ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭಾರಿ ಪ್ರಮಾಣದ ನಕಲಿ ಸಿಗರೇಟ್‌ಗಳನ್ನು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಕಲಿ ಸಿಗರೇಟ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಯಾರು?: ಅಬ್ದುಲ್ ಬಷೀದ್ ಮತ್ತು ಆತನ ಮಗ ಮೊಹಮದ್ ಅಶೀಕ್ ಪ್ರಮುಖ ಆರೋಪಿಗಳಾಗಿದ್ದು, ಇವರೊಂದಿಗೆ ಮಹಮದ್ ಅನ್ಸರ್, ಮಹಮದ್ ಅನ್ಸಾರಿ ಮತ್ತು ಗುಲಾಮ್ ಹುಸೇನ್ ಖಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಆರೋಪಿಗಳು ವಿದೇಶಗಳಿಂದ ಐಟಿಸಿ (ITC) ಮತ್ತು ಎಸ್ಸೆ (Esse) ಕಂಪನಿಗಳ ಹೆಸರಿರುವ ನಕಲಿ ಸಿಗರೇಟ್‌ಗಳನ್ನು ಬೆಂಗಳೂರಿಗೆ ಅಕ್ರಮವಾಗಿ ತರುತ್ತಿದ್ದರು. ಇಲ್ಲಿ ಅವುಗಳನ್ನು ಅಸಲಿ ಕಂಪನಿಯ ಉತ್ಪನ್ನಗಳೆಂದು ಬಿಂಬಿಸಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.
ನಕಲಿ ಉತ್ಪನ್ನಗಳ ಬಗ್ಗೆ ನಿಗಾ ವಹಿಸುವ ‘ಅನ್ವೇಷ್ ಐಪಿಆರ್’ (Anvesh IPR) ಸಂಸ್ಥೆಯು ನೀಡಿದ ಖಚಿತ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವಿಮಾನ ನಿಲ್ದಾಣದಲ್ಲಿ ಈ ನಕಲಿ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಬಂಧಿತ ಐವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ದಳಪತಿ ವಿಜಯ್ 600 ಕೋಟಿ ಸಾಮ್ರಾಜ್ಯದ ಒಡೆಯ: ಹೀಗಿದೆ ಟಿವಿಕೆ ಮುಖ್ಯಸ್ಥ ಘೋಷಿಸಿದ ಆಸ್ತಿ ವಿವರ ಇಲ್ಲಿದೆ! Actor Vijay
BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಅಂಕೋಲದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಆಪ್ತನ ಮೇಲೆ ಹತ್ಯೆ ಯತ್ನ








