Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ‘SSLC ಫಲಿತಾಂಶ’ದಲ್ಲಿ ‘ಹಿಂದಿ’ಯನ್ನು ಪರಿಗಣಿಸದಿರಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ

28/03/2026 6:18 PM

ಉತ್ತರ ಕರ್ನಾಟಕದ ಅಭಿವೃದ್ಧಿ: ಅರವಿಂದ ಬೆಲ್ಲದಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು

28/03/2026 6:07 PM

BIGG NEWS : ‘ಸ್ನೇಹಿತ’ ಭಾರತದ 2 ‘LPG ಟ್ಯಾಂಕರ್’ಗಳಿಗೆ ಹಾರ್ಮುಜ್ ಜಲಸಂಧಿ ದಾಟಲು ಇರಾನ್ ಅನುಮತಿ

28/03/2026 6:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉತ್ತರ ಕರ್ನಾಟಕದ ಅಭಿವೃದ್ಧಿ: ಅರವಿಂದ ಬೆಲ್ಲದಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು
KARNATAKA

ಉತ್ತರ ಕರ್ನಾಟಕದ ಅಭಿವೃದ್ಧಿ: ಅರವಿಂದ ಬೆಲ್ಲದಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು

By kannadanewsnow0928/03/2026 6:07 PM

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆ, ನೀರಾವರಿ ಸೌಲಭ್ಯ ಮತ್ತು ಉತ್ಕೃಷ್ಟ ಸಂಸ್ಥೆಗಳ ಸ್ಥಾಪನೆ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರಕಾರವು ತಾರತಮ್ಯ ಮಾಡುತ್ತಿದೆ. ರಾಜ್ಯಕ್ಕೆ ಬರುತ್ತಿರುವ ಸೆಮಿಕಂಡಕ್ಟರ್ ಯೋಜನಾ ಪ್ರಸ್ತಾವನೆಗಳಿಗೆ ಅದು ಆದ್ಯತೆಯ ಮೇರೆಗೆ ಒಪ್ಪಿಗೆ ಕೊಡುತ್ತಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಅರವಿಂದ ಬೆಲ್ಲದ ಅವರು ಈ ಸಂಬಂಧ ಗಮನ ಹರಿಸಿದರೆ ಅದಕ್ಕೆ ನಮ್ಮ ಸಹಕಾರವೂ ಇರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಈ ಸಂಬಂಧ ವಿರೋಧ ಪಕ್ಷದ ಉಪನಾಯಕ ಬೆಲ್ಲದ ಅವರು ಮಾಡಿರುವ ‘ಎಕ್ಸ್’ ಪೋಸ್ಟಿಗೆ ಅವರು ಈ ಉತ್ತರ ನೀಡಿದ್ದಾರೆ.

ಬೆಲ್ಲದ ತಮ್ಮ ಪೋಸ್ಟ್‌ನಲ್ಲಿ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ನಾವು ಅದೇ ಹಳೆಯ ಕತೆಗಳನ್ನು ಕೇಳುತ್ತಿದ್ದೇವೆ. ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಲಿ ಸ್ಥಾಪಿಸಿತ್ತು. ಈಗಿನ ಸರಕಾರ ಇದನ್ನು ಸಕ್ರಿಯಗೊಳಿಸಿ, ಅಗತ್ಯ ಅನುದಾನ ನೀಡಬೇಕು. ಈ ಭಾಗದ ಅಭಿವೃದ್ಧಿಗೆ ನೀರಾವರಿ ಸೌಲಭ್ಯ ವಿಸ್ತರಣೆ, ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಮತ್ತು ಕೈಗಾರಿಕಾ ಬೆಳವಣಿಗೆ ಅಗತ್ಯವೆಂದು ಹೇಳಿದ್ದರು.

ಇದಕ್ಕೆ ಉತ್ತರಿಸಿರುವ ಸಚಿವರು, ರಾಜ್ಯದಲ್ಲಿ 59 ಅತೀ ಹಿಂದುಳಿದ ತಾಲ್ಲೂಕುಗಳಿದ್ದು, ಇಷ್ಟೂ ತಾಲ್ಲೂಕುಗಳು ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲೇ ಇರುವುದು ವಾಸ್ತವವಾಗಿದೆ. ಇಲ್ಲೆಲ್ಲ ನೀರಾವರಿ ಸೌಲಭ್ಯ ಒದಗಿಸಲು ಎಲ್ಲ ಸರಕಾರಗಳೂ ಪ್ರಯತ್ನಿಸಿವೆ. ಹಾಗೆಯೇ ಉತ್ತರ ಕರ್ನಾಟಕದಲ್ಲಿ ಕೂಡ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಇನ್ನೂ ಹೆಚ್ಚಿನ ಸಂಸ್ಥೆಗಳಿಗೆ ಅವಕಾಶವಿದೆ. ಸರಕಾರವು ಅತೀ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಕೈಗಾರಿಕೆಗಳ ವಿಚಾರದಲ್ಲಿ ರಾಜ್ಯ ಸರಕಾರವು ಮೂಲಸೌಕರ್ಯ, ಭೂಮಿ, ವಿಶೇಷ ಭತ್ಯೆಗಳು, ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲಗಳನ್ನೆಲ್ಲ ಒದಗಿಸಲು ಸಿದ್ಧವಿದೆ. ಆದರೆ ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರವು ರಾಜ್ಯದಲ್ಲೂ ಒಂದಷ್ಟು ಕಂಪನಿಗಳನ್ನು ಕಾರ್ಯಾರಂಭ ಮಾಡಿಸಲು ಆಸಕ್ತಿ ವಹಿಸಬೇಕು.

