ನವದೆಹಲಿ: ಜಾಗತಿಕ ಮಟ್ಟದ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆ ‘X’ (ಹಿಂದಿನ ಟ್ವಿಟರ್) ಇಂದು ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದೆ. ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಸಾವಿರಾರು ಬಳಕೆದಾರರು ಲಾಗಿನ್ ಆಗಲು, ಆಪ್ ಬಳಸಲು ಮತ್ತು ಹೊಸ ಫೀಡ್‌ಗಳನ್ನು ನೋಡಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಮುಂಜಾನೆಯಿಂದಲೇ ‘X’ ಪ್ಲಾಟ್‌ಫಾರ್ಮ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. “Something went wrong” ಎಂಬ ಸಂದೇಶ ಬಳಕೆದಾರರಿಗೆ ಕಾಣಿಸುತ್ತಿದೆ.
ವೆಬ್‌ಸೈಟ್‌ಗಳ ಸ್ಥಿತಿಗತಿಯನ್ನು ಮೇಲ್ವಿಚಾರಣೆ ಮಾಡುವ ‘ಡೌನ್ ಡಿಟೆಕ್ಟರ್’ (Down Detector) ಪ್ರಕಾರ, ಸಾವಿರಾರು ಜನರು ಈ ಕುರಿತು ದೂರು ನೀಡಿದ್ದಾರೆ. ಪೋಸ್ಟ್ ಮಾಡಲು ಹೊರಟರೆ ‘ಪೋಸ್ಟ್ ಫೇಲ್ಡ್’ ಎಂಬ ನೋಟಿಫಿಕೇಶನ್ ಬರುತ್ತಿದೆ.ಭಾರತದ ಮೆಟ್ರೋ ನಗರಗಳಾದ ಬೆಂಗಳೂರು, ದೆಹಲಿ, ಮುಂಬೈ ಮಾತ್ರವಲ್ಲದೆ ಅಮೆರಿಕ, ಯುಕೆ ಮತ್ತು ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಈ ಸಮಸ್ಯೆ ಉಲ್ಬಣಿಸಿದೆ.







