ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ದೂಗೂರು ಗ್ರಾಮದಲ್ಲಿ ಶ್ರೀ ಪಾರ್ವತೀ ದೇವಿಯ ಪುನರ್ ಪ್ರಾಣಪ್ರತಿಷ್ಠಾಪನೆ, ದೇವಾಲಯ ಪ್ರವೇಶೋತ್ಸವ ಹಾಗೂ ಕಳಶಾರೋಹಣ ಧಾರ್ಮಿಕ ಸಮಾರಂಭವು ಏಪ್ರಿಲ್ 20 ಮತ್ತು 21ರಂದು ಅತ್ಯಂತ ವೈಭವದಿಂದ ಜರುಗಲಿದೆ.
ಶ್ರೀ ಮ.ನಿ.ಪ್ರ. ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಈ ಪುಣ್ಯ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ವಿವರಗಳು:
-
ಏಪ್ರಿಲ್ 20 (ಸೋಮವಾರ): ಸಂಜೆ ಗೋಧೂಳಿ ಮುಹೂರ್ತದಲ್ಲಿ ದೇವಾಲಯದ ಪ್ರವೇಶೋತ್ಸವ ಹಾಗೂ ಮೂರ್ತಿ ಸ್ಥಾಪನೆ ನೆರವೇರಲಿದೆ.
-
ಏಪ್ರಿಲ್ 21 (ಮಂಗಳವಾರ): ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಪಾರ್ವತೀ ದೇವಿಯ ಪುನರ್ ಪ್ರತಿಷ್ಠಾಪನೆ, ಚಪ್ಪರ ಮಿಲನ ಮತ್ತು ಕಳಶಾರೋಹಣ ನಡೆಯಲಿದೆ. ಇದರೊಂದಿಗೆ ಶ್ರೀ ಗಣಪತಿ ಪೂಜೆ, ಪುಣ್ಯಾಹವಾಚನ, ರುದ್ರ ಕಲಶಾಭಿಷೇಕ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ ಹಾಗೂ ವಿವಿಧ ಹೋಮ-ಹವನಗಳು ಜರುಗಲಿವೆ.
-
ಧರ್ಮಸಭೆ ಮತ್ತು ಅನ್ನಸಂತರ್ಪಣೆ: ಅಂದು ಮಧ್ಯಾಹ್ನ 12 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ:
ಏಪ್ರಿಲ್ 21ರ ರಾತ್ರಿ 10 ಗಂಟೆಗೆ “ಶ್ರೀ ಶನೀಶ್ವರ ಮಹಾತ್ಮೆ” ಅಥವಾ “ರಾಜ ವಿಕ್ರಮನ ಸತ್ವ ಪರೀಕ್ಷೆ” ಎಂಬ ಭಕ್ತಿಪ್ರಧಾನ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
ದೂಗೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ತನು-ಮನ-ಧನಗಳಿಂದ ಈ ಸೇವೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೂಗೂರಿನ ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ
ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್








