Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಧಾರವಾಡದಲ್ಲಿ ಮದುವೆ ಸಿದ್ಧತೆಯಲ್ಲಿದ್ದ ಯುವ ಕಾಂಗ್ರೆಸ್ ನಾಯಕನ ಭೀಕರ ಹತ್ಯೆ; 8 ಆರೋಪಿಗಳ ಬಂಧನ

12/04/2026 5:21 PM

371 ಜೆ ತಿದ್ದುಪಡಿಯಿಂದ ಪ್ರಗತಿಯ ಪಥದಲ್ಲಿ ಕಲ್ಯಾಣ ಕರ್ನಾಟಕ: ಸಚಿವ ಈಶ್ವರ ಖಂಡ್ರೆ

12/04/2026 5:00 PM

SHOCKING : ಇಯರ್‌ ಬಡ್‌ ಬಳಸೋ ಮುನ್ನ ಹುಷಾರ್ : ಕಿವಿಯಲ್ಲೇ ಇಯರ್‌ ಬಡ್‌ ಸ್ಫೋಟಗೊಂಡು ವಿದ್ಯಾರ್ಥಿನಿಗೆ ಗಂಭೀರ ಗಾಯ!

12/04/2026 5:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 371 ಜೆ ತಿದ್ದುಪಡಿಯಿಂದ ಪ್ರಗತಿಯ ಪಥದಲ್ಲಿ ಕಲ್ಯಾಣ ಕರ್ನಾಟಕ: ಸಚಿವ ಈಶ್ವರ ಖಂಡ್ರೆ
KARNATAKA

371 ಜೆ ತಿದ್ದುಪಡಿಯಿಂದ ಪ್ರಗತಿಯ ಪಥದಲ್ಲಿ ಕಲ್ಯಾಣ ಕರ್ನಾಟಕ: ಸಚಿವ ಈಶ್ವರ ಖಂಡ್ರೆ

By kannadanewsnow0912/04/2026 5:00 PM

ಬೀದರ್ : 371 ಜೆ ಸಾಂವಿಧಾನಿಕ ತಿದ್ದುಪಡಿಯಿಂದಾಗಿ ಕಲ್ಯಾಣ ಕರ್ನಾಟಕ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೀದರ್ ನ ಝೀರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ 2 ದಿನಗಳ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿಗೆ ಮಾಧ್ಯಮಗಳು ಸಲಹೆ ನೀಡುವ ಮೂಲಕ ಸಹಕಾರ ನೀಡಬೇಕು ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕಾ ಸ್ವಾತಂತ್ರ್ಯ ಪತ್ರಕರ್ತರಿಗೆ ಜೀವಾಳವಾಗಿದೆ ಎಂದ ಅವರು, ಎಲ್ಲ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಮಾಧ್ಯಮ ರಂಗದಲ್ಲೂ ಸ್ಪರ್ಧೆ ಇದೆ. ನಾವೇ ಮೊದಲು ಎಂಬ ಧಾವಂತದಲ್ಲಿ ಅಸತ್ಯವಾದ ಸುದ್ದಿಗಳು, ಆಧಾರ ರಹಿತ ಸುದ್ದಿಗಳು ಬಿತ್ತರವಾಗದಂತೆ ಮಾಧ್ಯಮಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.

ಜನಾಭಿಪ್ರಾಯ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿದೆ. ಪತ್ರಕರ್ತರ ಮುಂದೆ ಸವಾಲುಗಳಿವೆ. ಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ರಕ್ಷಣೆ ನೀಡುವ ನೀಟ್ಟಿನಲ್ಲಿ ಸರ್ಕಾರ ಸ್ಪಂದಿಸಲಿದೆ ಎಂದರು.

ಮಾಧ್ಯಮಗಳು ಸಮಾಜದ ಓರೆ, ಕೋರೆಯನ್ನು ಎತ್ತಿ ತೋರಿಸುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡುತ್ತಿದ್ದವು. 20-30 ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಯಾವುದಾದರೂ ಅಧಿಕಾರಿಯ, ಜನಪ್ರತಿನಿಧಿ ಭ್ರಷ್ಟಾಚಾರಿ ಎಂದು ಪ್ರಕಟವಾದರೆ ಅವರು ಕುಗ್ಗಿ ಹೋಗುತ್ತಿದ್ದರು. ಸಮಾಜ ಅವರನ್ನು ನಿಕೃಷ್ಟವಾಗಿ ಕಾಣುತ್ತಿತ್ತು. ಹೀಗಾಗಿ ಮಾಧ್ಯಮಗಳು ಅದೇ ಹಿಂದಿನ ವಿಶ್ವಾಸಾರ್ಹತೆ ಗಳಿಸಬೇಕು ಎಂದರು.

