ಬೆಂಗಳೂರು : ಬೆಂಗಳೂರಿನಲ್ಲಿ ಶಾಲೆ ಒಂದು ದೊಡ್ಡ ಎಡವಟ್ಟು ಮಾಡಿದೆ. ಬೆಂಗಳೂರಿನ ಪೊಲೀಸ್ ಪಬ್ಲಿಕ್ ಶಾಲೆ ಈ ಒಂದು ಎಡವಟ್ಟು ಮಾಡಿದ್ದು UKG ಇಂದ 7ನೇ ತರಗತಿ ವರೆಗಿನ ಸುಮಾರು 80ಕ್ಕೂ ಹೆಚ್ಚು ಮಕ್ಕಳನ್ನು ಫೇಲ್ ಮಾಡಿದೆ.
ಹೌದು ಯುಕೆಜಿ ಇಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಮಕ್ಕಳನ್ನು ಫೇಲ್ ಮಾಡಿದೆ. ಸರ್ಕಾರದ ನಿಯಮದ ಪ್ರಕಾರ ಒಂದು ಹಂತದವರೆಗೆ ಮಕ್ಕಳನ್ನು ಫೇಲ್ ಮಾಡುವ ಹಾಗಿಲ್ಲ ಅಂತ ನಿಯಮವಿದೆ.
ಆದರೆ ಈ ಒಂದು ಶಾಲೆ 80 ಮಕ್ಕಳನ್ನು ಮಾಡಿ ಎಡವಟ್ಟು ಮಾಡಿದೆ. ಪೋಷಕರು ಇದೀಗ ಶಾಲೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವಿಚಾರವಾಗಿ ಶಾಲೆಯ ಹೆಡ್ ಮಾಸ್ಟರ್ ಅರ್ಚನಾ ಅವರು ಪ್ರತಿಕ್ರಿಯೆ ನೀಡಿದ್ದು ಇದು ಒಂದು ಸುಳ್ಳು ಸುದ್ದಿ, 46 ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕೊಟ್ಟಿದ್ದು, 25 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಿ ಪಾಸ್ ಮಾಡುತ್ತೇವೆ. ಇದು ಒಂದು ರೀತಿಯಲ್ಲಿ ಎಚ್ಚರಿಕೆ ಕೊಟ್ಟಿದ್ದೇವೆ. ನಾವು ಯಾವುದೇ ಕಾರಣಕ್ಕೂ ಫೀಲ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.







