ವಿಜಯಪುರ : ಮಳೆಯಿಂದ ನೆನೆದಿದ್ದ ಮನೆಯ ಮೇಲ್ಚಾವಣಿ ಕುಸಿದು ಮಹಿಳೆ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಡುಗುಂದಿ ಪಟ್ಟಣದಲ್ಲಿ ಇಂದು ಮುಂಜಾನೆ ಈ ಒಂದು ದುರಂತ ನಡೆದಿದೆ. ಗೌರೀಶ್ವರ ದೇವಸ್ಥಾನ ಬೆಳೆಯ ನಿವಾಸಿ ಮಹದೇವಿ (55) ಸಾವನಪ್ಪಿದ್ದಾರೆ.
ಮೊನ್ನೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹಳೆಯ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ನೆನೆದಿತ್ತು. ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದಾಗ ಮೇಲ್ಚಾವಣಿ ಕುಸಿದು ಮಹದೇವಿ ಸಾವನಪ್ಪಿದ್ದಾರೆ. ಮನೆಯ ಹೊರಗಡೆ ಮಲಗಿದ್ದ ಪತಿ ಶಿವಾನಂದ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ.








