ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನ, ಸ್ನೇಹ ಬಳಗ, ಪಿಗ್ಮಿ ಸಂಗ್ರಹಕರು ಹಾಗೂ ಇಂಡಸ್ಟ್ರೀಯಲ್ ಮಾಲೀಕರು ಜೊತೆಗೂಡಿ ಮಾರಿಕಾಂಬಾ ರುದ್ರಭೂಮಿಯ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ಎರಡು ವಾರಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಅಭಿಯಾನದಲ್ಲಿ ನ್ಯಾಸದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರುದ್ರಭೂಮಿಯ ಆವರಣವನ್ನು ಸ್ವಚ್ಛಗೊಳಿಸಿದರು.
ರುದ್ರಭೂಮಿ ದೇವಸ್ಥಾನವಿದ್ದಂತೆ
ಶ್ರಮದಾನದ ಬಳಿಕ ಮಾತನಾಡಿದ ಮಾರಿಕಾಂಬ ದೇವಿಯ ಪ್ರತಿಷ್ಠಾನದ ಅಧ್ಯಕ್ಷರಾದ ಪವಿತ್ರ ನಾಗರಾಜ್, “ರುದ್ರಭೂಮಿ ಎನ್ನುವುದು ಕೇವಲ ಸ್ಮಶಾನವಲ್ಲ, ಅದು ದೇವಸ್ಥಾನವಿದ್ದಂತೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿ ಮಾರಿಕಾಂಬಾ ನ್ಯಾಸದಿಂದ ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಕಟ್ಟಿಗೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುತ್ತಿರುವ ರಾಜ್ಯದ ಬೆರಳೆಣಿಕೆಯ ರುದ್ರಭೂಮಿಗಳಲ್ಲಿ ಇದೂ ಒಂದು,” ಎಂದು ತಿಳಿಸಿದರು.

ಮುಂದುವರಿದು ಅವರು, “ಅಂತಿಮ ಸಂಸ್ಕಾರಕ್ಕೆ ಬರುವವರು ಪೂಜಾ ಸಾಮಗ್ರಿ, ಹೂವು, ಬಟ್ಟೆ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ವಿಷಾದನೀಯ. ಇಲ್ಲಿ ಕಸ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ರುದ್ರಭೂಮಿಯ ಪಾವಿತ್ರ್ಯತೆ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮುಂದಿನ ದಿನಗಳಲ್ಲಿ ಇಲ್ಲಿ ನಾಮಫಲಕಗಳು ಹಾಗೂ ಕಸದ ಬುಟ್ಟಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲಾಗುವುದು,” ಎಂದು ಹೇಳಿದರು.
ಸಾರ್ವಜನಿಕರಿಗೆ ಸೂಚನಾ ಫಲಕ ಮತ್ತು ಅಭಿವೃದ್ಧಿ ಕಾರ್ಯಗಳು
ಉಪಾಧ್ಯಕ್ಷರಾದ ಶ್ರೀನಿವಾಸ್ ಮೇಸ್ತ್ರಿ ಮಾತನಾಡಿ, “ರುದ್ರಭೂಮಿಗೆ ಬರುವ ಜನರಿಗೆ ಜಾಗೃತಿ ಮೂಡಿಸಲು ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಕೇವಲ ಶ್ರಮದಾನಕ್ಕೆ ಸೀಮಿತವಾಗದೆ, ಇಲ್ಲಿನ ಪರಿಸರವನ್ನು ಮತ್ತಷ್ಟು ಸುಂದರಗೊಳಿಸಲು ಉದ್ಯಾನವನ (Garden) ನಿರ್ಮಿಸುವ ಯೋಜನೆಯೂ ಇದೆ. ಸಮಾಜದ ವಿವಿಧ ಮುಖಂಡರು ಹಾಗೂ ಸಂಘಟನೆಗಳು ಈ ಕಾರ್ಯಕ್ಕೆ ಕೈಜೋಡಿಸುತ್ತಿರುವುದು ಸಂತೋಷದ ವಿಷಯ” ಎಂದರು.
ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ, ಮಂದೆ ಎಲ್ಲರೂ ಭಾಗಿಯಾಗಲು ಕರೆ
ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ಡಿ ಆನಂದ್ ಮಾತನಾಡಿ, ಈ ವಾರದ ಕೆಲಸವಾಗಿ ಸಾಗರದ ಮಾರಿಕಾಂಬಾ ರುದ್ರ ಭೂಮಿಯಲ್ಲಿ ಶ್ರಮದಾನ ಮಾಡಲಾಗಿದೆ. ಇದು ನಿಮ್ಮ ರುದ್ರಭೂಮಿಯಾಗಿದೆ. ದೇವಸ್ಥಾನವಿದ್ದಂತೆ. ಎಲ್ಲರು ಸ್ವಚ್ಚತೆಯನ್ನು ಕಾಪಾಡಬೇಕು. ರುದ್ರಭೂಮಿಗೆ ಬಂದಂತ ಸಾರ್ವಜನಿಕರು ಎಲ್ಲೆಂದರಲ್ಲಿ ವಸ್ತುಗಳನ್ನು ಎಸೆಯಬಾರದು. ಸೂಕ್ತ ಸ್ಥಳದಲ್ಲಿಯೇ ಅನುಪಯುಕ್ತ ವಸ್ತುಗಳನ್ನು ಹಾಕಿ ಎಂಬುದಾಗಿ ಮನವಿ ಮಾಡಿದರು.