ಕರ್ನಾಟಕ ಬಿಟ್ಟು ಬೇರೆಬೇರೆ ರಾಜ್ಯಗಳ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡುತ್ತಿರುವ ಕೇಂದ್ರ ಸರಕಾರವು ಕರ್ನಾಟಕದ ಕಡೆಗೂ ಗಮನ‌ ನೀಡಬೇಕು. ಇಡೀ ದೇಶದಲ್ಲೇ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ನಮ್ಮ ರಾಜ್ಯಕ್ಕೆ ಇದರಿಂದ ತೀವ್ರ ಅನ್ಯಾಯವಾಗುತ್ತಿದೆ. ಬೆಲ್ಲದ ಅವರು ಇದರ ಬಗ್ಗೆಯೂ ದನಿ ಎತ್ತಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಸಂಬಂಧವಾಗಿ ಬೆಲ್ಲದ ಅವರು ತಮ್ಮ ಪಕ್ಷದ ಸಂಸದರ ಮತ್ತು ಹಿರಿಯ ನಾಯಕರ ನಿಯೋಗವನ್ನು ದೆಹಲಿಗೆ ಕೊಂಡೊಯ್ದು, ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲಾದರೂ ಸೆಮಿಕಂಡಕ್ಟರ್ ಉದ್ಯಮ ಬರಲು ಸಹಕರಿಸಬೇಕು. ಇದಕ್ಕೆ ನಾವು ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಪಾಟೀಲ ವಿವರಿಸಿದ್ದಾರೆ.

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್‌’ಗೆ ಸರ್ಕಾರ ಬ್ರೇಕ್: 60 ದಿನಗಳಲ್ಲಿ ಮಾಹಿತಿ ನೀಡದಿದ್ದರೆ ಕಠಿಣ ಕ್ರಮದ ಎಚ್ಚರಿಕೆ!

ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಕರೆದ ಪ್ರೊಫೆಸರ್ : ವಿಡಿಯೋ ವೈರಲ್ | WATCH VIDEO

Share. Facebook Twitter LinkedIn WhatsApp Email

Related Posts

BREAKING: ‘SSLC ಫಲಿತಾಂಶ’ದಲ್ಲಿ ‘ಹಿಂದಿ’ಯನ್ನು ಪರಿಗಣಿಸದಿರಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ

28/03/2026 6:18 PM2 Mins Read

ಹೀಗೆ ರಾಮ ಸ್ಮರಣೆ ಮಾಡಿದ್ರೆ ನಿಮ್ಮ ಕಷ್ಟಗಳು ನಿವಾರಣೆ

28/03/2026 5:58 PM2 Mins Read

ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ

28/03/2026 5:54 PM3 Mins Read
Recent News

BREAKING: ‘SSLC ಫಲಿತಾಂಶ’ದಲ್ಲಿ ‘ಹಿಂದಿ’ಯನ್ನು ಪರಿಗಣಿಸದಿರಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ

28/03/2026 6:18 PM

ಉತ್ತರ ಕರ್ನಾಟಕದ ಅಭಿವೃದ್ಧಿ: ಅರವಿಂದ ಬೆಲ್ಲದಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು

28/03/2026 6:07 PM

BIGG NEWS : ‘ಸ್ನೇಹಿತ’ ಭಾರತದ 2 ‘LPG ಟ್ಯಾಂಕರ್’ಗಳಿಗೆ ಹಾರ್ಮುಜ್ ಜಲಸಂಧಿ ದಾಟಲು ಇರಾನ್ ಅನುಮತಿ

28/03/2026 6:04 PM

ಹೀಗೆ ರಾಮ ಸ್ಮರಣೆ ಮಾಡಿದ್ರೆ ನಿಮ್ಮ ಕಷ್ಟಗಳು ನಿವಾರಣೆ

28/03/2026 5:58 PM
State News
KARNATAKA

BREAKING: ‘SSLC ಫಲಿತಾಂಶ’ದಲ್ಲಿ ‘ಹಿಂದಿ’ಯನ್ನು ಪರಿಗಣಿಸದಿರಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ

By kannadanewsnow0928/03/2026 6:18 PM KARNATAKA 2 Mins Read

ಮೈಸೂರು : ಈ ವರ್ಷದಿಂದಲೇ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿರುವುದಾಗಿ…

ಉತ್ತರ ಕರ್ನಾಟಕದ ಅಭಿವೃದ್ಧಿ: ಅರವಿಂದ ಬೆಲ್ಲದಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು

28/03/2026 6:07 PM

ಹೀಗೆ ರಾಮ ಸ್ಮರಣೆ ಮಾಡಿದ್ರೆ ನಿಮ್ಮ ಕಷ್ಟಗಳು ನಿವಾರಣೆ

28/03/2026 5:58 PM

ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ

28/03/2026 5:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.