Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಗ್ಯಾಸ್ ದರ ಏರಿಕೆ ಬೆನ್ನಲ್ಲೇ ಊಟ, ತಿಂಡಿ ಬೆಲೆಯಲ್ಲಿ ಭಾರೀ ಹೆಚ್ಚಳ.!

03/04/2026 5:14 AM

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಏಪ್ರಿಲ್ 7 ಕ್ಕೆ `ದ್ವಿತೀಯ ಪಿಯುಸಿ’, ಏ.24ಕ್ಕೆ `SSLC’ ಫಲಿತಾಂಶ ಪ್ರಕಟ.!

03/04/2026 5:11 AM

ಪೋಸ್ಟ್ ಆಫೀಸ್ ಸೂಪರ್ ಹಿಟ್ ಸ್ಕೀಮ್: ತಿಂಗಳಿಗೆ ₹20,000 ಆದಾಯ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

03/04/2026 5:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಏಪ್ರಿಲ್ 7 ಕ್ಕೆ `ದ್ವಿತೀಯ ಪಿಯುಸಿ’, ಏ.24ಕ್ಕೆ `SSLC’ ಫಲಿತಾಂಶ ಪ್ರಕಟ.!
KARNATAKA

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಏಪ್ರಿಲ್ 7 ಕ್ಕೆ `ದ್ವಿತೀಯ ಪಿಯುಸಿ’, ಏ.24ಕ್ಕೆ `SSLC’ ಫಲಿತಾಂಶ ಪ್ರಕಟ.!

By kannadanewsnow5703/04/2026 5:11 AM

ಬೆಂಗಳೂರು: ರಾಜ್ಯಾದ್ಯಂತ ಕುತೂಹಲ ಮೂಡಿಸಿದ್ದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬುಧವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಫಲಿತಾಂಶ ಮತ್ತು ಮುಂದಿನ ಪರೀಕ್ಷೆಗಳ ಸಂಭಾವ್ಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್ 5 ರಿಂದ ಏಪ್ರಿಲ್ 20ರವರೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯಲಿದೆ.ಶಿಕ್ಷಣ ಇಲಾಖೆಯ ವೇಳಾಪಟ್ಟಿಯಂತೆ ಏಪ್ರಿಲ್ 24ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಲಿದೆ.

ಈ ಬಾರಿ ಸುಮಾರು 8.65 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಸುಮಾರು 8.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಶೇ. 2 ರಿಂದ 3 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ:
ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ಅಥವಾ ಅಂಕ ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಪರೀಕ್ಷೆ-2 ಅನ್ನು ಮೇ 18 ರಿಂದ ಮೇ 25ರವರೆಗೆ ನಡೆಸಲು ಮಂಡಳಿಯು ನಿರ್ಧರಿಸಿದೆ. ಈ ಪರೀಕ್ಷೆಯ ಫಲಿತಾಂಶವು ಜೂನ್ 1ರಂದು ಪ್ರಕಟವಾಗುವ ಸಾಧ್ಯತೆಯಿದೆ. ವಿಷಯವಾರು ಸವಿಸ್ತಾರವಾದ ವೇಳಾಪಟ್ಟಿಯನ್ನು ಮಂಡಳಿಯು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.

ಪಿಯುಸಿ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 7ರಂದು ಹೊರಬೀಳುವ ನಿರೀಕ್ಷೆಯಿದೆ.ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯಗೊಳ್ಳುವ ಸಮಯ ಹತ್ತಿರ ಬಂದಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವು ಏಪ್ರಿಲ್ 7 ರಂದು ಪ್ರಕಟವಾಗುವ ದಟ್ಟ ಸಾಧ್ಯತೆಗಳಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಮೌಲ್ಯಮಾಪನ ಪೂರ್ಣ: ಪರೀಕ್ಷೆಯ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಬಹುತೇಕ ಪೂರ್ಣಗೊಂಡಿದೆ.

ಪರೀಕ್ಷಾ ವಿವರ: ಈ ಬಾರಿ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 20 ರಿಂದಲೇ ಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು.

ವಿದ್ಯಾರ್ಥಿಗಳ ಸಂಖ್ಯೆ: ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.

