ಶಿವಮೊಗ್ಗ: ನಿನ್ನೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಾಗರ ತಾಲ್ಲೂಕಿನ ವಿವಿಧ ಕಾಲೇಜುಗಳು ಅತ್ಯುತ್ತಮ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ಹೆಗ್ಗೋಡಿನ ರೂಪಶ್ರೀ ಕಾಲೇಜು ಹಾಗೂ ಎಂಡಿಎಫ್ ಕಾಲೇಜುಗಳು ಉತ್ತಮ ಫಲಿತಾಂಶ ದಾಖಲಿಸಿವೆ.
ಸರ್ಕಾರಿ ಪದವಿ ಪೂರ್ವ ಕಾಲೇಜು: ಶೇ. 81.75 ಫಲಿತಾಂಶ
ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು ಈ ಬಾರಿ ಅತ್ಯುತ್ತಮ ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾಗಿದ್ದ 1167 ವಿದ್ಯಾರ್ಥಿಗಳ ಪೈಕಿ 954 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
-
ವಿಭಾಗವಾರು ವಿವರ: ಕಲಾ ವಿಭಾಗದಲ್ಲಿ 207, ವಾಣಿಜ್ಯದಲ್ಲಿ 338 ಹಾಗೂ ವಿಜ್ಞಾನ ವಿಭಾಗದಲ್ಲಿ 409 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
-
ಟಾಪರ್‌ಗಳು: ವಾಣಿಜ್ಯ ವಿಭಾಗದಲ್ಲಿ ಕಾರ್ತಿಕ್ ಕಾಮತ್ (593), ವಿಜ್ಞಾನದಲ್ಲಿ ಹಿಮಾಂಶು ಕೆ.ಜಿ. (585) ಮತ್ತು ಕಲಾ ವಿಭಾಗದಲ್ಲಿ ಅರ್ಪಿತಾ ಎಂ.ಪಿ. (573) ಕಾಲೇಜಿಗೆ ಮೊದಲ ಸ್ಥಾನ ಗಳಿಸಿದ್ದಾರೆ. ಒಟ್ಟು 169 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
- ಉತ್ತಮ ಫಲಿತಾಂಶಕ್ಕೆ ಕಾರಣವಾದ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಉಪಾಧ್ಯಕ್ಷ ಬಿ.ಎ.ಇಂದೂಧರ, ಪ್ರಾಚಾರ್ಯ ಸತ್ಯನಾರಾಯಣ, ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದೆ.

ಎಸ್.ರೂಪಶ್ರೀ ಪದವಿಪೂರ್ವ ಕಾಲೇಜು: ಶೇ. 96.15 ಸಾಧನೆ
ಹೆಗ್ಗೋಡು-ಕೇಡಲಸರದ ಎಸ್.ರೂಪಶ್ರೀ ಕಾಲೇಜಿನ 52 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
-
ವಿಶೇಷತೆ: ಸಂಸ್ಕೃತ ಮತ್ತು ಗಣಕ ವಿಜ್ಞಾನದಲ್ಲಿ ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ.
-
ಟಾಪರ್‌ಗಳು: ವಾಣಿಜ್ಯ ವಿಭಾಗದಲ್ಲಿ ವೈಷ್ಣವಿ ಶರ್ಮ (568) ಹಾಗೂ ಕಲಾ ವಿಭಾಗದಲ್ಲಿ ಕಿರಣ್ ಕೆ.ಎಸ್. (562) ಪ್ರಥಮ ಸ್ಥಾನ ಪಡೆದಿದ್ದಾರೆ.
ಎಂಡಿಎಫ್ ಸ್ವತಂತ್ರ ವಿಜ್ಞಾನ ಕಾಲೇಜು: ಶೇ. 99 ಫಲಿತಾಂಶ
ಸಾಗರದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ (MDF) ಕಾಲೇಜು ಶೇ. 99ರಷ್ಟು ಅದ್ಭುತ ಫಲಿತಾಂಶ ದಾಖಲಿಸಿದೆ.
-
ಟಾಪರ್‌ಗಳು: ವಿಜ್ಞಾನ ವಿಭಾಗದಲ್ಲಿ ಅಲೀನಾ ಮ್ಯಾಥ್ಯೂ (ಶೇ. 96) ಹಾಗೂ ವಾಣಿಜ್ಯ ವಿಭಾಗದಲ್ಲಿ ಪರ್ಲ್ ಯಶ್ವಿನ ನಝರತ್ (584 ಅಂಕ) ಗರಿಷ್ಠ ಅಂಕ ಗಳಿಸಿದ್ದಾರೆ.
ಈ ಎಲ್ಲಾ ಕಾಲೇಜುಗಳ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಉಪನ್ಯಾಸಕ ವರ್ಗವು ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು….
ಖರ್ಗೆ ಪ್ರಚೋದನಾಕಾರಿ ಭಾಷಣ: ಸಾಗರದಲ್ಲಿ ಬಿಜೆಪಿ ವತಿಯಿಂದ ಡಿವೈಎಸ್‌ಪಿಗೆ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಕೆ
ಸಾಗರ ವಿಜ್ಞಾನ ವೇದಿಕೆಯಿಂದ ರಾಜ್ಯ ಮಟ್ಟದ ವಸತಿಸಹಿತ ವಿಜ್ಞಾನ ಬೇಸಿಗೆ ಶಿಬಿರ: ಏಪ್ರಿಲ್ 13ರಿಂದ ಚಾಲನೆ








