ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಈ ಮಹಿಳೆ ತನಗೆ ಕಂಪನಿ ನೀಡುತ್ತಿರುವ ಸಂಬಳ ತಾನು ಹಾಕುವ ಶ್ರಮಕ್ಕೆ ಸಾಲುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದರು. ಈ ಕಾರಣಕ್ಕಾಗಿ ತನ್ನ ಕೆಲಸದ ಅವಧಿಯನ್ನು ತಾನೇ ಕಡಿತಗೊಳಿಸಲು ನಿರ್ಧರಿಸಿದ ಆಕೆ, ಕಚೇರಿಯಲ್ಲೇ ಮಲಗಿಬಿಟ್ಟರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಆಕೆ, “ನೀವು ಎಷ್ಟು ಸಂಬಳ ನೀಡುತ್ತೀರೋ, ಅಷ್ಟಕ್ಕೇ ಸೀಮಿತವಾದ ಕೆಲಸವನ್ನಷ್ಟೇ ನಾನು ಮಾಡುತ್ತೇನೆ” (You get what you pay for) ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಾಸ್ ಮತ್ತು ಉದ್ಯೋಗಿ ನಡುವಿನ ಜಟಾಪಟಿ
ಕೆಲಸದ ಸಮಯದಲ್ಲಿ ನಿದ್ದೆ ಮಾಡುತ್ತಿದ್ದ ಮಹಿಳೆಯನ್ನು ಕಂಡು ಆಕೆಯ ಬಾಸ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಹೀಗೆಯೇ ಮುಂದುವರಿದರೆ ಕೆಲಸದಿಂದ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಾಸ್ ಬೈದ ನಂತರ ಆಕೆ ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಡುತ್ತಾ ವಿಡಿಯೋ ಹಂಚಿಕೊಂಡಿದ್ದಾರೆ. ತನಗೆ ಅನ್ಯಾಯವಾಗುತ್ತಿದೆ ಮತ್ತು ಕಡಿಮೆ ಸಂಬಳ ನೀಡುವ ಕಂಪನಿಗಳಿಗೆ ಪಾಠ ಕಲಿಸಲು ತಾನು ಈ ರೀತಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಈ ಪ್ರಕರಣ ಇನ್ನಷ್ಟು ಗಂಭೀರವಾದದ್ದು ಆಕೆ ನಿದ್ದೆಯಿಂದ ಎದ್ದ ನಂತರ ಮಾಡಿದ ಕೆಲಸದಿಂದ. ನಿದ್ದೆ ಮುಗಿಸಿ ಎದ್ದ ಮಹಿಳೆ, ತನ್ನ ಬಾಸ್ ಟೇಬಲ್ ಮೇಲಿದ್ದ ಚಾಕೊಲೇಟ್ ತೆಗೆದುಕೊಂಡು ತಿಂದಿದ್ದಾರೆ.
ಆದರೆ, ಆಕೆಯ ಬಾಸ್ಗೆ ‘ಗ್ಲೂಕೋಸ್ ಇಂಟಾಲರೆನ್ಸ್’ (ಸಕ್ಕರೆ ಅಂಶದ ವ್ಯತ್ಯಯ) ಕಾಯಿಲೆ ಇತ್ತು. ಹಸಿವಾದಾಗ ಅಥವಾ ಸಕ್ಕರೆ ಮಟ್ಟ ಕಡಿಮೆಯಾದಾಗ ತಿನ್ನಲೆಂದು ಅವರು ಆ ಚಾಕೊಲೇಟ್ ಇಟ್ಟುಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಅದು ಸಿಗದ ಕಾರಣ ಅವರು ಪ್ರಜ್ಞೆ ತಪ್ಪಿ ಬೀಳುವ ಹಂತಕ್ಕೆ ತಲುಪಿದ್ದರು. ಈ ವಿಚಾರವಾಗಿ ಬಾಸ್ ಮತ್ತಷ್ಟು ಆಕ್ರೋಶಗೊಂಡು, “ನೀನು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದೀಯಾ?” ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ಹೆಚ್ಚಿನ ಜನರು ಮಾಲೀಕನ ಪರವಾಗಿಯೇ ಮಾತನಾಡಿದ್ದಾರೆ. ನೆಟ್ಟಿಗರು ಈ ಮಹಿಳೆಯ ವರ್ತನೆಯನ್ನು ಹೀಗೆ ಟೀಕಿಸಿದ್ದಾರೆ:
“ಜೀವನದಲ್ಲಿ ಮೊದಲ ಬಾರಿಗೆ ನಾನು ಬಾಸ್ ಪರವಾಗಿ ನಿಲ್ಲುತ್ತಿದ್ದೇನೆ!” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.”ದಿನಕ್ಕೆ 8 ಗಂಟೆ ಕೆಲಸದಲ್ಲಿ 5 ಗಂಟೆ ನಿದ್ದೆ ಮಾಡಿದರೆ, ಇನ್ನು ಕೆಲಸ ಮಾಡುವುದು ಯಾವಾಗ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಮುಂದಿನ ಬಾರಿ ನಿದ್ದೆ ಮಾಡುವಾಗ ಅಲಾರಂ ಇಟ್ಟುಕೊಳ್ಳಿ, ಇಲ್ಲದಿದ್ದರೆ ಮನೆಗೆ ಹೋಗುವ ಸಮಯವನ್ನೂ ಮರೆತುಬಿಟ್ಟೀರಿ” ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಕಡಿಮೆ ಸಂಬಳದ ಬಗ್ಗೆ ಅಸಮಾಧಾನವಿರುವುದು ಸಹಜವಾದರೂ, ಕೆಲಸದ ಸಮಯದಲ್ಲಿ ನಿದ್ದೆ ಮಾಡುವುದು ಮತ್ತು ಸಹೋದ್ಯೋಗಿಗಳ ಆಹಾರ ಕಳ್ಳತನ ಮಾಡುವುದು ವೃತ್ತಿಧರ್ಮಕ್ಕೆ ವಿರುದ್ಧವಾದುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.







