ನವದೆಹಲಿ : ಲೋಕಸಭೆಯಲ್ಲಿ ಮಹತ್ವದ ಮಸೂದೆಗಳ ಬಗ್ಗೆ ಇಂದು ಆಡಳಿತ ಹಾಗೂ ವಿಪಕ್ಷಗಳ ನಡುವೆ ಚರ್ಚೆ ತಾರಕಕ್ಕೆ ಏರಿತು. ಈ ವಿಚಾರದ ಕುರಿತು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಮಾತನಾಡಿದ್ದು ಕ್ಷೇತ್ರ ಮರು ವಿಂಗಡಣೆ ದಲಿತರ ಹಾಗೂ ಒಬಿಸಿಗಳನ್ನು ಕಟ್ಟಿ ಹಾಕುವ ಯತ್ನ ಎಂದು ಆಕ್ರೋಶ ಹೊರಹಾಕಿದರು.
ದಲಿತರು ಓಬಿಸಿ ವರ್ಗವನ್ನು ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಲಿದೆ ಕ್ಷೇತ್ರ ಮರು ವಿಂಗಡನೆ ದೇಶ ವಿರೋಧಿ ಮಸೂದೆಯಾಗಿದೆ ದೇಶದ ಚುನಾವಣೆ ನೀತಿಯನ್ನೇ ತೀರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಚೆನ್ನಾಗಿ ಗೊತ್ತು ಈ ಬಿಲ್ ಪಾಸ್ ಮಾಡಲು ಆಗಲ್ಲ ಆದರೆ ಇದೊಂದು ಪ್ಲಾನಿಕ್ ರಿಯಾಕ್ಷನ್ ಆಗಿದೆ ಜಾದುಗಾರನ ಸತ್ಯ ಎಲ್ಲರಿಗೂ ಗೊತ್ತಾಗಿ ಹೋಗಿದೆ. ಆಪರೇಷನ್ ಸಿಂಧೂರದ ಜಾದುಗಾರ ಪ್ರಧಾನಿ ನರೇಂದ್ರ ಮೋದಿ. ಆದರೆ ಈ ಜಾದುಗಾರನ ಸತ್ಯ ದೇಶಕ್ಕೆ ಗೊತ್ತಾಗಿದೆ. ಪ್ರಧಾನಿ ಮೋದಿ ದುರ್ಬಲ ಮತ್ತು ನಿಶಕ್ತಿಯ ನಾಯಕ ಸೇನೆಯ ಹಿಂದೆ ಹೇಡಿಗಳ ರೀತಿ ಅಡಗಿದ್ದಾರೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ವಾಗ್ದಾಳಿ ನಡೆಸಿದರು. ಎಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್ ಗಾಂಧಿ ಟಾಂಗ್ ನೀಡಿದರು. ಈ ವೇಳೆ ರಾಹುಲ್ ಗಾಂಧಿ ಮಾತಿಗೆ ಕಿರಣ್ ರಿಜಿಜು ಆಕ್ರೋಶ ಅವರ ಹಾಕಿದರು. ನಿಮ್ಮ ಭಾಷೆಯ ಬಳಕೆ ಸರಿಯಲ್ಲ ಎಂದು ಕಿಡಿಕಾರಿದರು.