ಇಂದಿನ ಮಾರಿಕಾಂಬ ರುದ್ರಭೂಮಿಯ ಶ್ರಮದಾನದಲ್ಲಿ ಅತ್ಯಂತ ಗಲೀಜುಗೊಂಡಿದ್ದಂತ ಕಟ್ಟಡವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗಿದೆ. ಪ್ರತಿಷ್ಠಾನದ ಜೊತೆಗೆ ವಿವಿಧ ಸಂಘಟನೆಗಳು ಸಾಥ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಿರಂತವಾಗಿ ಶ್ರಮದಾನದ ಮೂಲಕ ಮಾರಿಕಾಂಬ ರುದ್ರಭೂಮಿಯನ್ನು ಅತ್ಯಂತ ಸ್ವಚ್ಚವಾಗಿ ಇರುವಂತ ಕೆಲಸವನ್ನು ಮಾಡಲಾಗುವುದು. ಇದಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂಬುದಾಗಿ ಕೋರಿದರು.

ವಿವಿಧ ಸಂಘಟನೆಗಳ ಸಾಥ್
ಈ ಶ್ರಮದಾನ ಕಾರ್ಯಕ್ರಮದಲ್ಲಿ ಸ್ನೇಹ ಸಾಗರ ಬಳಗ, ಇಂಡಸ್ಟ್ರಿಯಲ್ ಏರಿಯಾ ಸಂಘದ ಸದಸ್ಯರು, ಪಿಗ್ಮಿ ಸಂಗ್ರಹಕಾರರು ಹಾಗೂ ನ್ಯಾಸದ ಕಾರ್ಯದರ್ಶಿಗಳು, ಖಜಾಂಚಿಗಳು ಸೇರಿದಂತೆ ಹತ್ತಾರು ಸದಸ್ಯರು ಭಾಗವಹಿಸಿದ್ದರು. ರುದ್ರಭೂಮಿಯ ಪ್ರತಿ ಮೂಲೆಯನ್ನು ಸ್ವಚ್ಛಗೊಳಿಸಿ, ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು.
ಸಾರ್ವಜನಿಕರು ಈ ಶ್ರಮದಾನಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ, ಅಂತಿಮ ಸಂಸ್ಕಾರದ ವೇಳೆ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ವೇಳೆ ಶ್ರೀ ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಸಹ ಕಾರ್ಯದರ್ಶಿ ಡಿಶ್ ಗುರು, ಪುರುಷೋತ್ತಮ್(ಪುಚ್ಚಿ), ಖಜಾಂಚಿ ವಿ.ಶಂಕರ್(ಮಾಸ್ಟರ್ ಶಂಕರ್), ಸಂತೋಷ್ ಶೆಟ್, ನಿತ್ಯಾನಂದ್, ಸ್ನೇಹ ಬಳಗದ ಅಧ್ಯಕ್ಷರಾದಂತ ಶಿವಾನಂದ್, ಅರವಿಂದ್ ರಾಯ್ಕರ್, ಪಿಗ್ಮಿ ಸಂಗ್ರಹಕಾರರಿಂದ ಸುರೇಶ್ ಬಿದರಕಟ್ಟೆ, ನಾಗರಾಜ್ ಮತ್ತು ಸ್ನೇಹಿತರು. ಇಂಡಸ್ಟ್ರೀಯಲ್ ಮಾಲೀಕರಾದಂತ ಮನೋಜ್, ಸುಧೀರ್ ಹಾಗೂ ಇತರರು ಶ್ರಮದಾನದಲ್ಲಿ ಭಾಗಿಯಾಗಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ನಿಮ್ಮ ಮೇಲಿನ ಆರೋಪ ಸುಳ್ಳಾಗಲಿ: ತಂದೆ ವಿನಯ್ ಕುಲಕರ್ಣಿ ಪರ ಪುತ್ರಿ ವೈಶಾಲಿ ಭಾವನಾತ್ಮಕ ಪೋಸ್ಟ್!
ಬೇಸಿಗೆಯ ಬಿಸಿಲಿಗೆ ‘ಗೊಂದು ಕಟೀರಾ’ ರಾಮಬಾಣ: ಇದು ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಅದ್ಭುತ ಮದ್ದು!
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್








