಸಂದೇಶಗಳು, ವಿಡಿಯೋಗಳು ಮತ್ತು ‘ಮಾರ್ಗದರ್ಶಿ ಕೈಪಿಡಿಗಳನ್ನು’ ಪತ್ತೆಹಚ್ಚಿದ್ದಾರೆ.
ಈ ಬೆಳವಣಿಗೆಯು ಮಹಿಳೆಯರ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಾಮಾಜಿಕ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ವೇದಿಕೆಗಳು ಇಂತಹ ಕ್ರಿಮಿನಲ್ ಚಟುವಟಿಕೆಗಳಿಗೆ ತಾಣವಾಗುತ್ತಿರುವುದನ್ನು ತಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.








