ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಇರಾನ್‌ನ ಪ್ರಮುಖ ಸರ್ಕಾರಿ ಸ್ವಾಮ್ಯದ ಪತ್ರಿಕೆಯೊಂದು ಅಮೆರಿಕದ ಸೈನಿಕರಿಗೆ ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದೆ. “ಒಂದು ವೇಳೆ ನೀವು ದಾಳಿ ಮುಂದುವರಿಸಿದರೆ, ಅಮೆರಿಕದ ಸೈನಿಕರು ಇಲ್ಲಿಂದ ಶವಪೆಟ್ಟಿಗೆಗಳಲ್ಲಿ (Coffins) ಮಾತ್ರ ಮರಳಲಿದ್ದಾರೆ” ಎಂದು ಪತ್ರಿಕೆ ತನ್ನ ಮುಖಪುಟದಲ್ಲಿ ಎಚ್ಚರಿಸಿದೆ.
ಇರಾನ್‌ನ ಪತ್ರಿಕೆಯು ತನ್ನ ಮುಖಪುಟದಲ್ಲಿ ‘ವೆಲ್ಕಮ್ ಟು ಹೆಲ್’ (ನರಕಕ್ಕೆ ಸ್ವಾಗತ) ಎಂಬ ದೊಡ್ಡ ಅಕ್ಷರಗಳ ಶೀರ್ಷಿಕೆಯನ್ನು ಪ್ರಕಟಿಸುವ ಮೂಲಕ ಅಮೆರಿಕದ ವಿರುದ್ಧ ತನ್ನ ಆಕ್ರೋಶ ಹೊರಹಾಕಿದೆ.ಅಮೆರಿಕವು ಈ ಭಾಗದಲ್ಲಿ ತನ್ನ ಮಿಲಿಟರಿ ಹಸ್ತಕ್ಷೇಪವನ್ನು ಮುಂದುವರಿಸಿದರೆ ಅಥವಾ ಇರಾನ್ ಮೇಲೆ ದಾಳಿ ಮಾಡಲು ಮುಂದಾದರೆ, ಅದರ ಸೈನಿಕರು ಜೀವಂತವಾಗಿ ಮನೆಗೆ ಮರಳಲು ಸಾಧ್ಯವಿಲ್ಲ ಎಂದು ಲೇಖನದಲ್ಲಿ ವಿವರಿಸಲಾಗಿದೆ.
ಈ ಎಚ್ಚರಿಕೆಯು ಇತ್ತೀಚೆಗೆ ನಡೆದ ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ಅದರಲ್ಲಿ ಅಮೆರಿಕದ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಹೊರಬಿದ್ದಿದೆ. ಇರಾನ್ ಬೆಂಬಲಿತ ಗುಂಪುಗಳು ಮತ್ತು ಅಮೆರಿಕದ ಪಡೆಗಳ ನಡುವೆ ಈ ಭಾಗದಲ್ಲಿ ಪದೇ ಪದೇ ಘರ್ಷಣೆಗಳು ನಡೆಯುತ್ತಿವೆ. ಇರಾನ್‌ನ ಈ ಮಾಧ್ಯಮ ದಾಳಿಯನ್ನು ಜಾಗತಿಕ ರಾಜತಾಂತ್ರಿಕರು ಅಮೆರಿಕದ ಮೇಲೆ ಮಾನಸಿಕ ಒತ್ತಡ ಹೇರುವ ತಂತ್ರ ಎಂದು ವಿಶ್ಲೇಷಿಸುತ್ತಿದ್ದಾರೆ.








