ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಪ್ರಚಾರಕ್ಕೆ ಯಾರು ಬರಲಿ ಬಿಡಲಿ ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ದಾವಣಗೆರೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ನಿವಾಸಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 5 ರಂದು ಪ್ರಚಾರಕ್ಕೆ ಬರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು ಹಾಗಾಗಿ ಕೇರಳದಿಂದ ನೇರವಾಗಿ ನಾನು ಇಲ್ಲಿಗೆ ಬಂದಿದ್ದೇನೆ ಕೇರಳದಲ್ಲಿ ನನ್ನ ಸ್ಟಾರ್ ಕ್ಯಾಂಪಿನರ್ ಆಗಿ ಕಳುಹಿಸಿದ್ದರು..
ಹಾಗಾಗಿ ಕೇರಳದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಹೋಗಿದ್ದೆ. ಯಾವುದೇ ರೀತಿಯ ಮುನಿಸಿಲ್ಲ ನಾನು ಯಾವುದೇ ರೀತಿಯ ಕಂಡೀಶನ್ ಹಾಕಿಲ್ಲ. ನಮ್ಮದು ಹೈಕಮಾಂಡ್ ಪಕ್ಷ ಎಲ್ಲಾ ವರಿಷ್ಠರು ನಿರ್ಧರಿಸುತ್ತಾರೆ 2028ಕ್ಕೆ ನನಗೆ ಟಿಕೆಟ್ ನಿರ್ಧರಿಸುವುದು ಹೈಕಮಾಂಡ್. ಎಂದು ತಿಳಿಸಿದರು.