ಮಾಧ್ಯಮಗಳು ಸಮಾಜದ ನಾಲ್ಕನೇ ಅಂಗವಾಗಿವೆ. ಇಂದು ರಾಜ್ಯದಲ್ಲಿ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವನಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಇಂದು ರಾಜ್ಯದಲ್ಲಿ ಪ್ರಕೃತಿ, ಪರಿಸರ ಹಾಗೂ ಅರಣ್ಯ ಉಳಿದಿದ್ದರೆ ಅದರಲ್ಲಿ ಮಾಧ್ಯಮಗಳ ಪಾತ್ರವೂ ಹಿರಿದಾಗಿದೆ ಎಂದರು.

ಈ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ಇಲ್ಲಿ ಯಶಸ್ವಿಯಾಗಿ ನಡೆದಿದ್ದು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ಮಾಧ್ಯಮ ಕುರಿತಂತೆ ಹಾಗೂ ಗಡಿ ಭಾಗದ ಸಮಸ್ಯೆಗಳ ಬಗ್ಗೆ ಸಹ ಇಲ್ಲಿ ಚಿಂತನ ಮಂಥನ ಆಗಿರುವುದು ಸಂತೋಷದ ವಿಷಯವಾಗಿದೆ ಎಂದರು.

ಯಾವುದೇ ಮಾಧ್ಯಮಕ್ಕೆ ತನ್ನ ವಿಶ್ವಾಸಾರ್ಹತೆಯೇ ಜೀವಾಳ. ಅದೇ ರೀತಿ ಪತ್ರಕರ್ತರಿಗೆ ಪತ್ರಿಕಾ ಸ್ವಾತಂತ್ರ್ಯವೇ ಪ್ರಾಣವಾಯು. ನೀವೆಲ್ಲರೂ ಸಮಾಜದ ಒಳಿತಿಗಾಗಿ ಕೆಲಸ ಮಾಡಿ, ಸಮಾಜಕ್ಕೆ ಹಿತವಾದ ಸುದ್ದಿ, ವರದಿ ಪ್ರಕಟಿಸಿ ಎಂದು ಹೇಳಿ, 40ನೇ ಪತ್ರಕರ್ತರ ಸಮ್ಮೇಳನದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಈಶ್ವರ ಬಿ ಖಂಡ್ರೆ ಅವರನ್ನು ಕೆ.ಯು.ಡಬ್ಲ್ಯು.ಜೆ. ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕರುಗಳಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಶಲಗಾರ್, ಸಿದ್ದು ಪಾಟೀಲ್, ಎಂ.ಜಿ.ಮೂಳೆ, ಮಾಜಿ ಶಾಸಕರಾದ ಬಂಡೆಪ್ಪ ಖಾಶೆಂಪೂರ್, ಕೆ.ಯು.ಡಬ್ಲ್ಯು.ಜೆ. ಅಧ್ಯಕ್ಷ ಶಿವಾನಂದ ತಗಡೂರ್ ಮತ್ತಿತರರು ಪಾಲ್ಗೊಂಡಿದ್ದರು.

ಅಮರನಾಥ ಯಾತ್ರೆ 2026ರ ವೇಳಾಪಟ್ಟಿ ಪ್ರಕಟ: ಇಂದಿನಿಂದಲೇ ನೋಂದಣಿ ಆರಂಭ, ಯಾತ್ರಾರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಸಿಹಿಯಾದ ಡೆಸರ್ಟ್ ಜೊತೆಗೆ 40 ಗ್ರಾಂ ಪ್ರೋಟೀನ್! ಇಲ್ಲಿದೆ ಗ್ರೀಕ್ ಯೋಗರ್ಟ್‌ನ ಆರೋಗ್ಯಕರ ರೆಸಿಪಿ

