ಹಾವೇರಿ : ಹಾವೇರಿ ವಿಶ್ವವಿದ್ಯಾಲಯದಿಂದ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಘೋಷಣೆ ಮಾಡಿತ್ತು ಆದರೆ ಇದೀಗ ಡಾಕ್ಟರೇಟ್ ಪದವಿ ಸ್ವೀಕರಿಸದಿರಲು ಸಂಸದ ಬಸವರಾಜ ಬೊಮ್ಮಾಯಿ ತೀರ್ಮಾನಿಸಿದ್ದಾರೆ. ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲ್ಲ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಬಹು ಮಾಹಿತಿ ತಿಳಿಸಿದ್ದಾರೆ.
ನಿನ್ನೆ ಹಾವೇರಿ ವಿಶ್ವವಿದ್ಯಾಲಯ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿತ್ತು. ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು, ಮಾಜಿ ಸಿಎಂ ಹಾಗೂ ಹಾಲಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿತ್ತು. ಆದರೆ ಇದೀಗ ಬಸವರಾಜ ಬೊಮ್ಮಾಯಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲ್ಲ ಎಂದು ಕುಲಪತಿಗಳಿಗೆ ಮಾಹಿತಿ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ ದಿವಂಗತ ಎಸ್.ಆರ್. ಬೊಮ್ಮಾಯಿ ಮತ್ತು ಗಂಗಮ್ಮ ದಂಪತಿಯ ಪುತ್ರ. ರಾಜಕಾರಣಿ, ಉದ್ಯಮಿಯಾಗಿರುವ ಬೊಮ್ಮಾಯಿ ಹಲವು ನೀರಾವರಿ ಯೋಜನೆಗಳ ರೂವಾರಿ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದ ಅವರು ಹಿಂತಿರುಗಿ ನೋಡಿಲ್ಲ. ಶಿಗ್ಗಾಂವ್ ತಾಲೂಕಿನ ಗೋಟಗೊಡಿಯಲ್ಲಿರುವ ಜಾನಪದ ವಿವಿ ಸ್ಥಾಪನೆಯ ಪ್ರಮುಖ ರೂವಾರಿಗಳಲ್ಲಿ ಬಸವರಾಜ ಬೊಮ್ಮಾಯಿ ಒಬ್ಬರು.
ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವರು ಮತ್ತು ಒಮ್ಮೆ ಸಿಎಂ ಆಗಿದ್ದ ಅವರು ಈಗ ಹಾವೇರಿ ಜಿಲ್ಲೆಯ ಸಂಸದ. ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ 9 ಹೊಸ ವಿವಿಗಳ ಸ್ಥಾಪನೆ ಮಾಡಿದರು. ಸದ್ಯ ಹಾವೇರಿ ಸಂಸದರಾಗಿರುವ ಅವರಿಗೆ ಹಾವೇರಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡುವ ಮೂಲಕ ಗೌರವಿಸಲು ಮುಂದಾಗಿದೆ. ಆದರೆ ಬೊಮ್ಮಾಯಿ ಡಾಕ್ಟರ್ ಪದವಿಯನ್ನು ನಿರಾಕರಿಸಿದ್ದಾರೆ.