ಶಿಕ್ಷಣ ಇಲಾಖೆಯು ಈಗಾಗಲೇ ಸಂಭಾವ್ಯ ದಿನಾಂಕವನ್ನು ಘೋಷಿಸಿದ್ದು, ಏಪ್ರಿಲ್ 7 ರಂದು ಅಧಿಕೃತವಾಗಿ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

Attention students of the state: Second PUC results to be announced on April 7 `SSLC' results on April 24!
Share. Facebook Twitter LinkedIn WhatsApp Email

Related Posts

ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಗ್ಯಾಸ್ ದರ ಏರಿಕೆ ಬೆನ್ನಲ್ಲೇ ಊಟ, ತಿಂಡಿ ಬೆಲೆಯಲ್ಲಿ ಭಾರೀ ಹೆಚ್ಚಳ.!

03/04/2026 5:14 AM1 Min Read

ಆಪತ್ಕಾಲಕ್ಕೆ ಆಸರೆಯಾಗಬಲ್ಲ ‘ಜೀವ ರಕ್ಷಕ’ ಕೌಶಲ್ಯಗಳು ಇವು : ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ ಮಾಹಿತಿ

03/04/2026 4:56 AM2 Mins Read

ALERT : ಕಲುಷಿತ ನೀರು ಕುಡಿದರೆ ಈ ಗಂಭೀರ ಕಾಯಿಲೆಗಳು ಬರಬಹುದು : ಸಾರ್ವಜನಿಕರಿಗೆ ಸರ್ಕಾರದಿಂದ ಮಹತ್ವದ ಪ್ರಕಟಣೆ

03/04/2026 4:40 AM1 Min Read
Recent News

ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಗ್ಯಾಸ್ ದರ ಏರಿಕೆ ಬೆನ್ನಲ್ಲೇ ಊಟ, ತಿಂಡಿ ಬೆಲೆಯಲ್ಲಿ ಭಾರೀ ಹೆಚ್ಚಳ.!

03/04/2026 5:14 AM

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಏಪ್ರಿಲ್ 7 ಕ್ಕೆ `ದ್ವಿತೀಯ ಪಿಯುಸಿ’, ಏ.24ಕ್ಕೆ `SSLC’ ಫಲಿತಾಂಶ ಪ್ರಕಟ.!

03/04/2026 5:11 AM

ಪೋಸ್ಟ್ ಆಫೀಸ್ ಸೂಪರ್ ಹಿಟ್ ಸ್ಕೀಮ್: ತಿಂಗಳಿಗೆ ₹20,000 ಆದಾಯ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

03/04/2026 5:05 AM

ಬೇಸಿಗೆಯ ಬಿಸಿಲಿಗೆ ಹಿತಕಾರಿ ‘ಸೌತೆಕಾಯಿ ತಂಬುಳಿ’: ಜಸ್ಟ್ ಐದೇ ನಿಮಿಷದಲ್ಲಿ ಹೀಗೆ ರೆಡಿ ಮಾಡಿ

03/04/2026 5:04 AM
State News
KARNATAKA

ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಗ್ಯಾಸ್ ದರ ಏರಿಕೆ ಬೆನ್ನಲ್ಲೇ ಊಟ, ತಿಂಡಿ ಬೆಲೆಯಲ್ಲಿ ಭಾರೀ ಹೆಚ್ಚಳ.!

By kannadanewsnow5703/04/2026 5:14 AM KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ಈಗ ಹೋಟೆಲ್ ಊಟ ‘ಬಿಸಿ’ ತುಪ್ಪವಾಗಿ ಪರಿಣಮಿಸಿದೆ. ವಾಣಿಜ್ಯ ಬಳಕೆಯ ಅಡುಗೆ ಅನಿಲದ ದರದಲ್ಲಿ…

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಏಪ್ರಿಲ್ 7 ಕ್ಕೆ `ದ್ವಿತೀಯ ಪಿಯುಸಿ’, ಏ.24ಕ್ಕೆ `SSLC’ ಫಲಿತಾಂಶ ಪ್ರಕಟ.!

03/04/2026 5:11 AM

ಆಪತ್ಕಾಲಕ್ಕೆ ಆಸರೆಯಾಗಬಲ್ಲ ‘ಜೀವ ರಕ್ಷಕ’ ಕೌಶಲ್ಯಗಳು ಇವು : ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ ಮಾಹಿತಿ

03/04/2026 4:56 AM

ALERT : ಕಲುಷಿತ ನೀರು ಕುಡಿದರೆ ಈ ಗಂಭೀರ ಕಾಯಿಲೆಗಳು ಬರಬಹುದು : ಸಾರ್ವಜನಿಕರಿಗೆ ಸರ್ಕಾರದಿಂದ ಮಹತ್ವದ ಪ್ರಕಟಣೆ

03/04/2026 4:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.