Share. Facebook Twitter LinkedIn WhatsApp Email

Related Posts

ಧಾರವಾಡದಲ್ಲಿ ಮದುವೆ ಸಿದ್ಧತೆಯಲ್ಲಿದ್ದ ಯುವ ಕಾಂಗ್ರೆಸ್ ನಾಯಕನ ಭೀಕರ ಹತ್ಯೆ; 8 ಆರೋಪಿಗಳ ಬಂಧನ

12/04/2026 5:21 PM2 Mins Read

ನಾಳೆಯಿಂದ ಬೆಂಗಳೂರಿನ ಪೀಣ್ಯ ಫ್ಲೈಓವರ್ 4 ದಿನ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

12/04/2026 3:53 PM1 Min Read

ಹೆಂಡತಿಯನ್ನು ನೋಡಿ ಬೊಗಳಿದ್ದಕ್ಕೆ ಸಾಕು ನಾಯಿಯ ಮೇಲೆ ಕ್ರೌರ್ಯ: ಬೆಂಗಳೂರಿನಲ್ಲಿ ವ್ಯಕ್ತಿಯ ಅಮಾನವೀಯ ಕೃತ್ಯ!

12/04/2026 3:50 PM1 Min Read
Recent News

ಧಾರವಾಡದಲ್ಲಿ ಮದುವೆ ಸಿದ್ಧತೆಯಲ್ಲಿದ್ದ ಯುವ ಕಾಂಗ್ರೆಸ್ ನಾಯಕನ ಭೀಕರ ಹತ್ಯೆ; 8 ಆರೋಪಿಗಳ ಬಂಧನ

12/04/2026 5:21 PM

371 ಜೆ ತಿದ್ದುಪಡಿಯಿಂದ ಪ್ರಗತಿಯ ಪಥದಲ್ಲಿ ಕಲ್ಯಾಣ ಕರ್ನಾಟಕ: ಸಚಿವ ಈಶ್ವರ ಖಂಡ್ರೆ

12/04/2026 5:00 PM

SHOCKING : ಇಯರ್‌ ಬಡ್‌ ಬಳಸೋ ಮುನ್ನ ಹುಷಾರ್ : ಕಿವಿಯಲ್ಲೇ ಇಯರ್‌ ಬಡ್‌ ಸ್ಫೋಟಗೊಂಡು ವಿದ್ಯಾರ್ಥಿನಿಗೆ ಗಂಭೀರ ಗಾಯ!

12/04/2026 5:00 PM

ಸಿಹಿಯಾದ ಡೆಸರ್ಟ್ ಜೊತೆಗೆ 40 ಗ್ರಾಂ ಪ್ರೋಟೀನ್! ಇಲ್ಲಿದೆ ಗ್ರೀಕ್ ಯೋಗರ್ಟ್‌ನ ಆರೋಗ್ಯಕರ ರೆಸಿಪಿ

12/04/2026 4:36 PM
State News
KARNATAKA

ಧಾರವಾಡದಲ್ಲಿ ಮದುವೆ ಸಿದ್ಧತೆಯಲ್ಲಿದ್ದ ಯುವ ಕಾಂಗ್ರೆಸ್ ನಾಯಕನ ಭೀಕರ ಹತ್ಯೆ; 8 ಆರೋಪಿಗಳ ಬಂಧನ

By kannadanewsnow0912/04/2026 5:21 PM KARNATAKA 2 Mins Read

ಧಾರವಾಡ: ನಗರದ ಹಾಸ್ಮಿ ನಗರದಲ್ಲಿ ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ (32) ಅವರ…

371 ಜೆ ತಿದ್ದುಪಡಿಯಿಂದ ಪ್ರಗತಿಯ ಪಥದಲ್ಲಿ ಕಲ್ಯಾಣ ಕರ್ನಾಟಕ: ಸಚಿವ ಈಶ್ವರ ಖಂಡ್ರೆ

12/04/2026 5:00 PM

ನಾಳೆಯಿಂದ ಬೆಂಗಳೂರಿನ ಪೀಣ್ಯ ಫ್ಲೈಓವರ್ 4 ದಿನ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

12/04/2026 3:53 PM

ಹೆಂಡತಿಯನ್ನು ನೋಡಿ ಬೊಗಳಿದ್ದಕ್ಕೆ ಸಾಕು ನಾಯಿಯ ಮೇಲೆ ಕ್ರೌರ್ಯ: ಬೆಂಗಳೂರಿನಲ್ಲಿ ವ್ಯಕ್ತಿಯ ಅಮಾನವೀಯ ಕೃತ್ಯ!

12/04/2026 3:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.