ಮಂಡ್ಯ :- ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯದ ಮದ್ದೂರು ನಗರದಲ್ಲಿ ಜರುಗಿದೆ.
ತಮಿಳುನಾಡು ಮೂಲದ ಕವಾಜ್ ಅಲಿಯಾಸ್ ಸತ್ಯ (35) ಮೃತ ಕಾರ್ಮಿಕ ಎಂದು ತಿಳಿದು ಬಂದಿದೆ.
ನಗರದ ಟೀಚರ್ಸ್ ಕಾಲೋನಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಹಾಸ್ಟೆಲ್ ನ ಕಟ್ಟಡ ಕಾಮಗಾರಿ ನಿರ್ಮಾಣವಾಗುತ್ತಿದ್ದು, ಶನಿವಾರ ಕಟ್ಟಡ ಕಾಮಗಾರಿಯ ಸೆಂಟ್ರಿಂಗ್ ಕೆಲಸ ಮಾಡಲು ಬಂದ ವೇಳೆ ಕಟ್ಟಡದಿಂದ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ
ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
ಆನ್‌ಲೈನ್ ಇನ್ವೆಸ್ಟ್‌ಮೆಂಟ್ ವಂಚನೆ: 33 ಲಕ್ಷ ದೋಚಿದ್ದ ಅಂತರರಾಜ್ಯ ಜಾಲ ಭೇದಿಸಿದ ಪೊಲೀಸರು, ನಾಲ್ವರು ಅರೆಸ್ಟ್
BREAKING: GBA ವ್ಯಾಪ್ತಿಯ 5 ನಗರ ಪಾಲಿಕೆಗಳ ವಾರ್ಡ್ ವಾರು ‘ಅಂತಿಮ ಮತದಾರರ ಪಟ್ಟಿ’ ಪ್ರಕಟ








