ಚಿಕ್ಕಮಗಳೂರು : ಚಿಕ್ಕಮಂಗಳೂರಿನ ಮಾಣಿಕ್ಯಧಾರ ಫಾಲ್ಸ್ ನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದ ಇಂದು 2 ಸಾವಿರ ಅಡಿ ಕೆಳಗೆ ಶವವಾಗಿ ಪತ್ತೆ ಆಗಿದ್ದಾಳೆ. ಇದೀಗ ಈ ಒಂದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಚಾರವಾಗಿ ತಂದೆ ಬೈದ್ಯಕ್ಕೆ ಶ್ರೀನಂದ ಆತ್ಮಹತ್ಯೆ ಮಾಡಿಕೊಂಡಳ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.
ಹೌದು ಇದೀಗ ಈ ಒಂದು ಸಾವಿನ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದೂ, ತಂದೆ ಬೈದಿದ್ದಕ್ಕೆ ಶ್ರೀ ನಂದ ಆತ್ಮಹತ್ಯೆ ಮಾಡಿಕೊಂಡಳ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಶ್ರೀನಂದಾಗೆ ಆಕೆಯ ತಂದೆ ಬೈದಿದ್ದರು. ಮೊಬೈಲ್ ಕೊಡುವಂತೆ ಮಗಳಿಗೆ ಸ್ವಲ್ಪ ಗದರಿದ್ದರು. ಮಾಣಿಕ್ಯಧಾರ ಬಳಿ ತಂದೆ ಶ್ರೀ ನಂದಾಗೆ ವಾರ್ನಿಂಗ್ ಮಾಡಿದ್ದರು.
ಆಗ ಫಾಲ್ಸ್ ಗೆ ತೆರಳದ ಶ್ರೀನಂದ ವಾಪಸ್ ಬಂದಿದಳು. ಹಾಗಾಗಿ ಮನನೊಂದು ಶ್ರೀ ನಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ಹಿರಿಯ ಅಧಿಕಾರಿಗಳ ಮುಂದೆ ತಂದೆ ರಮೇಶ್ ಹೇಳಿದ್ದರು. ಪಾರ್ಕಿಂಗ್ ಸ್ಥಳದಿಂದ ಜಿಗಿದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಸೊಕೋ ಟೀಮ್ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.








