ನವದೆಹಲಿ: ಬೀದಿಬದಿಯ ಚಟಪಟ ಆಹಾರಗಳ ಮೋಹ ಎಂತಹ ಅಪಾಯ ತರಬಲ್ಲದು ಎಂಬುದಕ್ಕೆ ದೆಹಲಿಯ ಬುರಾರಿಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಅತಿಯಾಗಿ ಮೊಮೊಸ್ ಸೇವಿಸಿದ ಪರಿಣಾಮ 10 ವರ್ಷದ ಬಾಲಕಿಯೊಬ್ಬಳು ಲಿವರ್ ಫೈಲ್ಯೂರ್ (ಯಕೃತ್ ವೈಫಲ್ಯ) ಗೆ ತುತ್ತಾಗಿದ್ದು, ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾಳೆ.
ಕಳೆದ ಕೆಲವು ದಿನಗಳಿಂದ ಸತತವಾಗಿ ಹೊರಗಿನ ಮೊಮೊಸ್‌ಗಳನ್ನು ಸೇವಿಸಿದ್ದ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ತಪಾಸಣೆ ನಡೆಸಿದಾಗ ಅವಳ ಲಿವರ್ ಶೇ. 80ಕ್ಕಿಂತ ಹೆಚ್ಚು ಹಾನಿಗೊಳಗಾಗಿರುವುದು ಪತ್ತೆಯಾಗಿದೆ.
ಲಿವರ್ ವೈಫಲ್ಯದ ಪರಿಣಾಮ ಬಾಲಕಿಯ ಮೆದುಳಿನ ಮೇಲೂ ಪರಿಣಾಮ ಬೀರಿದ್ದು, ಅವಳು ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾಳೆ (Memory Loss). ಅಲ್ಲದೆ, ಅವಳ ಕೈಕಾಲುಗಳ ಚಲನೆ ಕೂಡ ಸ್ಥಗಿತಗೊಂಡಿದೆ (Mobility Issues).
ಮೊಮೊಸ್ ತಯಾರಿಕೆಯಲ್ಲಿ ಬಳಸುವ ಕಲಬೆರಕೆ ಹಿಟ್ಟು, ಅತಿಯಾದ ಅಜಿನೋಮೊಟೊ ಮತ್ತು ಅತ್ಯಂತ ಖಾರವಾದ ಚಟ್ನಿ ಈ ಪರಿಸ್ಥಿತಿಗೆ ಕಾರಣವಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಪ್ರಸ್ತುತ ಬಾಲಕಿಯನ್ನು ತುರ್ತು ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.








